LCA Tejas: ವಾಯುಪಡೆ ಬತ್ತಳಿಕೆ ಸೇರಿದ ಲಘು ಯುದ್ಧ ವಿಮಾನ ತೇಜಸ್! 8 ಏರ್‌ಕ್ರಾಫ್ಟ್‌ಗೆ ಎಚ್‌ಎಎಲ್‌ ಜತೆ ಸೇನೆ ಒಪ್ಪಂದ - Vistara News

ದೇಶ

LCA Tejas: ವಾಯುಪಡೆ ಬತ್ತಳಿಕೆ ಸೇರಿದ ಲಘು ಯುದ್ಧ ವಿಮಾನ ತೇಜಸ್! 8 ಏರ್‌ಕ್ರಾಫ್ಟ್‌ಗೆ ಎಚ್‌ಎಎಲ್‌ ಜತೆ ಸೇನೆ ಒಪ್ಪಂದ

LCA Tejas: ಒಟ್ಟು ಎಂಟು ತೇಜಸ್ ಲಘು ಯುದ್ಧ ವಿಮಾನ ಪೂರೈಕೆಗೆ ಭಾರತೀಯ ವಾಯು ಪಡೆ ಹಿಂದೂಸ್ತಾನ್ ಏರೋನಾಟಿಕ್ಸ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದೆ.

VISTARANEWS.COM


on

LCA Tejas handed over to Air Force by HAL in bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮೊದಲ ಲಘು ಯುದ್ಧ ವಿಮಾನ (light combat aircraft – LCA) ಅವಳಿ ಆಸನಗಳ ತರಬೇತುದಾರ ಆವೃತ್ತಿಯ ತೇಜಸ್ (LCA Tejas) ವಿಮಾನವನ್ನು ಬುಧವಾರ ಬೆಂಗಳೂರಿನಲ್ಲಿ ಭಾರತೀಯ ವಾಯುಪಡೆಗೆ (IAF) ಹಸ್ತಾಂತರಿಸಿತು. ಎಚ್ಎಎಲ್ ಮತ್ತು ಐಎಎಫ್ ನಡುವಿನ ಎಲ್‌ಸಿಎ ಒಪ್ಪಂದದ ಭಾಗವಾಗಿ, ಎಂಟು ಅವಳಿ-ಆಸನಗಳ ತರಬೇತುದಾರ ವಿಮಾನಗಳನ್ನು ಎಚ್ಎಎಲ್ ಪೂರೈಸಲಿದೆ. ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಗ ಮೊದಲನೇ ವಿಮಾನವನ್ನು ಹಸ್ತಾಂತರಿಸಲಾಗಿದೆ.

ಲಘಯುದ್ಧ ತರಬೇತಿ ತೇಜಸ್ ಯುದ್ಧ ವಿಮಾನ ಹಸ್ತಾಂತರವು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಗಿರಿಧರ್ ಅರಮನೆ, ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ವಿವೇಕ ರಾಮ್ ಚೌಧರಿ ಮತ್ತು ಎಚ್ಎಎಲ್ ಚೇರ್ಮನ್ ಸಿ ಬಿ ಅನಂತಕೃಷ್ಣನ್ ಅವರ ಸಮ್ಮುಖದಲ್ಲಿ ನಡೆಯಿತು.

ಈ ಸುದ್ದಿಯನ್ನೂ ಓದಿ: Aero India 2023 : ಎಚ್‌ಎಎಲ್‌ನ ತೇಜಸ್ ‌ ಯುದ್ಧ ವಿಮಾನ ಖರೀದಿಸಲು ಅರ್ಜೆಂಟೀನಾ, ಮಲೇಷ್ಯಾ ಸಜ್ಜು

ಲಘು ಯುದ್ಧ ವಿಮಾನ ತೇಜಸ್ ಎಂಕೆ 1 ಎ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ (AESA) ರಾಡಾರ್, ಬಿಯಾಂಡ್ ವಿಷುಯಲ್ ರೇಂಜ್ (BVR) ಕ್ಷಿಪಣಿ, ಆಧುನಿಕ ಎಲೆಕ್ಟ್ರಾನಿಕ್ ವಾರ್‌ಫೇರ್ (EW) ಸೂಟ್, ಮತ್ತು ಏರ್-ಟು-ಏರ್ ಫ್ಯೂಯೆಲ್ ಭರ್ತಿ ಮಾಡುವ (AAR) ಸಾಮರ್ಥ್ಯಗಳನ್ನು ಹೊಂದಿದೆ. ಈ ವಿಮಾನವು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ. ತೇಜಸ್‌ ಯುದ್ಧ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸುವ ನಿರೀಕ್ಷೆಯಿದೆ ಮತ್ತು ಅದರ ವಿಮಾನ ನೌಕಾಪಡೆಯ ಆಧುನೀಕರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

LCA Tejas

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!

INDIA Alliance: ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದಲ್ಲಿ ಸೀಟು ಹಂಚಿಕೆಯು ಭಾರೀ ಬಿಕ್ಕಟ್ಟು ಸೃಷ್ಟಿಸಿತ್ತು. ಆದರೆ, ಪರಿಸ್ಥಿತಿ ನಿಧಾನವಾಗಿ ತಿಳಿಯಾಗುತ್ತಿದ್ದ ಸೀಟು ಹಂಚಿಕೆ ಅಂತಿಮವಾಗುತ್ತಿದೆ.

VISTARANEWS.COM


on

INDIA Alliance partners Congress and AAP Seal seat deal for Goa, Haryana, Gujarat
Koo

ನವದೆಹಲಿ: ಉತ್ತರ ಪ್ರದೇಶದಲ್ಲಿ (Uttar Pradesh) ಕಾಂಗ್ರೆಸ್ (Congress Party) ಮತ್ತು ಸಮಾಜವಾದಿ ಪಕ್ಷದ (Samajwadi Party) ನಡುವೆ ಸೀಟು ಹಂಚಿಕೆ (Seat Sharing) ಏರ್ಪಟ್ಟ ಬೆನ್ನಲ್ಲೇ, ಇಂಡಿಯಾ ಕೂಟದ (INDIA Alliance) ಮತ್ತೊಂದು ಪಾಲುದಾರ ಪಕ್ಷವಾದ ಆಮ್ ಆದ್ಮಿ ಪಾರ್ಟಿ (AAP) ಜತೆಗೂ ದಿಲ್ಲಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸೀಟು ಹಂಚಿಕೆಯನ್ನು ಫೈನಲ್ ಮಾಡಿದೆ. ದಿಲ್ಲಿಯ ಏಳು ಲೋಕಸಭಾ ಕ್ಷೇತ್ರಗಳ ಪೈಕಿ 4 ಕ್ಷೇತ್ರದಲ್ಲಿ ಆಪ್ ಮತ್ತು 3 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಇದರ ಬೆನ್ನಲ್ಲೇ ಆಪ್ ಮತ್ತು ಕಾಂಗ್ರೆಸ್‌ಗಳೆರಡೂ ಗೋವಾ, ಹರ್ಯಾಣ, ಗುಜರಾತ್‌ಗಳಲ್ಲೂ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರತಿಪಕ್ಷಗಳ ಕೂಟವಾದ ಇಂಡಿಯಾ ನಿಧಾನವಾಗಿ ಒಂದು ಹಂತಕ್ಕೆ ಬಿಜೆಪಿಯ ಎದುರು ಪ್ರತಿರೋಧ ತೋರುವ ಪ್ರಯತ್ನವನ್ನು ಮಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲೂ ಕಾಂಗ್ರೆಸ್ ಮತ್ತು ಆಪ್‌ ನಡುವೆ ಸೀಟು ಹಂಚಿಕೆ ಫೈನಲ್ ಆಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನ ಗೆದ್ದಿರುವ ಆಪ್, ಭರುಚ ಮತ್ತು ಭಾವನಗರ ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈಗಾಗಲೇ ಈ ಎರಡು ಕ್ಷೇತ್ರಗಳಿಗೆ ಆಪ್ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ. ಮನ್ಸುಖಭಾಯಿ ವಾಸವಾ ಮತ್ತು ಭಾರ್ತಿ ಶಿಯಾಲ್ ಅವರು ಕ್ರಮವಾಗಿ ಭರುಚ ಮತ್ತು ಭಾವನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಸಂಸದರಾಗಿದ್ದಾರೆ. ಗುಜರಾತ್‌ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿವೆ. 2014 ಮತ್ತು 2019ರಲ್ಲಿ ಗುಜರಾತ್‌ನ ಎಲ್ಲ ಲೋಕಸಭೆ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ.

ಇದೇ ವೇಳೆ ಚಂಡೀಗಢ ಲೋಕಸಭೆ ಕ್ಷೇತ್ರವು ಕಾಂಗ್ರೆಸ್ ಪಾಲಾಗಿದೆ. ಸದ್ಯ ಈ ಕ್ಷೇತ್ರವನ್ನು ಬಿಜೆಪಿಯ ಕಿರೋನ್ ಖೇರ್ ಅವರು ಪ್ರತಿನಿಧಿಸುತ್ತಿದ್ದಾರೆ. ಇವರು 2014 ಮತ್ತು 2019ರಲ್ಲಿ ಸತತವಾಗಿ ಗೆದ್ದಿದ್ದಾರೆ. ಇದಕ್ಕೂ ಮುಂಚಿನ ಮೂರು ಅವಧಿಗೆ ಕಾಂಗ್ರೆಸ್ ನಾಯಕ ಪವನ್ ಕುಮಾರ್ ಬನ್ಸಾಲ್ ಅವರು ಗೆದ್ದಿದ್ದರು.

ಒಟ್ಟು 10 ಕ್ಷೇತ್ರಗಳು ಇರುವ ಹರ್ಯಾಣದಲ್ಲೂ ಆಮ್ ಆದ್ಮಿ ಪಾರ್ಟಿ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಗುಜರಾತ್‌ನಂತೆ ಹರ್ಯಾಣದಲ್ಲೂ ಬಿಜೆಪಿ ಪ್ರಾಬಲ್ಯವನ್ನು ಹೊಂದಿದೆ. ಶೇ.60ರಷ್ಟು ಮತಗಳೊಂದಿಗೆ ಬಿಜೆಪಿ ಎಲ್ಲ 10 ಕ್ಷೇತ್ರಗಳನ್ನು ಗೆದ್ದಿದೆ. ಕಾಂಗ್ರೆಸ್ ಕೇವಲ ಶೇ.29ರಷ್ಟು ಮತ ಪಡೆಯಲಷ್ಟೇ ಶಕ್ಯವಾಗಿದೆ.

ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಒಂದು ಕ್ಷೇತ್ರದಲ್ಲಿ ಆಪ್ ಸ್ಪರ್ಧಿಸುವ ಸಾಧ್ಯತೆ ಇದೆ. ಆಪ್ ನಾಯಕ ವೆಂಜಿ ವಿಗಾಸ್ ಅವರು ದಕ್ಷಿಣ ಗೋವಾದಿಂದ ಸ್ಪರ್ಧಿಸುವುದಾಗಿ ಈ ಹಿಂದೆಯೇ ಹೇಳಿದ್ದರು. ಇದುವೇ ನಿಜವಾದರೆ, ಮತ್ತೊಂದು ಕ್ಷೇತ್ರ ಉತ್ತರ ಗೋವಾದಲ್ಲಿ ಕಾಂಗ್ರೆಸ್ ಸ್ಪರ್ಧಿಸಬಹುದು. ಆದರೆ, ಈ ಕುರಿತು ಇನ್ನೂ ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ ಎನ್ನಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ: INDIA Bloc: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 17, ಎಸ್‌ಪಿ 63 ಕ್ಷೇತ್ರಗಳಲ್ಲಿ ಸ್ಪರ್ಧೆ! ಬಗೆ ಹರಿದ ಸೀಟು ಹಂಚಿಕೆ ಬಿಕ್ಕಟ್ಟು

Continue Reading

ಪ್ರಮುಖ ಸುದ್ದಿ

C J Chandrachud : ಯೋಗ, ಸಸ್ಯಾಹಾರ; ಒತ್ತಡ ನಿವಾರಣೆ ತಂತ್ರ ವಿವರಿಸಿದ ಸುಪ್ರಿಂ ಕೋರ್ಟ್​​ ಮುಖ್ಯ​ ನ್ಯಾಯಮೂರ್ತಿ

DY Chandrachud : ಚಂದ್ರಚೂಡ್​ ಅವರು ಆಯುಷ್​ ಸಮಗ್ರ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಸಸ್ಯಾಹಾರ ಹಾಗೂ ಯೋಗಕ್ಕೆ ಒತ್ತು ನೀಡುವಂತೆ ಕರೆಕೊಟ್ಟರು.

VISTARANEWS.COM


on

DY Chandrachud
Koo

ನವದೆಹಲಿ: ಪ್ರತಿ ನಿತ್ಯ ಮುಂಜಾನೆ 3:30ಕ್ಕೆ ಎದ್ದು ಕಠಿಣ ಯೋಗ ಮಾಡಿ ಮತ್ತು ಸಸ್ಯ ಜನ್ಯ ಆಹಾರವನ್ನೇ ಸೇವಿಸಿ. ಇದರಿಂದ ಕಾರ್ಯದೊತ್ತಡ ನಿರ್ವಹಿಸಬಹುದು. ಹೀಗೆಂದವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​​ (C J Chandrachud). ತಮ್ಮ ಸಹೋದ್ಯೋಗಿಗಳು ಸೇರಿದಂತೆ ದೇಶದೆಲ್ಲೆಡೆ ಜನರು ಎದುರಿಸುತ್ತಿರುವ ಕೆಲಸ ಸಂಬಂಧಿತ ಒತ್ತಡವನ್ನು ನಿಭಾಯಿಸಲು ಸಮಗ್ರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ಕೊಟ್ಟಿದ್ದಾರೆ. ಅದಕ್ಕವರು ತಮ್ಮದೇ ಉದಾಹಣೆಯನ್ನು ತೆಗೆದುಕೊಂಡಿದ್ದಾರೆ.

ಇಂದು ಸುಪ್ರೀಂ ಕೋರ್ಟ್​​ನಲ್ಲಿ ಆಯುಷ್ ಸಮಗ್ರ ಕ್ಷೇಮ ಕೇಂದ್ರವನ್ನು ಉದ್ಘಾಟಿಸಿದ ಮುಖ್ಯ ನ್ಯಾಯಮೂರ್ತಿಗಳು, ಇಂತಹ ಅಭ್ಯಾಸಗಳ ಮಹತ್ವವು ನ್ಯಾಯಾಧೀಶರು ಮತ್ತು ಅವರ ಕುಟುಂಬಗಳಿಗೆ ಮಾತ್ರವಲ್ಲ, ಇಡೀ ಸುಪ್ರೀಂ ಕೋರ್ಟ್ ಸಿಬ್ಬಂದಿಯ ಯೋಗಕ್ಷೇಮಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ.

ನಾನು ನಿತ್ಯ ಯೋಗಾಭ್ಯಾಸ ಮಾಡುತ್ತೇನೆ. ಯೋಗ ಮಾಡಲು ಇಂದು ಮುಂಜಾನೆ 3: 30 ಕ್ಕೆ ಏಳುತ್ತೇನೆ. ಹೆಚ್ಚುವರಿಯಾಗಿ ನಾನು ಕಳೆದ 5 ತಿಂಗಳುಗಳಿಂದ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದೇನೆ. ನಾನು ಜೀವನ ಶೈಲಿಯ ಸಮಗ್ರ ಮಾದರಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದೇನೆ. ಅದು ನೀವು ಏನು ತಿನ್ನುತ್ತೀರಿ ಮತ್ತು ನಿಮ್ಮ ಜೀವನ ಶೈಲಿ ಹೇಗಿದೆ ಎಂಬುದರ ಮೇಲೆ ನಿಮ್ಮ ಕೆಲಸದೊತ್ತಡ ನಿರ್ವಹಿಸಬಹುದು ” ಎಂದು ಸಿಜೆಐ ಚಂದ್ರಚೂಡ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

ಕೆಲಸದ ಹೊರೆ

ಕಡತಗಳ ಗಣನೀಯ ಪ್ರಮಾಣ ಹೆಚ್ಚಳದಿಂದಾಗಿ ಕೆಲಸದ ಹೊರೆಯನ್ನು ನಿರ್ವಹಿಸಲು 34 ನ್ಯಾಯಾಧೀಶರು ಸೇರಿದಂತೆ ಸುಪ್ರೀಂ ಕೋರ್ಟ್ ಸಿಬ್ಬಂದಿ ಎದುರಿಸುತ್ತಿರುವ ಒತ್ತಡವನ್ನು ಮುಖ್ಯ ನ್ಯಾಯಮೂರ್ತಿ ಚಂದ್ರ ಚೂಡ್ ಅವರು ಈ ವೇಳೆ ಎತ್ತಿ ತೋರಿದರು. ತಮ್ಮ ವೈಯಕ್ತಿಕ ಅನುಭವದಿಂದ ಮಾತನಾಡಿದ ಸಿಜೆಐ ಚಂದ್ರಚೂಡ್, “ನಾನು ಸುಮಾರು ಒಂದು ವರ್ಷದ ಹಿಂದೆ ಪಂಚಕರ್ಮಕ್ಕೆ ಒಳಗಾಗಿದ್ದೆ. ಈಗ ಅದನ್ನು ಮತ್ತೆ ಮಾಡಲು ಮುಂದಾಗಿದ್ದೇನೆ. , ನಮ್ಮ ಸಹೋದ್ಯೋಗಿ 34 ನ್ಯಾಯಾಧೀಶರು ಸೇರಿದಂತೆ ಸುಪ್ರೀಂ ಕೋರ್ಟ್​​ನಲ್ಲಿ 2000 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ, ಅವರು ತಮ್ಮ ದೈನಂದಿನ ಕೆಲಸದಲ್ಲಿ ತೀವ್ರ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದು ಕಡತಗಳ ನಿರ್ವಹಣೆಯ ಕೆಲಸದ ಹೊರೆಗೆ ಕಾರಣವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ : Kannada Name Board : ಕನ್ನಡ ನಾಮಫಲಕ ನಿಯಮ ಜಾರಿ ಆಗ್ಲೇಬೇಕು; ಸಚಿವ ತಂಗಡಗಿ ಆದೇಶ

ನ್ಯಾಯಾಧೀಶರು ಮತ್ತು ಅವರ ಕುಟುಂಬಗಳು ಮಾತ್ರವಲ್ಲ ಸಿಬ್ಬಂದಿ ಸದಸ್ಯರೂ ಸಮಗ್ರ ಜೀವನಶೈಲಿಯನ್ನು ಪರಿಗಣಿಸುವುದು ಮುಖ್ಯ ಎಂದು ನಾನು ನಂಬುತ್ತೇನೆ. ಅವರೆಲ್ಲರ ಮೂಲಕ ಮೂಲಕ ನಾವು ಈ ಸಂದೇಶವನ್ನು ದೇಶದ ಉಳಿರೆಲ್ಲರಿಗೂ ತಲುಪಿಸಬಹುದು ಎಂದು ಅವರು ಹೇಳಿದರು.

ಕಾನೂನು ಕ್ಷೇತ್ರದಲ್ಲಿ ದುಡಿಯುವವರ ಯೋಗಕ್ಷೇಮಕ್ಕಾಗಿ ಸಿದ್ಧಪರಿಸಿರುವ ಆಯುಷ್ ಸಮಗ್ರ ಸ್ವಾಸ್ಥ್ಯ ಕೇಂದ್ರವು ಆಯುರ್ವೇದ ಮತ್ತು ಯೋಗ ಸೇರಿದಂತೆ ಸಮಗ್ರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ನ್ಯಾಯಾಧೀಶರು ಮತ್ತು ಅವರ ಕುಟುಂಬಗಳು ಮತ್ತು ಸುಪ್ರೀಂ ಕೋರ್ಟ್​​ನ ಸಿಬ್ಬಂದಿಗೆ ಜೀವನ ಶೈಲಿಯನ್ನು ಹೇಳಿಕೊಡುವ ಗುರಿಯಿದೆ.

Continue Reading

ಕರ್ನಾಟಕ

ನಾಮಫಲಕ ವಿಚಾರದಲ್ಲಿ ಕರ್ನಾಟಕಕ್ಕೆ ಬುದ್ಧಿ ಹೇಳುವ ಮಹಾರಾಷ್ಟ್ರದಲ್ಲಿ ಯಾವ ನಿಯಮ ಇದೆ ನೋಡಿ!

Kannada Signboard: ಕರ್ನಾಟಕದ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವಿರಬೇಕು ಎಂಬ ಕಾಯ್ದೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತರಲು ಹೊರಟಿದ್ದು, ಇದಕ್ಕೆ ಮಹಾರಾಷ್ಟ್ರ ಸರ್ಕಾರವು ತಗಾದೆ ತೆಗೆದಿದೆ.

VISTARANEWS.COM


on

Maharashtra has marathi signboard act but it Opposing Kannada Signboard Policy
Koo

ಮುಂಬೈ/ಬೆಂಗಳೂರು: ಕನ್ನಡದ ವಿಚಾರದಲ್ಲಿ ರಾಜ್ಯದೊಂದಿಗೆ ಮಹಾರಾಷ್ಟ್ರ ಸರ್ಕಾರ (Maharashtra Government) ಹೊಸದೊಂದು ತಗಾದೆ ತೆಗೆಯುತ್ತಿದೆ. ರಾಜ್ಯದ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ (Kannada in signboards mandatory) ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರದ (Karnataka Government) ನಡೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ (Supreme court) ಪ್ರಶ್ನೆ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಕರ್ನಾಟಕ ವಿಧಾನ ಪರಿಷತ್ತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ- 2024 ಅನ್ನು ಅಂಗೀಕರಿಸಿದ ಒಂದು ದಿನದ ನಂತರ, ಮಹಾರಾಷ್ಟ್ರ ಸರ್ಕಾರವು ಅದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ. ಆದರೆ, ಅದೇ ಮಹಾರಾಷ್ಟ್ರ ಸರ್ಕಾರವು, ತನ್ನ ರಾಜ್ಯದಲ್ಲಿ ನಾಮಫಲಕದಲ್ಲಿ ಮರಾಠಿಯನ್ನು ಕಡ್ಡಾಯಗೊಳಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈನಲ್ಲಿ ಮರಾಠಿ ಬೋರ್ಡ್‌ ಅಳವಡಿಸಲು ಅಭಿಯಾನವನ್ನೇ ಕೈಗೊಂಡಿತ್ತು. ಕೊನೆಗೆ ಈ ವಿಷಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಕೂಡ ಮರಾಠಿ ನಾಮಫಲಕ್ಕೆ ಓಕೆ ಎಂದಿತ್ತು. ಹಾಗಾಗಿ, ಈ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರವು ಅಕ್ಷರಶಃ ರಾಜಕೀಯವನ್ನು ಮಾಡುತ್ತಿದೆ ಎಂದು ಹೇಳಬಹುದು(Kannada Signboard).

ತನ್ನ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಮರಾಠಿ ನಾಮಫಲಕಗಳನ್ನು ಪ್ರದರ್ಶಿಸದವರ ವಿರುದ್ಧ ಕಾನೂನು ಕ್ರಮ ಜರಿಗಿಸುವುದುಕ್ಕೆ 2023 ನವೆಂಬರ್ 26ರಂದು ಬೃಹನ್ ಮುಂಬೈ ಪಾಲಿಕೆಯು ಮುಂದಾಗಿತ್ತು. ಮಹಾರಾಷ್ಟ್ರ ಅಂಗಡಿಗಳು ಮತ್ತು ಸಂಸ್ಥೆಗಳು (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯಿದೆ, 2017 ರ ಪ್ರಕಾರ ಮರಾಠಿ (ದೇವನಾಗರಿ) ಲಿಪಿಯಲ್ಲಿ ಸೈನ್‌ಬೋರ್ಡ್‌ಗಳನ್ನು ಪ್ರದರ್ಶಿಸದ ಅಂಗಡಿಗಳು ಮತ್ತು ಸಂಸ್ಥೆಗಳನ್ನು ಕಾನೂನು ಕ್ರಮ ಜರುಗಿಸಲಾಗುವುದು ಹೇಳಿತ್ತು. ಕಾನೂನು ಉಲ್ಲಂಘಿಸಿದ ಪ್ರತಿ ಅಂಗಡಿಯಲ್ಲಿನ ಪ್ರತಿ ಸಿಬ್ಬಂದಿಗೆ 2000 ರೂಪಾಯಿ ದಂಡ ವಿಧಿಸಲು ಮುಂದಾಗಿತ್ತು. ಈ ವಿಷವಯನ್ನು ಮಹಾರಾಷ್ಟ್ರ ಸರ್ಕಾರವು ಈಗ ಮರೆತಿರುವಂತೆ ಕಾಣುತ್ತಿದೆ.

ಮರಾಠಿ ಕಡ್ಡಾಯ ನಾಮಫಲಕವನ್ನು ವಿರೋಧಿಸಿ ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಕೂಟ(FRTWA)ವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ವಾಸ್ತವದಲ್ಲಿ ಸುಪ್ರೀಂ ಕೋರ್ಟ್‌ ಮಹಾರಾಷ್ಟ್ರ ಸರ್ಕಾರದ ಪರವಾಗಿಯೇ ತನ್ನ ಅಭಿಪ್ರಯಾವನ್ನು ವ್ಯಕ್ತಪಡಿಸಿತ್ತು. ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ, ಬೃಹನ್ ಮುಂಬೈ ಮಹಾನಗರ ಪಾಲಿಕೆ, ಮರಾಠಿ ನಾಮಫಲಕ ಕಡ್ಡಾಯ ಅಭಿಯಾನವನ್ನು ಆರಂಭಿಸಿತ್ತು.

”ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಅನುಸರಿಸಲಾಗುತ್ತಿದೆ. ನಿಯಮವನ್ನು ಉಲ್ಲಂಘಿಸಿದರೆ ಶಿಕ್ಷಾರ್ಹ ಕ್ರಮದ ಜೊತೆಗೆ, ನಾಗರಿಕ ಸಂಸ್ಥೆಯು ಉಲ್ಲಂಘಿಸುವವರ ವಿರುದ್ಧ ಅಪರಾಧವನ್ನು ಸಹ ದಾಖಲಿಸಲಾಗುತ್ತದೆ ಮತ್ತು ಅವರ ಉಲ್ಲಂಘನೆಗಳನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರಲಾಗುವುದು” ಎಂಬ ಬಿಎಂಸಿ ಉಪ ಮುನ್ಸಿಪಲ್ ಕಮಿಷನರ್ (ವಿಶೇಷ) ಸಂಜೋಗ್ ಕಬರೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಕಳೆದ ವರ್ಷ ವರದಿ ಮಾಡಿತ್ತು.

ಆಗ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಚಿಲ್ಲರೆ ವ್ಯಾಪಾರಿಗಳ ಅರ್ಜಿ ವಿಚಾರಣೆಗೆ ಒಪ್ಪಿಗೆ ಸೂಚಿಸಿದ್ದ ಸುಪ್ರೀಂ ಕೋರ್ಟ್, ಮಹಾರಾಷ್ಟ್ರ ಸರ್ಕಾರದ ನಿಯಮ ಅನುಸಾರ ಮರಾಠಿ ನಾಮಫಲಕಗಳ ಅಳವಡಿಕೆಗೆ ಸೆಪ್ಟೆಂಬರ್‌ನಿಂದ ಎರಡು ತಿಂಗಳ ಕಾಲ ಅವಕಾಶವನ್ನು ಕಲ್ಪಿಸಿತ್ತು. 2023ರ ಸೆಪ್ಟೆಂಬರ್ 25ರಂದು ನಡೆದ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ(ಇವರ ಕನ್ನಡಿಗರು) ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠವು, “ದೀಪಾವಳಿ ಮತ್ತು ದಸರಾಕ್ಕೆ ಮುಂಚಿತವಾಗಿ ಮರಾಠಿ ಸೈನ್‌ಬೋರ್ಡ್‌ಗಳನ್ನು ಹೊಂದುವ ಸಮಯ ಬಂದಿದೆ. ನೀವು ಮಹಾರಾಷ್ಟ್ರದಲ್ಲಿದ್ದೀರಿ. ಮರಾಠಿ ಸೂಚನಾ ಫಲಕಗಳನ್ನು ಹೊಂದುವುದರಿಂದ ಏನು ಪ್ರಯೋಜನ ಎಂದು ನಿಮಗೆ ತಿಳಿದಿಲ್ಲವೇ?” ಎಂದು ಅರ್ಜಿದಾರರಿಗೆ ಪ್ರಶ್ನಿಸಿದ್ದರು.

2018ರಲ್ಲಿ ಕಡ್ಡಾಯ ಮಾಡಿದ್ದ ಮಹಾರಾಷ್ಟ್ರ

2018 ರಲ್ಲಿ ಮಹಾರಾಷ್ಟ್ರ ಸರ್ಕಾರವು ರಾಜ್ಯದ ಎಲ್ಲಾ ಅಂಗಡಿಗಳು ಮತ್ತು ಸಂಸ್ಥೆಗಳು ದೇವನಾಗರಿ ಲಿಪಿಯಲ್ಲಿ ಮರಾಠಿ ಸೈನ್‌ಬೋರ್ಡ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿತ್ತು. ಆದಾಗ್ಯೂ, 10 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಕೆಲವು ಸಂಸ್ಥೆಗಳು ಈ ನಿಯಮವನ್ನು ತಪ್ಪಿಸಲು ಪ್ರಯತ್ನಿಸಿದವು. ಈ ಹಿನ್ನೆಲೆಯಲ್ಲಿ 2022ರ ಮಾರ್ಚ್ ತಿಂಗಳಲ್ಲಿ ಸರ್ಕಾರವು, 2027ರ ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತಂದಿತು. ಈ ಕಾಯಿದೆಯ ಪ್ರಕಾರ, ಅಂಗಡಿಗಳು ಮತ್ತು ಸಂಸ್ಥೆಗಳು ಮರಾಠಿ ಸೈನ್‌ಬೋರ್ಡ್‌ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿತು. ಮರಾಠಿ ಮತ್ತು ಇಂಗ್ಲಿಷ್ ಎರಡೂ ಸಮಾನವಾದ ಗಾತ್ರದಲ್ಲಿರುವುದನ್ನು ಕಡ್ಡಾಯಗೊಳಿಸಿತ್ತು.

ಈ ಸುದ್ದಿಯನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯಕ್ಕೆ ತಗಾದೆ ತೆಗೆದ ಮಹಾರಾಷ್ಟ್ರ, ಕೇಸ್‌ ಹಾಕಲು ಚಿಂತನೆ

Continue Reading

Fact Check

Fact Check: ಭಿಂದ್ರನ್‌ವಾಲೆಗೆ ಭಾರತ ರತ್ನ ಗೌರವ ಎಂದು ರಾಹುಲ್ ಗಾಂಧಿ ಹೇಳಿದರೆ?

Fact Check: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಲಿಸ್ತಾನಿ ಉಗ್ರ ನಾಯಕ ಭಿಂದ್ರನ್‌ವಾಲೆಗೆ ಭಾರತ ರತ್ನ ನೀಡಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದರೇ? ಇದರ ಅಸಲಿಯತ್ತೇನು?

VISTARANEWS.COM


on

Fact Check, Did Rahul Gandhi Said, Bharat Ratna To Bindranwale?
Koo

ನವದೆಹಲಿ: ಇತ್ತೀಚೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು (Central Government) ಐವರು ಸಾಧಕರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿತು(Bharat Ratna Award). ಇದೇ ವೇಳೆ, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ, ರಾಹುಲ್ ಗಾಂಧಿ (Rahul Gandhi) ಅವರು ಖಲಿಸ್ತಾನ ಉಗ್ರ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಗೆ (Jarnail Singh Bhindranwale) ಭಾರತ ರತ್ನ ನೀಡಲಾಗುವುದು ಎಂದು ಹೇಳಿದ್ದಾರೆಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ರಾಹುಲ್ ಗಾಂಧಿ ಅವರು ನಿಜವಾಗಿಯೂ ಹಾಗೆ ಹೇಳಿದ್ದರೇ, ಫ್ಯಾಕ್ಟ್ ಚೆಕ್ (Fact Check) ಏನು ಹೇಳುತ್ತದೆ ನೋಡೋಣ ಬನ್ನಿ.

ಎಕ್ಸ್ ವೇದಿಕೆಯಲ್ಲಿ ಸಕ್ರಿಯವಾಗಿರುವ ದಿ ಬೈಂಗನ್ ಎಂಬ ಹೆಸರಿನ ಖಾತೆಯಲ್ಲಿ ಮಾಡಲಾದ ಪೋಸ್ಟ್ ಇಷ್ಟಕ್ಕೆಲ್ಲ ಕಾರಣ. ಈ ಪೋಸ್ಟ್‌ನಲ್ಲಿ, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ತಿಳಿಸಲಾಗಿತ್ತು.

ಬ್ರೇಕಿಂಗ್: ಒಂದು ವೇಳೆ 2024ರಲ್ಲಿ ಕಾಂಗ್ರೆಸ್‌ ಪಕ್ಷವು ಗೆದ್ದರೆ ಭಿಂದ್ರನ್‌ವಾಲೆಗೆ ಭಾರತ ರತ್ನ ನೀಡುವ ಭರವಸೆಯನ್ನು ರಾಹುಲ್ ಗಾಂಧಿ ಅವರು ನೀಡಿದ್ದಾರೆ ಎಂದು ದಿ ಬೈಂಗನ್ ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ. ಈ ಪೋಸ್ಟ್‌ ಭಾರೀ ವೈರಲ್ ಆಗುತ್ತಿದೆ.

ಆದರೆ, ಈ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ಹಲವರು ಭಿಂದ್ರನ್‌ವಾಲೆಗೆ ಭಾರತ ರತ್ನ ನೀಡಬೇಕು ಎಂದು ಹೇಳಿದ್ದಾರೆ. ಆದರೆ, ಈ ಹೇಳಿಕೆಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ, ಇದೊಂದು ಸುಳ್ಳು ಸುದ್ದಿಯಾಗಿದ್ದು, ಜನರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ಪ್ರಯತ್ನವಾಗಿದೆ ಎಂದು ಹೇಳಬಹುದು. ಆಗಾಗ ರಾಹುಲ್ ಗಾಂಧಿ ಹೆಸರಿನಲ್ಲಿ ಇಂಥ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತದೆ. ಕೆಲವೊಮ್ಮೆ ಅವರ ಭಾಷಣದ ತುಣುಕಗಳನ್ನು ಕತ್ತರಿಸಿ, ಬೇರೆಯದ್ದೇ ಅರ್ಥ ಬರುವ ರೀತಿಯಲ್ಲಿ ಪ್ರಸೆಂಟ್ ಮಾಡಲಾಗುತ್ತದೆ.

ಭಾರತದ ಇತಿಹಾಸದಲ್ಲಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ವಿವಾದತ್ಮಾಕ ವ್ಯಕ್ತಿಯಾಗಿದ್ದಾರೆ. ಅಮೃತಸರದ ಸ್ವರ್ಣ ಮಂದಿರದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಭಿಂದ್ರನ್‌ವಾಲೆ ಅಡಗಿಕೊಂಡಿದ್ದ. ಆತನನ್ನು ಹೊರ ಹಾಕಲು ಅಂದಿನ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು ಆಪರೇಷನ್ ಬ್ಲೂ ಸ್ಟಾರ್ ನಡೆಸಿತ್ತು.

3 ಜೂನ್ 1984 ರಂದು ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರು ಆಪರೇಷನ್ ಬ್ಲೂ ಸ್ಟಾರ್ ಅನ್ನು ಪ್ರಾರಂಭಿಸಿದರು ಮತ್ತು ಶಸ್ತ್ರಸಜ್ಜಿತ ಸಿಖ್ ಉಗ್ರಗಾಮಿಗಳನ್ನು ಸಂಕೀರ್ಣದಿಂದ ತೆಗೆದುಹಾಕಲು ಗೋಲ್ಡನ್ ಟೆಂಪಲ್ ಸಂಕೀರ್ಣದ ಮೇಲೆ ದಾಳಿ ಮಾಡಲು ಭಾರತೀಯ ಸೇನೆಗೆ ಆದೇಶಿಸಿದರು. ಕಾರ್ಯಾಚರಣೆಯಲ್ಲಿ ಭಿಂದ್ರನ್‌ವಾಲೆ ಕೊಲ್ಲಲ್ಪಟ್ಟರು. ಇದಕ್ಕೆ ಪ್ರತಿಯಾಗಿ ಇಂದಿರಾ ಗಾಂಧಿ ಅವರ ಹತ್ಯೆ ಕೂಡ ನಡೆಯಿತು. ಅವರು ತಮ್ಮ ಸಿಖ್ ಅಂಗರಕ್ಷಕರಿಂದಲೇ ಹತ್ಯೆಗೀಡಾದರು.

ಈ ಸುದ್ದಿಯನ್ನೂ ಓದಿ: Fact Check: ಮೊಹಮ್ಮದ್​ ಶಮಿ-ಸಾನಿಯಾ ಮಿರ್ಜಾ ನಿಶ್ಚಿತಾರ್ಥ ಫೋಟೊ ವೈರಲ್​; ಅಸಲಿಯತ್ತು ಇಲ್ಲಿದೆ 

Continue Reading
Advertisement
INDIA Alliance partners Congress and AAP Seal seat deal for Goa, Haryana, Gujarat
ದೇಶ15 mins ago

INDIA Alliance: ದಿಲ್ಲಿ ಬಳಿಕ ಗೋವಾ, ಹರ್ಯಾಣ, ಗುಜರಾತ್‌ನಲ್ಲೂ ಕಾಂಗ್ರೆಸ್-ಆಪ್ ಸೀಟು ಹಂಚಿಕೆ ಫೈನಲ್!

Aryaman Ashok Shankar
ಚಾಮರಾಜನಗರ17 mins ago

Social Sevice : ಶ್ರವಣದೋಷವುಳ್ಳ ಮಕ್ಕಳ ಕೇಂದ್ರಕ್ಕೆ ಕ್ರೀಡಾಪರಿಕರಗಳ ವಿತರಣೆ

ರಾಜಕೀಯ22 mins ago

Karnataka Budget Session 2024: ಈ ಸರ್ಕಾರದಿಂದ ಹಿಂದೂಗಳಿಗೆ ದ್ರೋಹ: ಆರ್‌. ಅಶೋಕ್‌

Mudda Hanumegowda joins Congress
ತುಮಕೂರು22 mins ago

Mudda hanumegowda : ಕೆಲವರ ಅತೃಪ್ತಿ ನಡುವೆ ಮತ್ತೆ ಕೈ ಸೇರಿದ ಮುದ್ದಹನುಮೇಗೌಡ

D. hiremath foundation
ಉತ್ತರ ಕನ್ನಡ41 mins ago

Arun Yogiraj : ರಾಮಲಲ್ಲಾ ವಿಗ್ರಹ ಕೆತ್ತಿದ ಅರುಣ್​ ಯೋಗಿರಾಜ್​ಗೆ ‘ಅಭಿನವ ಅಮರ ಶಿಲ್ಪಿ’ ಪುರಸ್ಕಾರ

For Registration Movie Telugu Dubbing Rights sold for huge amount
ಸಿನಿಮಾ48 mins ago

For Registration Movie: ರಿಲೀಸ್‌ಗೂ ಮೊದ್ಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್! ತೆಲುಗಿಗೂ ಹೊರಟ ಪೃಥ್ವಿ-ಮಿಲನಾ

Uttara Kannada ZP CEO eshwar Kandu visited Dayanilaya specially abled School in Kumta
ಉತ್ತರ ಕನ್ನಡ57 mins ago

Uttara Kannada News: ಸಾಧಿಸುವ ಛಲವಿದ್ದರೆ ಸಾಧನೆಯ ಹಾದಿ ಕಷ್ಟವಲ್ಲ: ಜಿ.ಪಂ ಸಿಇಒ ಈಶ್ವರ ಕಾಂದೂ

Chakravarthi sulibele spoke in Namo Bharat programme at Kudligi
ವಿಜಯನಗರ59 mins ago

Vijayanagara News: ಸರ್ವ ಶ್ರೇಷ್ಠ ಭಾರತಕ್ಕಾಗಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು: ಚಕ್ರವರ್ತಿ ಸೂಲಿಬೆಲೆ

DY Chandrachud
ಪ್ರಮುಖ ಸುದ್ದಿ1 hour ago

C J Chandrachud : ಯೋಗ, ಸಸ್ಯಾಹಾರ; ಒತ್ತಡ ನಿವಾರಣೆ ತಂತ್ರ ವಿವರಿಸಿದ ಸುಪ್ರಿಂ ಕೋರ್ಟ್​​ ಮುಖ್ಯ​ ನ್ಯಾಯಮೂರ್ತಿ

Belagavi Airport recorded the lowest minimum temperature and Dry weather likely to prevail
ಮಳೆ1 hour ago

Karnataka Weather : ಬೆಂಗಳೂರಲ್ಲಿ ಸೂರ್ಯ ಮರೆಯಾದರೂ ಏರಲಿದೆ ತಾಪಮಾನ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ4 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Catton Candy contain cancer Will there be a ban in Karnataka
ಬೆಂಗಳೂರು3 hours ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

Swarnavalli Mutt appoints successor ceremony
ಕರ್ನಾಟಕ6 hours ago

Swarnavalli Mutt: ಸ್ವರ್ಣವಲ್ಲೀ ಶ್ರೀಗಳ ಶಿಷ್ಯ ಸ್ವೀಕಾರ ಸಂಪನ್ನ; ಇಲ್ಲಿದೆ ಲೈವ್‌ ವಿಡಿಯೊ

read your daily horoscope predictions for february 21 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಸಂಗಾತಿಯ ವರ್ತನೆಯು ಕೋಪ, ಮುಜುಗರವನ್ನುಂಟು ಮಾಡುತ್ತೆ!

read your daily horoscope predictions for february 20 2024
ಭವಿಷ್ಯ3 days ago

Dina Bhavishya : ಈ ದಿನ ಆತುರದಲ್ಲಿ ಈ ರಾಶಿಯವರು ಯಾವ ತೀರ್ಮಾನವನ್ನು ಮಾಡ್ಬೇಡಿ!

read your daily horoscope predictions for february 19 2024
ಭವಿಷ್ಯ4 days ago

Dina Bhavishya : ನಿಮ್ಮನ್ನು ದ್ವೇಷಿಸುವವರೇ ಸ್ನೇಹಿತರಾಗಿ ಬದಲಾಗುತ್ತಾರೆ

read your daily horoscope predictions for february 18 2024
ಭವಿಷ್ಯ5 days ago

Dina Bhavishya : ಈ ರಾಶಿಯವರು ಇಂದು ನೀರಿನಂತೆ ಹಣವನ್ನು ಖರ್ಚು ಮಾಡ್ತಾರೆ

Challenging Darsha
ಪ್ರಮುಖ ಸುದ್ದಿ5 days ago

Actor Darshan : ಚಾಲೆಂಜಿಂಗ್ ಸ್ಟಾರ್​ ದರ್ಶನ್​ ‘ಬೆಳ್ಳಿ ಪರ್ವ’ ಕಾರ್ಯಕ್ರಮದ ಲೈವ್​ ಇಲ್ಲಿ ವೀಕ್ಷಿಸಿ

Children lock up their mother for property
ಕರ್ನಾಟಕ5 days ago

Inhuman Behaviour : ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟರು ಮಕ್ಕಳು!

read your daily horoscope predictions for february 17 2024
ಭವಿಷ್ಯ6 days ago

Dina Bhavishya : ಈ ರಾಶಿಯವರು ಸೀಕ್ರೆಟ್‌ ವಿಷ್ಯವನ್ನು ರಿವೀಲ್‌ ಮಾಡಿದ್ರೆ ಅಪಾಯ ಗ್ಯಾರಂಟಿ!

Karnataka Budget Session 2024 siddaramaiah use cinema Lines
ಸಿನಿಮಾ6 days ago

Karnataka Budget Session 2024: ಡಾಲಿ ಧನಂಜಯ್‌ ಬರೆದ ಸಾಲುಗಳು ಬಜೆಟ್‌ನಲ್ಲಿ ಹೈಲೈಟ್‌!

ಟ್ರೆಂಡಿಂಗ್‌