ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮೊದಲ ಲಘು ಯುದ್ಧ ವಿಮಾನ (light combat aircraft – LCA) ಅವಳಿ ಆಸನಗಳ ತರಬೇತುದಾರ ಆವೃತ್ತಿಯ ತೇಜಸ್ (LCA Tejas) ವಿಮಾನವನ್ನು ಬುಧವಾರ ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಗೆ (IAF) ಹಸ್ತಾಂತರಿಸಿತು. ಎಚ್ಎಎಲ್ ಮತ್ತು ಐಎಎಫ್ ನಡುವಿನ ಎಲ್‌ಸಿಎ ಒಪ್ಪಂದದ ಭಾಗವಾಗಿ, ಎಂಟು ಅವಳಿ-ಆಸನಗಳ ತರಬೇತುದಾರ ವಿಮಾನಗಳನ್ನು ಎಚ್ಎಎಲ್ ಪೂರೈಸಲಿದೆ. ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಗ ಮೊದಲನೇ ವಿಮಾನವನ್ನು ಹಸ್ತಾಂತರಿಸಲಾಗಿದೆ.
ಲಘಯುದ್ಧ ತರಬೇತಿ ತೇಜಸ್ ಯುದ್ಧ ವಿಮಾನ ಹಸ್ತಾಂತರವು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಗಿರಿಧರ್ ಅರಮನೆ, ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ವಿವೇಕ ರಾಮ್ ಚೌಧರಿ ಮತ್ತು ಎಚ್ಎಎಲ್ ಚೇರ್ಮನ್ ಸಿ ಬಿ ಅನಂತಕೃಷ್ಣನ್ ಅವರ ಸಮ್ಮುಖದಲ್ಲಿ ನಡೆಯಿತು.
HAL Hands Over LCA Tejas Twin Seater to IAF in Presence of RRM @SpokespersonMoD @giridhararamane @DefProdnIndia @gopalsutar@IAF_MCC @AjaybhattBJP4UK pic.twitter.com/32cZoo8RNL
— HAL (@HALHQBLR) October 4, 2023
ಈ ಸುದ್ದಿಯನ್ನೂ ಓದಿ: Aero India 2023 : ಎಚ್‌ಎಎಲ್‌ನ ತೇಜಸ್ ಯುದ್ಧ ವಿಮಾನ ಖರೀದಿಸಲು ಅರ್ಜೆಂಟೀನಾ, ಮಲೇಷ್ಯಾ ಸಜ್ಜು
ಲಘು ಯುದ್ಧ ವಿಮಾನ ತೇಜಸ್ ಎಂಕೆ 1 ಎ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ (AESA) ರಾಡಾರ್, ಬಿಯಾಂಡ್ ವಿಷುಯಲ್ ರೇಂಜ್ (BVR) ಕ್ಷಿಪಣಿ, ಆಧುನಿಕ ಎಲೆಕ್ಟ್ರಾನಿಕ್ ವಾರ್‌ಫೇರ್ (EW) ಸೂಟ್, ಮತ್ತು ಏರ್-ಟು-ಏರ್ ಫ್ಯೂಯೆಲ್ ಭರ್ತಿ ಮಾಡುವ (AAR) ಸಾಮರ್ಥ್ಯಗಳನ್ನು ಹೊಂದಿದೆ. ಈ ವಿಮಾನವು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ. ತೇಜಸ್ ಯುದ್ಧ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸುವ ನಿರೀಕ್ಷೆಯಿದೆ ಮತ್ತು ಅದರ ವಿಮಾನ ನೌಕಾಪಡೆಯ ಆಧುನೀಕರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.