Site icon Vistara News

Lashkar-e-Taiba: ಡ್ರೋನ್ ಮೂಲಕ ಭಾರತಕ್ಕೆ ಉಗ್ರರ ಎಂಟ್ರಿ! ಇದು ಲಷ್ಕರೆ ತಯ್ಬಾ ಸಂಘಟನೆಯ ಹೊಸ ತಂತ್ರ

Lashkar-e-Taiba

ನವದೆಹಲಿ: ಲಷ್ಕರೆ ತಯ್ಬಾ (Lashkar-e-Taiba) ಉಗ್ರ ಸಂಘಟನೆಯು ಭಾರತದಲ್ಲಿ ಭಯೋತ್ಪಾದನಾ (Terrorists Activities) ಚಟುವಟಿಕೆಗಳಿಗೆ ಪ್ಲ್ಯಾನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಪಾಕ್ ಗಡಿಯಿಂದ ಭಾರತದೊಳಕ್ಕೆ ಡ್ರೋನ್(Drone) ಮೂಲಕ ಉಗ್ರರರನ್ನು ಇಳಿಸುವ ಯೋಜನೆಯನ್ನು ಹಾಕಿಕೊಂಡಿದೆ. ಈ ಸಂಬಂಧ ಪರೀಕ್ಷೆಯನ್ನು ಕೂಡ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಸುಮಾರು 70 ಕೆಜಿ ಪೇಲೋಡ್‌ ಸಾಮರ್ಥ್ಯದ ಡ್ರೋನ್‌ಗಳನ್ನು ಬಳಸಿಕೊಂಡು ಉಗ್ರರನ್ನು ಭಾರತ ಗಡಿಯಲ್ಲಿ ಇಳಿಸುವ ಪ್ಲ್ಯಾನ್ ಸಕ್ಸೆಸ್ ಆದ್ರೆ ಮತ್ತಷ್ಟು ಉಗ್ರ ಕೃತ್ಯಗಳು ನಡೆಯಬಹುದು ಎಂದು ಎಚ್ಚರಿಸಲಾಗಿದೆ. ಈ ಕುರಿತಾದ ವಿಡಿಯೋವೊಂದು (Video Leak) ಹರಿದಾಡುತ್ತಿದೆ.

ಈ ಮೊದಲು ಪಾಕಿಸ್ತಾನ ಮೂಲದ ಉಗ್ರರು ಡ್ರೋನ್‌ ಮೂಲಕ ಗನ್, ಬಾಂಬ್ ಸೇರಿದಂತೆ ಶಸ್ತ್ರಾಸ್ತ್ರಗಳು ಹಾಗೂ ಮಾದಕ ವಸ್ತುಗಳನ್ನು ಭಾರತದ ಪ್ರದೇಶಕ್ಕೆ ಬೀಳಿಸುತ್ತಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಉಗ್ರರನ್ನೇ ಡ್ರೋನ್ ಮೂಲಕ ಭಾರತದ ಪ್ರದೇಶದಲ್ಲಿ ಇಳಿಸುವ ಪ್ರಯತ್ನಕ್ಕೆ ಲಷ್ಕರೆ ಮುಂದಾಗಿದೆ. ಲಷ್ಕರ್ ಡ್ರೋನ್ ತರಬೇತಿ ಶಿಬಿರದೊಳಗೆ ಚಿತ್ರೀಕರಿಸಲಾದ ವೀಡಿಯೊ, ಭಯೋತ್ಪಾದಕರು ಡ್ರೋನ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸುವ ಮತ್ತು ಮಾನವನನ್ನು ನೀರಿನಲ್ಲಿ ಬಿಡುವುದನ್ನು ತೋರಿಸುತ್ತದೆ. ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ್ ಗಡಿಯಲ್ಲಿ ಭಯೋತ್ಪಾದಕರನ್ನು ಬೀಳಿಸಲು ಯೋಜನೆಯಂತೆ ಇದು ಕಾಣುತ್ತದೆ. ಗುಪ್ತಚರ ಮೂಲಗಳ ಪ್ರಕಾರ, ಕಳೆದ ತಿಂಗಳು ಇಂತಹ ಡ್ರೋನ್ ಬಳಸಿ ಭಯೋತ್ಪಾದಕನನ್ನು ಪಂಜಾಬ್‌ಗೆ ಪ್ರದೇಶದಲ್ಲಿ ಇಳಿಸಲಾಗಿದೆ!

ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಭಯೋತ್ಪಾದಕ ಗುಂಪುಗಳು ಮತ್ತು ಮಾದಕವಸ್ತು ಕಳ್ಳಸಾಗಣೆದಾರರು ಮುಖ್ಯವಾಗಿ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಭಾರತದ ಭೂಪ್ರದೇಶಕ್ಕೆ ಶಸ್ತ್ರಾಸ್ತ್ರಗಳು ಮತ್ತು ನಾರ್ಕೋ ಸರಕುಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ಜೆ & ಕೆ ಮತ್ತು ಪಂಜಾಬ್‌ನ ಗಡಿಗಳಲ್ಲಿ ಕಟ್ಟುನಿಟ್ಟಿನ ಪಹರೆಯ ಹೊರತಾಗಿಯೂ ಮಾದಕ ದ್ರವ್ಯ ಮಾರಾಟ ಜಾಲವು, ರಾಜಸ್ಥಾನ ಮತ್ತು ಗುಜರಾತ್‌ನ ಗಡಿಗಳಲ್ಲಿ ಮಾದಕ ವಸ್ತುಗಳನ್ನು ಡ್ರೋನ್‌ ಮೂಲಕ ಬೀಳಿಸಿ, ಅಲ್ಲಿಂದ ಸಹಚರರಿಂದ ರಸ್ತೆ ಮೂಲಕ ಪಂಜಾಬ್‌ಗೆ ಕಳ್ಳಸಾಗಣೆ ಮಾಡುತ್ತಿರುವುದು ವರದಿಯಾಗಿದೆ.

ಈ ಡ್ರೋನ್‌ಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, 70 ಕೆಜಿ ವರೆಗೆ ಪೇಲೋಡ್ ಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಡ್ರೋನ್‌ಗಳು ಮಾನವ ಭಯೋತ್ಪಾದಕ ಮತ್ತು ಶಸ್ತ್ರಾಸ್ತ್ರಗಳನ್ನು ಕೂಡ ಸುಲಭವಾಗಿ ಹೊತ್ತೊಯ್ಯಬಲ್ಲವು. ಅಲ್ಲದೇ ಸುಮಾರು 60 ಕಿ.ಮೀ.ವರೆಗೂ ಸಂಚರಿಸುವ ಶಕ್ತಿಯನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಲಷ್ಕರೆ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಮಟಾಶ್

ಡ್ರೋನ್‌ನಂತ ಸೌಲಭ್ಯಗಳನ್ನು ಉಗ್ರರು ಬಳಸುತ್ತಿದ್ದಾರೆಂದರೆ, ಖಂಡಿತವಾಗಿಯೂ ಪಾಕಿಸ್ತಾನದ ಬೆಂಬಲ ಇಲ್ಲದೇ ಇದು ಸಾಧ್ಯವಿಲ್ಲ. ಈ ಎಲ್ಲ ಕೃತ್ಯಗಳ ಹಿಂದೆ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ಐ ಕೈವಾಡವಿದೆ. ಡ್ರೋನ್‌ಗಳ ಮೂಲಕ ಉಗ್ರರು ದೇಶದೊಳಗೆ, ಬಂದು ಉಗ್ರ ಕೃತ್ಯಗಳನ್ನು ಎಸಗಿ ಮತ್ತೆ ಅದೇ ಡ್ರೋನ್‌ಗಳ ಮೂಲಕ ಪಾಕಿಸ್ತಾನಕ್ಕೆ ವಾಪಸ್‌ ಹೋಗಬಹುದು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version