Site icon Vistara News

ಲಿವ್- ಇನ್ ರಿಲೇಷನ್‌ಶಿಪ್ ಟೈಮ್ ಪಾಸ್ ಸಂಬಂಧ! ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ

Marital Rape is no offence Says Allahabad High Court

ನವದೆಹಲಿ: ಪ್ರಕರಣವೊಂದರ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್(Allahabad High Court), ಲಿವ್- ಇನ್ ರಿಲೇಷನ್‌ಶಿಪ್ (Live-in Relationship) ಟೈಮ್ ಪಾಸ್ (Time Pass) ಎಂದು ಅಭಿಪ್ರಾಯಪಟ್ಟಿದೆ. ಲಿವ್ ಲಿವ್-ಇನ್ ಸಂಬಂಧಗಳು ಸ್ಥಿರತೆ ಮತ್ತು ಪ್ರಾಮಾಣಿಕತೆಯ ಕೊರತೆಯ ಗುಣಲಕ್ಷಣಗಳನ್ನು ಹೊಂದಿದ್ದು, ವಿರುದ್ಧ ಲಿಂಗದೆಡೆಗಿನ ಹೆಚ್ಚು ಆಕರ್ಷಣೆಯಾಗಿವೆ ಎಂದು ಹೈಕೋರ್ಟ್ ಹೇಳಿದೆ.

ತಮ್ಮ ಕುಟುಂಬಗಳಿಂದ ಬೆದರಿಕೆಯನ್ನು ಎದುರಿಸುತ್ತಿರುವ ಅಂತರ್ ಧರ್ಮೀಯ ಜೋಡಿ ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ ಮನವಿಯ ತಿಸ್ಕರಿಸಿದ ಪ್ರಕರಣದ ವಿಚಾರಣೆ ವೇಳೆ, ಅಲಹಾಬಾದ್ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ದಂಪತಿಗಳ ಮನವಿಯನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ರಾಹುಲ್ ಚತುರ್ವೇದಿ ಮತ್ತು ಮೊಹಮ್ಮದ್ ಅಜರ್ ಹುಸೇನ್ ಇದ್ರಿಸಿ ನೇತೃತ್ವದ ಪೀಠ, ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ಲಿವ್-ಇನ್ ಸಂಬಂಧವನ್ನು ಮಾನ್ಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಎರಡು ತಿಂಗಳ ಅವಧಿಯಲ್ಲಿ 20-22 ವಯೋಮಿತಿಯ ಜೋಡಿಗಳು, ತಮ್ಮ ತಾತ್ಕಾಲಿಕ ಸಂಬಂಧ ಕುರಿತು ಗಂಭೀರವಾಗಿ ಯೋಜಿಸುತ್ತಾರೆ ಎಂದು ನಾವು ನಿರೀಕ್ಷಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಈ ಸುದ್ದಿಯನ್ನೂ ಓದಿ: Living Together : ಲಿವ್ ಇನ್ ರಿಲೇಷನ್‌ನಲ್ಲಿ ಹೆಚ್ಚಾಯ್ತು ಟಾರ್ಚರ್‌!

ಲಿವ್ ಇನ್ ಎನ್ನುವುದು ಯಾವುದೇ ಪ್ರಾಮಾಣಿಕತೆ ಇಲ್ಲದೆ ವಿರುದ್ಧ ಲಿಂಗದೆಡೆಗಿನ ವ್ಯಾಮೋಹವಾಗಿದೆ. ಜೀವನವು ಗುಲಾಬಿಗಳ ಹಾಸಿಗೆಯಲ್ಲ; ಪ್ರತಿ ದಂಪತಿಗಳನ್ನು ಕಠಿಣ ಮತ್ತು ಕಟು ವಾಸ್ತವಗಳ ನೆಲೆಯಲ್ಲಿ ಪರಿಶೀಲಿಸಬೇಕಾಗುತ್ತದೆ. ನಮ್ಮ ಅನುಭವದ ಪ್ರಕಾರ, ಈ ರೀತಿಯ ಸಂಬಂಧವು ಸಾಮಾನ್ಯವಾಗಿ ಟೈಂಪಾಸ್ ವಾಗಿರುತ್ತದೆ. ತಾತ್ಕಾಲಿಕ ಮತ್ತು ದುರ್ಬಲವಾಗಿರುತ್ತದೆ ಮತ್ತು ತನಿಖೆಯ ಹಂತದಲ್ಲಿ ಅರ್ಜಿದಾರರಿಗೆ ಯಾವುದೇ ರಕ್ಷಣೆ ನೀಡುವುದನ್ನು ನಾವು ತಪ್ಪಿಸುತ್ತಿದ್ದೇವೆ ಎಂದು ಪೀಠ ಹೇಳಿದೆ.

ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣವನ್ನು ರದ್ದು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಈ ಜೋಡಿ, ತಮ್ಮ ಕುಟುಂಬಗಳಿಂದ ಬೆದರಿಕೆಗಳು ಬರುತ್ತಿದ್ದು, ಪೊಲೀಸ್ ರಕ್ಷಣೆ ನೀಡುವಂತೆ ಕೋರಿದ್ದರು. ಆದರೆ, ಅಲಹಾಬಾದ್ ಹೈಕೋರ್ಟ್ ಇವರ ಮನವಿಯನ್ನು ತಿರಸ್ಕರಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version