Site icon Vistara News

Pak Propaganda: ಪಾಕ್‌ ಭಿಕಾರಿ; ವಿಶ್ವಸಂಸ್ಥೆಯಲ್ಲಿ ಬಣ್ಣ ಬಯಲು ಮಾಡಿದ ಕಾಶ್ಮೀರದ ದಿಟ್ಟೆ!

Tasleema Akhtar At UNHRC Session

Kashmiri female activist Tasleema Akhtar busts Pakistan’s propaganda on Kashmir at UNHRC

ಜಿನೀವಾ: ಜಮ್ಮು-ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಜಾಗತಿಕ ವೇದಿಕೆಗಳಲ್ಲಿ ಮೂಗು ತೂರಿಸುವುದು, ಉದ್ಧಟತನ ಮಾಡುವುದು ಪಾಕಿಸ್ತಾನಕ್ಕೆ ಚಾಳಿಯೇ ಆಗಿದೆ. ಆದರೆ, ಅದೇ ಜಾಗತಿಕ ವೇದಿಕೆಗಳಲ್ಲಿ ತಿರುಗೇಟು ನೀಡುವ ಮೂಲಕ ಭಾರತವು ಪಾಕಿಸ್ತಾನವನ್ನು (Pak Propaganda) ಸುಮ್ಮನಾಗಿಸುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಜಮ್ಮು-ಕಾಶ್ಮೀರದ (Jammu Kashmir) ರಾಜಕೀಯ-ಸಾಮಾಜಿಕ ಕಾರ್ಯಕರ್ತೆಯಾದ ತಸ್ಲೀಮಾ ಅಖ್ತರ್‌ (Tasleema Akhtar) ಅವರು ವಿಶ್ವಸಂಸ್ಥೆಯಲ್ಲಿಯೇ ಪಾಕಿಸ್ತಾನದ ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ.

ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮಿತಿಯ 54ನೇ ಅಧಿವೇಶನ ಉದ್ದೇಶಿಸಿ ಮಾತನಾಡಿದ ತಸ್ಲೀಮಾ ಅಖ್ತರ್‌, ಪಾಕಿಸ್ತಾನದ ಬಣ್ಣ ಬಯಲು ಮಾಡಿದರು. “ಜಮ್ಮು-ಕಾಶ್ಮೀರದಲ್ಲಿ ಭಾರತ ಸರ್ಕಾರವು ಜನರ ಕಲ್ಯಾಣದಲ್ಲಿ ತೊಡಗಿದೆ. ಮನುಕುಲದ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುತ್ತಿದೆ. ಮತ್ತೊಂದೆಡೆ, ಪಾಕ್‌ ಆಕ್ರಮಿತ ಜಮ್ಮು-ಕಾಶ್ಮೀರದಲ್ಲಿ (PoJK) ಪಾಕಿಸ್ತಾನ ಸರ್ಕಾರವು ಜನರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನೂ ನೀಡುತ್ತಿಲ್ಲ. ಅಷ್ಟೇ ಏಕೆ, ಮಾನವ ಹಕ್ಕುಗಳನ್ನು ಕೂಡ ದಮನ ಮಾಡಲಾಗಿದೆ” ಎಂದು ಹೇಳಿದರು.

ಪಿಒಜೆಕೆಯಲ್ಲಿ ಕುಡಿಯಲೂ ನೀರಿಲ್ಲ

“ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರವು ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಮೂಲ ಸೌಕರ್ಯ ಒದಗಿಸುವ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಆದರೆ, ಪಿಒಜೆಕೆಯಲ್ಲಿ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲ. ಕನಿಷ್ಠ ಹಣಕಾಸು ಗುರಿಯನ್ನು ಮುಟ್ಟಲು ಕೂಡ ಪಾಕಿಸ್ತಾನಕ್ಕೆ ಅಗುತ್ತಿಲ್ಲ. ಇದೇ ಕಾರಣಕ್ಕಾಗಿ ಪಿಒಜೆಕೆಗಿಂತ ಜಮ್ಮು-ಕಾಶ್ಮೀರದಲ್ಲಿ ಶಿಕ್ಷಣದ ಗುಣಮಟ್ಟ 9 ಪಟ್ಟು ಜಾಸ್ತಿ ಇದೆ. ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ, ಶಾಲೆಗಳ ಚಾವಣಿ, ಶುದ್ಧ ಕುಡಿಯುವ ನೀರು ಸೇರಿ ಯಾವುದೇ ಸೌಕರ್ಯಗಳನ್ನು ಒದಗಿಸಲು ಕೂಡ ಪಾಕ್‌ ಸರ್ಕಾರಕ್ಕೆ ಆಗುತ್ತಿಲ್ಲ” ಎಂದು ವಾಸ್ತವ ತೆರೆದಿಟ್ಟರು.

ಇದನ್ನೂ ಓದಿ: Terrorists Killed: ಕಾಶ್ಮೀರದಲ್ಲಿ ಈ ವರ್ಷ 31 ಉಗ್ರರ ಹತ್ಯೆಗೈದ ಸೇನೆ; ಲಿಸ್ಟ್‌ನಲ್ಲಿ ಇನ್ನೆಷ್ಟು ಉಗ್ರರಿದ್ದಾರೆ?

ಕೆಲ ದಿನಗಳ ಹಿಂದಷ್ಟೇ ನಡೆದ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (UNGA) 78ನೇ ಅಧಿವೇಶನದಲ್ಲಿ ಪಾಕಿಸ್ತಾನ ಹಂಗಾಮಿ ಪ್ರಧಾನಿ ಅನ್ವರ್‌ ಉಲ್‌ ಹಕ್‌ ಕಾಕರ್‌ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಪಿಸಿದ್ದರು. “ಭಾರತ ಹಾಗೂ ಪಾಕಿಸ್ತಾನದಲ್ಲಿ ಶಾಂತಿ ನೆಲೆಸಲು ಜಮ್ಮು-ಕಾಶ್ಮೀರವೇ ನಿರ್ಣಾಯಕವಾಗಿದೆ. ಇದರಿಂದ ಉಭಯ ದೇಶಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಹಾಗೆಯೇ, ಜಮ್ಮು-ಕಾಶ್ಮೀರದಲ್ಲಿ ವಿಶ್ವಸಂಸ್ಥೆ ಮಿಲಿಟರಿ ಮೇಲ್ವಿಚಾರಣಾ ತಂಡವನ್ನು ನಿಯೋಜಿಸಬೇಕು. ಹಾಗೆಯೇ, ಭಾರತ ಹಾಗೂ ಪಾಕಿಸ್ತಾನ ಮಾತುಕತೆಗೆ ಸಂಬಂಧಿಸಿದಂತೆ ಜಗತ್ತಿನ ರಾಷ್ಟ್ರಗಳು ಭಾರತಕ್ಕೆ ಮನವರಿಕೆ ಮಾಡಬೇಕು” ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಭಾರತ, “ಪಾಕಿಸ್ತಾವು ಜಮ್ಮು-ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ” ಎಂದಿತ್ತು.

Exit mobile version