Site icon Vistara News

Krishna Janmastami 2024: ಭೇಟಿ ನೀಡಲೇಬೇಕಾದ ವಿಶ್ವ ಪ್ರಸಿದ್ಧ 5 ಕೃಷ್ಣ ದೇವಾಲಯಗಳಿವು

Krishna Janmastami 2024

ಕೃಷ್ಣನ ಜನ್ಮದಿನವನ್ನು ಸೋಮವಾರದಿಂದ ಮೂರು ದಿನಗಳ ಕಾಲ ದೇಶಾದ್ಯಂತ ಆಚರಿಸಲಾಗುತ್ತದೆ. ಜನ್ಮಾಷ್ಟಮಿಯ (Krishna janmastami 2024) ಈ ವಿಶೇಷ ಸಂದರ್ಭದಲ್ಲಿ ಭೇಟಿ ನೀಡಬಹುದಾದ ದೇಶದ ಐದು ಸುಪ್ರಸಿದ್ಧ ಶ್ರೀಕೃಷ್ಣ ದೇವಾಲಯಗಳಿವೆ (sri krishna temple). ಇಲ್ಲಿ ಶ್ರೀಕೃಷ್ಣನ ಜನ್ಮಾಷ್ಟಮಿಯು (janmastami) ಅತ್ಯಂತ ವೈಭವಾಗಿ ನಡೆಯುತ್ತದೆ.


1. ದ್ವಾರಕಾಧೀಶ ದೇವಾಲಯ, ದ್ವಾರಕಾ

ಗುಜರಾತಿನ ದ್ವಾರಕಾದಲ್ಲಿರುವ ದ್ವಾರಕಾಧೀಶ ದೇವಾಲಯವನ್ನು ಜಗತ್ ಮಂದಿರ ಎಂದೂ ಕರೆಯಲಾಗುತ್ತದೆ. ದ್ವಾರಕಾಧೀಶ ದೇವಾಲಯವನ್ನು 2,500 ವರ್ಷಗಳ ಹಿಂದೆ ಶ್ರೀಕೃಷ್ಣನ ಮೊಮ್ಮಗ ವಜ್ರನಾಭ್ ಸ್ಥಾಪಿಸಿದನೆಂದು ನಂಬಲಾಗಿದೆ. ಸಣ್ಣ ಬೆಟ್ಟದ ಮೇಲಿರುವ ಈ ದೇವಾಲಯವನ್ನು ಭಕ್ತರು 50 ಮೆಟ್ಟಿಲುಗಳನ್ನು ಹತ್ತಿ ತಲುಪಬಹುದು. ಈ ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಜನ್ಮಾಷ್ಟಮಿ. ಈ ಸಂದರ್ಭದಲ್ಲಿ ದೇವಾಲಯಕ್ಕೆ ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ.


2. ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯ, ಮಥುರಾ

ಉತ್ತರ ಪ್ರದೇಶದ ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನ ದೇವಾಲಯವಿದೆ. ಇದು ಶ್ರೀಕೃಷ್ಣನ ತಂದೆತಾಯಿಗಳಾದ ವಸುದೇವ ಮತ್ತು ದೇವಕಿಯನ್ನು ಅವನ ಮಾವ ಕಂಸನಿಂದ ಬಂಧಿಸಲಾಗಿದೆ ಎನ್ನಲಾಗುವ ಸ್ಥಳದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಸಂಕೀರ್ಣವು ಶ್ರೀಕೃಷ್ಣನಿಗೆ ಸಮರ್ಪಿತವಾದ ಹಲವಾರು ದೇವಾಲಯಗಳನ್ನು ಒಳಗೊಂಡಿದೆ. ಇಲ್ಲಿ ಜನ್ಮಾಷ್ಟಮಿ ಸಮಯದಲ್ಲಿ ಸುಂದವಾಗಿ ಅಲಂಕರಿಸಲಾಗುತ್ತದೆ.


3. ಬಂಕೆ ಬಿಹಾರಿ ದೇವಾಲಯ, ಉತ್ತರ ಪ್ರದೇಶ

ಉತ್ತರ ಪ್ರದೇಶದ ವೃಂದಾವನದಲ್ಲಿರುವ ಬಂಕೆ ಬಿಹಾರಿ ದೇವಾಲಯವು ಭಾರತದಲ್ಲಿನ ಶ್ರೀಕೃಷ್ಣನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದು ವೃಂದಾವನದ ಏಳು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಜನ್ಮಾಷ್ಟಮಿ ಆಚರಣೆಯ ಸಮಯದಲ್ಲಿ ಭಕ್ತರು ಸಾಂಪ್ರದಾಯಿಕವಾದ ಬಂಕೆ ಬಿಹಾರಿಯಲ್ಲಿ ಮಂಗಳ ಆರತಿಯಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ ದೇವರ ದರ್ಶನವು ಮಧ್ಯಾಹ್ನ ಎರಡು ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಬೆಳಗ್ಗೆ ಆರು ಗಂಟೆಯವರೆಗೆ ಮುಂದುವರಿಯುತ್ತದೆ.


4. ಗುರುವಾಯೂರು ಕೃಷ್ಣ ದೇವಾಲಯ, ಕೇರಳ

ದಕ್ಷಿಣದ ದ್ವಾರಕಾ ಎಂದೂ ಕರೆಯಲ್ಪಡುವ ಐತಿಹಾಸಿಕ ಕೃಷ್ಣ ದೇವಾಲಯವು ಕೇರಳದ ಗುರುವಾಯೂರಿನಲ್ಲಿದೆ. ಇದು ಇಂದಿಗೂ ಭಾರತದ ಅತ್ಯಂತ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಮುಖ್ಯ ದೇವಾಲಯವನ್ನು 1638ರಲ್ಲಿ ಪುನರ್ನಿರ್ಮಿಸಲಾಯಿತು ಎನ್ನಲಾಗುತ್ತದೆ. ದೇವಾಲಯದ ಒಳಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪದ ಶೈಲಿಯು ಪ್ರವಾಸಿಗರಿಗೆ ವಿಶೇಷವಾಗಿ ಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಅತ್ಯಂತ ಸುಂದರ ಅನುಭವವನ್ನು ನೀಡುತ್ತದೆ.

ಇದನ್ನೂ ಓದಿ: Lakshadweep Tour: ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಸೆಳೆಯುವ ಪಂಚರತ್ನಗಳಿವು


5. ಉಡುಪಿ ಶ್ರೀ ಕೃಷ್ಣ ಮಠ

ನಮ್ಮ ರಾಜ್ಯದ ಉಡುಪಿಯ ಶ್ರೀಕೃಷ್ಣ ದೇವಾಲಯವು ಒಂದು ಅಪ್ರತಿಮ ಯಾತ್ರಾಸ್ಥಳವಾಗಿದೆ. ಶ್ರೀಕೃಷ್ಣನ ಸುಂದರವಾದ ವಿಗ್ರಹವೊಂದು ಅಲ್ಲಿ ಸ್ಥಾಪಿಸಲಾಗಿದೆ. ಜನ್ಮಾಷ್ಟಮಿ ಸಮಯದಲ್ಲಿ ಭವ್ಯವಾಗಿ ದೇವಾಲಯವನ್ನು ಅಲಂಕರಿಸಲಾಗುತ್ತದೆ. ವಿಗ್ರಹವನ್ನು ಒಂಬತ್ತು ರಂಧ್ರಗಳ ಕಿಟಕಿ ಅಥವಾ ನವಗ್ರಹ ಕಿಟಿಕಿ ಮೂಲಕವೂ ಭಕ್ತರು ನೋಡುತ್ತಾರೆ. ವಿಟ್ಲ ಪಿಂಡಿ ಉತ್ಸವ ಮತ್ತು ಮೊಸರು ಕುಡಿಕೆ ಇಲ್ಲಿಯ ವಿಶೇಷ ಆಕರ್ಷಣೆ. ಹುಲಿ ವೇಷ ಕುಣಿತ ಜನರನ್ನು ರಂಜಿಸುತ್ತದೆ.

Exit mobile version