Site icon Vistara News

Kidnapping Case: ಮಿಠಾಯಿ ತರಲೆಂದು ಮಕ್ಕಳನ್ನು ಬಿಟ್ಟು ಹೋದ ತಂದೆ-ತಾಯಿ; ಕಾರು ಸಮೇತ ಮಕ್ಕಳು ಕಿಡ್ನಾಪ್‌!

Kidnapping Case

ಹೊಸದಿಲ್ಲಿ: ಈಗಿನ ಕಾಲದಲ್ಲಿ ಮಕ್ಕಳ ಬಗ್ಗೆ ಎಷ್ಟೇ ಎಚ್ಚರ ವಹಿಸಿದರೂ ಅದು ಕಡಿಮೆಯೇ. ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಸಂಕಷ್ಟಕ್ಕೀಡಾಗಬೇಕಾಗುತ್ತದೆ. ಇದೀಗ ಅಂತಹದ್ದೇ ಒಂದು ಘಟನೆ(Viral News) ದೆಹಲಿಯಲ್ಲಿ ನಡೆದಿದೆ. ಮಕ್ಕಳಿಬ್ಬರನ್ನು ಕಾರಿನಲ್ಲಿ ಬಿಟ್ಟು ಮಿಠಾಯಿ ತರಲೆಂದು ಬೇಕರಿಗೆ ಹೋಗಿದ್ದ ಪೋಷಕರು ವಾಪಸ್‌ ಬಂದು ನೋಡಿದಾಗ ಬಿಗ್‌ ಶಾಕ್‌ ಕಾದಿತ್ತು. ಕಾರು ಸಮೇತ ಮಕ್ಕಳಿಬ್ಬರು ಕಣ್ಮರೆ ಆಗಿದ್ದರು. ಆಮೇಲೆ ಅಪಹರಣಕಾರರು(Kidnapping Case) ಕಾರು ಸಮೇತ ಮಕ್ಕಳನ್ನು ಅಪಹರಿಸಿರುವ ವಿಚಾರ ಬೆಳಕಿಗೆ ಬಂದಿತ್ತು.

ಘಟನೆ ವಿವರ:

ದೆಹಲಿಯ ಲಕ್ಷ್ಮೀ ನಗರದಲ್ಲಿ ಈ ಘಟನೆ ನಡೆದಿದೆ. ಪೋಷಕರು ಹೀರಾ ಸ್ವೀಟ್‌ ಹೊರಗೆ ಕಾರು ನಿಲ್ಲಿಸಿದ್ದರು. ಕೆಲವೇ ಕ್ಷಣದ ಕೆಲಸವಾಗಿರುವುದರಿಂದ ಕಾರನ್ನು ಹಾಗೇ ಸ್ಟಾರ್ಟಿಂಗ್‌ನಲ್ಲಿಟ್ಟು, ಅದರೊಳಗೆ ತಮ್ಮ 11ವರ್ಷದ ಮಗ ಹಾಗೂ 3 ವರ್ಷದ ಹೆಣ್ಣು ಮಗುವನ್ನು ಬಿಟ್ಟು ಹೋಗಿದ್ದರು. ಅಲ್ಲಿಂದ ವಾಪಾಸ್‌ ಬಂದು ನೋಡಿದಾಗ ಕಾರು ಸಮೇತ ಮಕ್ಕಳು ಕಣ್ಮರೆ ಆಗಿದ್ದರು.

ಗಾಬರಿಗೊಂಡ ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟು ಹೊತ್ತಿಗಾಗಗಲೇ ಅಪಹರಣಕಾರರು ಪೋಷಕರಿಗೆ ಕರೆ ಮಾಡಿ ತಕ್ಷಣ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಮಕ್ಕಳ ರಕ್ಷಣೆಗೆ ಹಾಗೂ ಕಿಡಿಗೇಡಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಿ ಫೀಲ್ಡ್‌ಗಿಳಿಯುತ್ತಾರೆ. ತಾಂತ್ರಿಕ ಸಹಾಯದಿಂದ ಹೇಗಾದರೂ ಕಾರನ್ನು ಚೇಸ್‌ ಮಾಡಲು ಶುರು ಮಾಡುತ್ತಾರೆ.

ಬರೋಬ್ಬರಿ 20 ಪೊಲೀಸ್‌ ವಾಹನಗಳು ಕಿಡ್ನಾಪರ್ಸ್‌ ಕಾರನ್ನು ಚೇಸ್‌ ಮಾಡಿ, ಪತ್ತೆ ಮಾಡುತ್ತಾರೆ. ಅದೃಷ್ಟವಶಾತ್‌ ಎರಡೂ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಕಾರಿನಲ್ಲಿ ಕೆಲವೊಂದು ಅಮೂಲ್ಯ ವಸ್ತುಗಳು, ಹಣ, ಒಡವೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದೂ ಅಲ್ಲದೇ ಅಪಹರಣಕಾರರನ್ನೂ ಅರೆಸ್ಟ್‌ ಮಾಡಿದ್ದಾರೆ.

ಇಂತಹದ್ದೇ ಒಂದು ಘಟನೆ ಕಳೆದ ವರ್ಷ ಕುಂದಾನಗರಿ ಬೆಳಗಾವಿಯಲ್ಲೂ ನಡೆದಿತ್ತು. 9 ವರ್ಷದ ಬಾಲಕಿಯನ್ನು ಕಿಡಿಗೇಡಿಯೊಬ್ಬ ಅಪಹರಣಕ್ಕೆ ಯತ್ನಿಸಿದ್ದ. ಟ್ಯೂಷನ್‌ಗೆಂದು ಹೋಗುತ್ತಿದ್ದಾಗ ಬಾಲಕಿಗೆ ಚಾಕೊಲೇಟ್‌ ಆಮಿಷ ಒಡ್ಡುತ್ತಾ ಸಮೀಪಿಸಿದ್ದ. ಹತ್ತಿರ ಬಂದವನೇ ಎತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಬಾಲಕಿ ಕಿರುಚಿದ್ದರಿಂದ ಜನ ಬರುವ ಸೂಚನೆ ಕಂಡು ಆರೋಪಿ ಓಡಿ ಹೋಗಿದ್ದ. ಈ ಘಟನೆಯ ಬಗ್ಗೆ ಆತಂಕಿತರಾದ ಹೆತ್ತವರು ಟಿಳಕವಾಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Exit mobile version