Site icon Vistara News

Jharkhand shocker: 7 ಮಂದಿಯಿಂದ ಬರ್ಬರ ಅತ್ಯಾಚಾರಕ್ಕೀಡಾದ ಸ್ಪೇನ್‌ನ ಮಹಿಳೆ ಭಾರತದ ಬಗ್ಗೆ ಹೇಳಿದ್ದೇನು?

Physical abuse to girl

Woman Jailed For 40 Years For Letting Lover Rape Her Minor Daughter

ದುಮ್ಕಾ: ಜಾರ್ಖಂಡ್‌ನ ದುಮ್ಕಾದಲ್ಲಿ ಸ್ಪ್ಯಾನಿಷ್ ಟ್ರಾವೆಲ್ ವ್ಲಾಗರ್‌ (Spanish travel vlogger) ಒಬ್ಬಾಕೆಯ ಮೇಲೆ ಏಳು ಮಂದಿ ಪಾತಕಿಗಳು ಮಾರ್ಚ್‌ 1ರಂದು ಸಾಮೂಹಿಕ ಅತ್ಯಾಚಾರವೆಸಗಿದ್ದು (physical abuse), ಘಟನೆಯ ಆಘಾತಕಾರಿ ವಿವರಗಳು (Jharkhand shocker) ಈಗ ಹೊರಹೊಮ್ಮುತ್ತಿವೆ. ಎರಡೂವರೆ ಗಂಟೆಗಳ ಕಾಲ ಈ ಹೇಯ ಕೃತ್ಯವನ್ನು ಎದುರಿಸಿದ ಮಹಿಳೆಗೆ ಈ ಪಾಪಿಗಳು ಕಠಾರಿ ತೋರಿಸಿ ಕೊಲೆ ಬೆದರಿಕೆ (murder threat) ಹಾಕಿದ್ದಲ್ಲದೆ, ಒದ್ದು, ಹೊಡೆದು ನಂತರ ಅತ್ಯಾಚಾರವೆಸಗಿದ್ದಾರೆ ಎಂದು ಗೊತ್ತಾಗಿದೆ.

ದುಮ್ಕಾದಲ್ಲಿ ನಡೆದ ಈ ಅತ್ಯಾಚಾರ ಪ್ರಕರಣದ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದುವರೆಗೆ ಎಂಟು ಜನರನ್ನು ಬಂಧಿಸಲಾಗಿದೆ. ರಾಜ್ಯ ರಾಜಧಾನಿ ರಾಂಚಿಯಿಂದ 300 ಕಿಮೀ ದೂರದಲ್ಲಿರುವ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್‌ನಲ್ಲಿ 28 ವರ್ಷದ ಮಹಿಳೆ ತನ್ನ ಪತಿಯೊಂದಿಗೆ ಟೆಂಟ್‌ನಲ್ಲಿ ರಾತ್ರಿ ಕಳೆಯುತ್ತಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು.

ಮಾರ್ಚ್ 2ರಂದು ಮುಂಜಾನೆ 2.05ಕ್ಕೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯ ಹೇಳಿಕೆಯನ್ನು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 376D (ಗ್ಯಾಂಗ್‌ರೇಪ್) ಮತ್ತು 395 (ಡಕಾಯಿತಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನ ಪ್ರಕಾರ, ಮೊದಲಿಗೆ ಮೂವರು ದುಷ್ಕರ್ಮಿಗಳು ಆಗಮಿಸಿ ಸಂತ್ರಸ್ತೆಯ ಪತಿಯೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ನಂತರ ಅವರ ಮೇಲೆ ಹಲ್ಲೆ ನಡೆಸಿ ಕೈಗಳನ್ನು ಕಟ್ಟಿಹಾಕಿದರು.

“ನನಗೆ ಕಠಾರಿ ತೋರಿಸಿದ ನಂತರ ನಾಲ್ವರು ತನ್ನನ್ನು ಬಲವಂತವಾಗಿ ಎತ್ತಿಕೊಂಡು ಹೋದರು. ಎಲ್ಲಾ ಏಳು ಪುರುಷರು ತನ್ನನ್ನು ನೆಲದ ಮೇಲೆ ಎಸೆದರು. ಒದೆದರು, ಗುದ್ದಿದರು ಮತ್ತು ಪದೇ ಪದೆ ಅತ್ಯಾಚಾರ ಎಸಗಿದರು. ಎಲ್ಲರೂ ಮದ್ಯಪಾನ ಮಾಡಿದಂತೆ ತೋರುತ್ತಿತ್ತು. ಈ ಘಟನೆ ಸುಮಾರು ರಾತ್ರಿ 7.30ರಿಂದ ರಾತ್ರಿ 10 ಗಂಟೆಯವರೆಗೆ ನಡೆದಿದೆ” ಎಂದು ಎಫ್‌ಐಆರ್‌ನಲ್ಲಿ ಆಕೆ ತಿಳಿಸಿದ್ದಾರೆ.

“ನಮ್ಮ ಪ್ರಯಾಣದ ಹಾದಿಯಲ್ಲಿ ನಾವು ಕುಮ್ರಾಹತ್ ಹಳ್ಳಿಯನ್ನು ತಲುಪಿದೆವು. ಸಾಕಷ್ಟು ತಡವಾಗಿದ್ದರಿಂದ, ಹತ್ತಿರದ ಕಾಡಿನ ರಸ್ತೆಯಲ್ಲಿ ರಾತ್ರಿ ತಂಗಲು ನಮ್ಮ ತಾತ್ಕಾಲಿಕ ತಾತ್ಕಾಲಿಕ ಟೆಂಟ್ ಅನ್ನು ಹೂಡಿದೆವು. ಸುಮಾರು 7 ಗಂಟೆಗೆ, ನಾವು ನಮ್ಮ ಟೆಂಟ್‌ನೊಳಗೆ ಇದ್ದಾಗ, ಕೆಲವು ಅನುಮಾನಾಸ್ಪದ ಧ್ವನಿಗಳನ್ನು ಕೇಳಿದೆವು. ಟೆಂಟ್‌ನಿಂದ ಹೊರಬಂದ ತಕ್ಷಣ ಇಬ್ಬರು ಫೋನ್‌ನಲ್ಲಿ ಮಾತನಾಡುತ್ತಿರುವುದು ನಮಗೆ ಕಾಣಿಸಿತು. ರಾತ್ರಿ 7.30ರ ಸುಮಾರಿಗೆ ಎರಡು ದ್ವಿಚಕ್ರವಾಹನಗಳಲ್ಲಿ ಕೆಲವರು ಬಂದರು. ಟೆಂಟ್‌ನಿಂದ ಹೊರಗೆ ಕರೆದರು. ನಾವು ನಮ್ಮ ಟೆಂಟ್‌ನಿಂದ ಹೊರಬಂದೆವು. ಐದು ಜನ ನಮ್ಮ ಕಡೆಗೆ ಧಾವಿಸುತ್ತಿರುವುದನ್ನು ನೋಡಿದೆವು. ಅವರು ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಿದ್ದರು ಮತ್ತು ನಡುವೆ ಕೆಲವು ಇಂಗ್ಲಿಷ್ ಪದಗಳನ್ನು ಬಳಸುತ್ತಿದ್ದರು” ಎಂದು ಎಫ್‌ಐಆರ್ ಉಲ್ಲೇಖಿಸಿದೆ.

ಆರೋಪಿಗಳು ಸಂತ್ರಸ್ತೆಯ ಬಳಿಯಿಂದ ಸ್ವಿಸ್ ಚಾಕು, ಕೈ ಗಡಿಯಾರ, ವಜ್ರದ ಉಂಗುರ, ಬೆಳ್ಳಿ ಉಂಗುರ, ಕಪ್ಪು ಇಯರ್‌ಪಾಡ್‌ಗಳು, ಕಪ್ಪು ಪರ್ಸ್, ಕ್ರೆಡಿಟ್ ಕಾರ್ಡ್, ಸುಮಾರು ₹11,000, 300 ಅಮೆರಿಕನ್ ಡಾಲರ್, ಸ್ಟೀಲ್ ಚಮಚ ಮತ್ತು ಫೋರ್ಕ್ ಅನ್ನು ಕೂಡ ದೋಚಿದ್ದಾರೆ.

“ಭಾರತದ ಜನರು ನನ್ನನ್ನು ಚೆನ್ನಾಗಿ ನಡೆಸಿಕೊಂಡರು”

ಅತ್ಯಾಚಾರಕ್ಕೀಡಾದ ಮಹಿಳೆ ಭಾರತ ಬಗೆಗೆ ಮಾತ್ರ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಯುವ ದಂಪತಿ ತಮ್ಮ ಮೋಟಾರು ಸೈಕಲ್‌ಗಳಲ್ಲಿ ಬಿಹಾರ ಮೂಲಕ ನೇಪಾಳಕ್ಕೆ ತೆರಳಿದ್ದಾರೆ. ತೆರಳುವ ಮುನ್ನ, ತಮ್ಮ ವಿಶ್ವ ಪ್ರವಾಸವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ʼದೇಶದಾದ್ಯಂತ ಸುಮಾರು 20,000 ಕಿಮೀ ಸುರಕ್ಷಿತವಾಗಿ ಪ್ರಯಾಣಿಸಿದ್ದೇವೆ, ಭಾರತದ ಜನರ ವಿರುದ್ಧ ತನಗೆ ಯಾವುದೇ ದೂರುಗಳಿಲ್ಲʼ ಎಂದಿದ್ದಾರೆ.

“ಭಾರತದ ಜನರು ಒಳ್ಳೆಯವರು. ನಾನು ಇಲ್ಲಿನ ಜನರನ್ನು ದೂಷಿಸುವುದಿಲ್ಲ. ಆದರೆ ನಾನು ಅಪರಾಧಿಗಳನ್ನು ದೂಷಿಸುತ್ತೇನೆ. ಭಾರತದ ಜನರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ ಮತ್ತು ನನ್ನೊಂದಿಗೆ ತುಂಬಾ ಕರುಣಾಮಯಿಗಳಾಗಿದ್ದಾರೆ. ನಾವು ರಾತ್ರಿ ತಂಗಲು ಶಾಂತ ಮತ್ತು ಸುಂದರ ಸ್ಥಳವನ್ನು ಆರಿಸಿಕೊಂಡಿದ್ದೆವು. ನಾವು ಅಲ್ಲಿ ಒಂಟಿಯಾಗಿದ್ದರೆ ಪರವಾಗಿಲ್ಲ ಎಂದು ಭಾವಿಸಿದ್ದೆವು” ಎಂದಿದ್ದಾರೆ.

“ನಾವು ಆರೇಳು ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರಯಾಣ ಮಾಡುತ್ತಿದ್ದೇವೆ. ಕಳೆದ ಆರು ತಿಂಗಳಿಂದ ಭಾರತದಲ್ಲಿದ್ದು, ಸುಮಾರು 20,000 ಕಿ.ಮೀ ಪ್ರಯಾಣಿಸಿದ್ದೇವೆ. ನಮಗೆ ಎಲ್ಲಿಯೂ ಯಾವುದೇ ತೊಂದರೆಯಾಗಿಲ್ಲ. ಇಂಥದು ಮೊದಲ ಬಾರಿಗೆ ಸಂಭವಿಸಿದೆ. ಇದು ಹೊರತುಪಡಿಸಿದರೆ ನನಗೆ ಭಾರತದಲ್ಲಿ ಉತ್ತಮ ನೆನಪುಗಳಿವೆ. ಪತಿಯೊಂದಿಗೆ ಪ್ರವಾಸವನ್ನು ಮುಂದುವರಿಸುತ್ತೇನೆ” ಎಂದು ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: Jharkhand shocker: ಪ್ರವಾಸಕ್ಕೆ ಬಂದ ಸ್ಪೇನ್‌ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 10 ಕಿರಾತಕರು

Exit mobile version