Site icon Vistara News

ಮಿನಿ ಕೂಪರ್ ಖರೀದಿಸಿದ ಕೇರಳದ ನಾಯಕನನ್ನು ಮನೆಗೇ ಕಳುಹಿಸಿದ ಕಮ್ಯುನಿಸ್ಟ್ ಪಕ್ಷ!

Kerala Communist leader bought mini cooper and he drop off from CPIM Post

ನವದೆಹಲಿ: ಎಡ ಪಕ್ಷಗಳು (Left Party) ಕಾಲಕ್ಕೆ ತಕ್ಕಂತೆ ತಮ್ಮ ನೀತಿಗಳು, ಕಾರ್ಯ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದ್ದರಿಂದ ಭಾರತದಲ್ಲಿ (India) ಅವರು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತಿವೆ. ಎಡ ಪಕ್ಷಗಳು ಅನುಸರಿಸುವ ಕಠಿಣ ನಿಯಮಗಳು ಹೇಗೆ ಕುತ್ತಾಗುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ಕೇರಳದ (Kerala) ಕಮ್ಯುನಿಸ್ಟ್ ಟ್ರೇಡ್ ಯೂನಿಯನ್ ನಾಯಕ ಪಿಕೆ ಅನಿಲ್ ಕುಮಾರ್ (communist leader PK Anil Kumar) ಅವರು ಐಷಾರಾಮಿ ಮಿನಿ ಕೂಪರ್ ಕಾರ್ (Mini Cooper Car) ಖರೀದಿಸಿದ್ದರು. ಈ ಕಾರ್ ಬೆಲೆ ಅಂದಾಜು 50 ಲಕ್ಷ ರೂಪಾಯಿ. ಆ ನಾಯಕನನ್ನು ಪಕ್ಷದ ಎಲ್ಲ ಜವಾಬ್ದಾರಿಗಳಿಂದ ಕಿತ್ತು ಹಾಕಲು ಈ ಕಾರ್ ಖರೀದಿಯೇ ಸಿಪಿಎಂಗೆ (CPM) ಸಾಕಾಗಿದೆ. ಅನಿಲ್ ಅವರ ಐಷಾರಾಮಿ ಕಾರ್ ಖರೀದಿಯು ಪಕ್ಷದ ತತ್ವಗಳ ವಿರುದ್ಧವಾಗಿದೆ ಎಂಬ ಕಾರಣ ನೀಡಿ, ಅವರನ್ನು ಕಿತ್ತು ಹಾಕಿದೆ. ಅನಿಲ್ ಕುಮಾರ್ ಅವರು ಸಿಐಟಿಯು (CITU) ಜತೆ ಸಂಪರ್ಕ ಹೊಂದಿರುವ ಕೇರಳ ಪೆಟ್ರೋಲಿಯಂ ಆ್ಯಂಡ್ ಗ್ಯಾಸ್ ವರ್ಕ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು(Viral News).

ಅನಿಲ್ ಕುಮಾರ್ ಅವರನ್ನು ಪಕ್ಷದ ಹುದ್ದೆಗಳಿಂದ ಮುಕ್ತಿ ನೀಡುವ ನಿರ್ಧಾರವನ್ನು ಸಿಪಿಎಂ ಎರ್ನಾಕುಲಂ ಜಿಲ್ಲಾ ಸಮಿತಿ ಮತ್ತು ಜಿಲ್ಲಾ ಕಾರ್ಯದರ್ಶಿ ಸಭೆಗಳಲ್ಲಿ ಕೈಗೊಳ್ಳಲಾಗಿದೆ. ಪಕ್ಷದ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಅವರು, ಪಕ್ಷದ ಸದಸ್ಯತ್ವವನ್ನು ಮುಂದುವರಿಸುವುದು ಅದರ ತತ್ವಗಳಿಗೆ ವಿರುದ್ಧವಾಗಿರುತ್ತದೆ ಎಂದು ಹೇಳಿದ್ದಾರೆಂದು ಹೇಳಲಾಗಿದೆ. ಸಂಘಟನೆಯ ಕಾರ್ಯದರ್ಶಿಗಳು ಮತ್ತು ಇತರರು ಮಿನಿ ಕೂಪರ್ ಖರೀದಿಯು ಪ್ರವೃತ್ತಿಯು ತಪ್ಪು ಮತ್ತು ಅದನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದ್ದಾರೆ.

ಅನಿಲ್ ಕುಮಾರ್ ಅವರ ಜೆಸ್ಟಿ ಯೆಲ್ಲೋ ಕೂಪರ್ ಎಸ್ ಕಾರ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಕಾರನ್ನು ಖರೀದಿಸುವ ಮೂಲಕ ಬಂಡವಾಳಶಾಹಿಗಳು ಹೇಗೆ ಬದುಕುತ್ತಾರೆ ಎಂಬುದನ್ನು ಅಧ್ಯಯನ ಮಾಡಲು ಉದ್ದೇಶಿಸಲಾಗಿದೆ ಎಂದು ಕಮ್ಯುನಿಸ್ಟ್ ನಾಯಕ ಅನಿಲ್ ಕುಮಾರ್ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋರ್ ಮಾಡಲಾಗಿತ್ತು.

ಈ ಸುದ್ದಿಯನ್ನೂ ಓದಿ: Nandini VS Milma: ನಂದಿನಿ ಹಾಲಿನ ಗುಣಮಟ್ಟ ಕಳಪೆ; ಉದ್ಧಟತನದ ಹೇಳಿಕೆ ನೀಡಿದ ಕೇರಳ ಸಚಿವೆ

ಈ ಎಲ್ಲ ಕಾಮ್ರೆಡ್‌ಗಳು ಮಿನಿ ಕೂಪರ್ ಯಾಕೆ ಇಷ್ಟ ಪಡುತತಾರೆ ಎಂದು ಒಬ್ಬ ಫೇಸ್‌ಬುಕ್ ಯೂಸರ್ ಕೇಳಿದ್ದಾರೆ. ಇದೇ ರೀತಿಯಾಗಿ ಅನೇಕರು ತಮ್ಮ ತಮ್ಮ ಯೋಚನೆಗಳಿಗೆ ಸಂಬಂಧಿಸಿದಂತೆ ಟೀಕೆ ಮಾಡಿದ್ದಾರೆ. ಕಾಮ್ರೆಡ್ ಕೋಡಿಯೇರಿ ಬಾಲಕೃಷ್ಣನ್ ಅವರು ಈ ಕುರಿತು ಅಧ್ಯಯನ ಮಾಡಿದ್ದಾರೆಂದು ಮತ್ತೊಬ್ಬರು ವ್ಯಂಗ್ಯ ಮಾಡಿದದಾರೆ. ಇದಕ್ಕೆ ಎಲ್ಲ ಉತ್ತರ ನೀಡಿರುವ ಅನಿಲ್ ಕುಮಾರ್ ಅವರು, ತಮ್ಮ ಹೆಂಡತಿ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಉದ್ಯೋಗಿಯಾಗಿದ್ದು, ಆಕೆ ಈ ಮಿನಿ ಕೂಪರ್ ಕಾರ್ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version