ಲಿವ್- ಇನ್ ರಿಲೇಷನ್‌ಶಿಪ್ ಟೈಮ್ ಪಾಸ್ ಸಂಬಂಧ! ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ - Vistara News

ಕೋರ್ಟ್

ಲಿವ್- ಇನ್ ರಿಲೇಷನ್‌ಶಿಪ್ ಟೈಮ್ ಪಾಸ್ ಸಂಬಂಧ! ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ

Allahabad High Court: ತಮ್ಮ ಕುಟುಂಬಗಳಿಂದ ಬೆದಿರಿಕೆ ಎದುರಿಸುತ್ತಿದ್ದ ಜೋಡಿಯೊಂದು ಪೊಲೀಸ್ ರಕ್ಷಣೆ ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

VISTARANEWS.COM


on

Marital Rape is no offence Says Allahabad High Court
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಪ್ರಕರಣವೊಂದರ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್(Allahabad High Court), ಲಿವ್- ಇನ್ ರಿಲೇಷನ್‌ಶಿಪ್ (Live-in Relationship) ಟೈಮ್ ಪಾಸ್ (Time Pass) ಎಂದು ಅಭಿಪ್ರಾಯಪಟ್ಟಿದೆ. ಲಿವ್ ಲಿವ್-ಇನ್ ಸಂಬಂಧಗಳು ಸ್ಥಿರತೆ ಮತ್ತು ಪ್ರಾಮಾಣಿಕತೆಯ ಕೊರತೆಯ ಗುಣಲಕ್ಷಣಗಳನ್ನು ಹೊಂದಿದ್ದು, ವಿರುದ್ಧ ಲಿಂಗದೆಡೆಗಿನ ಹೆಚ್ಚು ಆಕರ್ಷಣೆಯಾಗಿವೆ ಎಂದು ಹೈಕೋರ್ಟ್ ಹೇಳಿದೆ.

ತಮ್ಮ ಕುಟುಂಬಗಳಿಂದ ಬೆದರಿಕೆಯನ್ನು ಎದುರಿಸುತ್ತಿರುವ ಅಂತರ್ ಧರ್ಮೀಯ ಜೋಡಿ ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಿದ ಮನವಿಯ ತಿಸ್ಕರಿಸಿದ ಪ್ರಕರಣದ ವಿಚಾರಣೆ ವೇಳೆ, ಅಲಹಾಬಾದ್ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ದಂಪತಿಗಳ ಮನವಿಯನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ರಾಹುಲ್ ಚತುರ್ವೇದಿ ಮತ್ತು ಮೊಹಮ್ಮದ್ ಅಜರ್ ಹುಸೇನ್ ಇದ್ರಿಸಿ ನೇತೃತ್ವದ ಪೀಠ, ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ಲಿವ್-ಇನ್ ಸಂಬಂಧವನ್ನು ಮಾನ್ಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಎರಡು ತಿಂಗಳ ಅವಧಿಯಲ್ಲಿ 20-22 ವಯೋಮಿತಿಯ ಜೋಡಿಗಳು, ತಮ್ಮ ತಾತ್ಕಾಲಿಕ ಸಂಬಂಧ ಕುರಿತು ಗಂಭೀರವಾಗಿ ಯೋಜಿಸುತ್ತಾರೆ ಎಂದು ನಾವು ನಿರೀಕ್ಷಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.

ಈ ಸುದ್ದಿಯನ್ನೂ ಓದಿ: Living Together : ಲಿವ್ ಇನ್ ರಿಲೇಷನ್‌ನಲ್ಲಿ ಹೆಚ್ಚಾಯ್ತು ಟಾರ್ಚರ್‌!

ಲಿವ್ ಇನ್ ಎನ್ನುವುದು ಯಾವುದೇ ಪ್ರಾಮಾಣಿಕತೆ ಇಲ್ಲದೆ ವಿರುದ್ಧ ಲಿಂಗದೆಡೆಗಿನ ವ್ಯಾಮೋಹವಾಗಿದೆ. ಜೀವನವು ಗುಲಾಬಿಗಳ ಹಾಸಿಗೆಯಲ್ಲ; ಪ್ರತಿ ದಂಪತಿಗಳನ್ನು ಕಠಿಣ ಮತ್ತು ಕಟು ವಾಸ್ತವಗಳ ನೆಲೆಯಲ್ಲಿ ಪರಿಶೀಲಿಸಬೇಕಾಗುತ್ತದೆ. ನಮ್ಮ ಅನುಭವದ ಪ್ರಕಾರ, ಈ ರೀತಿಯ ಸಂಬಂಧವು ಸಾಮಾನ್ಯವಾಗಿ ಟೈಂಪಾಸ್ ವಾಗಿರುತ್ತದೆ. ತಾತ್ಕಾಲಿಕ ಮತ್ತು ದುರ್ಬಲವಾಗಿರುತ್ತದೆ ಮತ್ತು ತನಿಖೆಯ ಹಂತದಲ್ಲಿ ಅರ್ಜಿದಾರರಿಗೆ ಯಾವುದೇ ರಕ್ಷಣೆ ನೀಡುವುದನ್ನು ನಾವು ತಪ್ಪಿಸುತ್ತಿದ್ದೇವೆ ಎಂದು ಪೀಠ ಹೇಳಿದೆ.

ವ್ಯಕ್ತಿಯೊಬ್ಬರು ತಮ್ಮ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣವನ್ನು ರದ್ದು ಕೋರಿ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಈ ಜೋಡಿ, ತಮ್ಮ ಕುಟುಂಬಗಳಿಂದ ಬೆದರಿಕೆಗಳು ಬರುತ್ತಿದ್ದು, ಪೊಲೀಸ್ ರಕ್ಷಣೆ ನೀಡುವಂತೆ ಕೋರಿದ್ದರು. ಆದರೆ, ಅಲಹಾಬಾದ್ ಹೈಕೋರ್ಟ್ ಇವರ ಮನವಿಯನ್ನು ತಿರಸ್ಕರಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕೋರ್ಟ್

Umesh Reddy : ಪೆರೋಲ್‌ಗಾಗಿ ತಾಯಿ ಸೆಂಟಿಮೆಂಟ್‌ ಪ್ಲೇ ಮಾಡಿದ ಉಮೇಶ್‌ ರೆಡ್ಡಿ; ನೋ ಎಂದ ಕೋರ್ಟ್‌

Umesh Reddy : ಕುಖ್ಯಾತ ಪಾತಕಿ, ವಿಕೃತ ಕಾಮಿ ಉಮೇಶ್‌ ರೆಡ್ಡಿ ತಾಯಿ ಸೆಂಟಿಮೆಂಟ್‌ ಬಳಸಿಕೊಂಡು ಜೈಲಿನಿಂದ ಪೆರೋಲ್‌ ಮೇಲೆ ಬಿಡುಗಡೆ ಹೊಂದಲು ಪ್ರಯತ್ನ ಮಾಡಿದ್ದ. ಆದರೆ, ಹೈಕೋರ್ಟ್‌ ಅದನ್ನು ತಳ್ಳಿ ಹಾಕಿದೆ.

VISTARANEWS.COM


on

Umesh Reddy parole
Koo

ಬೆಂಗಳೂರು: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ (Death sentence) ಗುರಿಯಾಗಿ ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ಜೀವಾವಧಿ ಶಿಕ್ಷಾ ಬಂಧಿಯಾಗಿರುವ ಉಮೇಶ್‌ ರೆಡ್ಡಿ (Umesh Reddy) ಅಲಿಯಾಸ್‌ ಬಿಎ ಉಮೇಶ್‌ ತಾಯಿ ಸೆಂಟಿಮೆಂಟ್‌ (Mother Sentiment) ಬಳಸಿ ಪೆರೋಲ್‌ ಪಡೆಯಲು ಪ್ರಯತ್ನಿಸಿದ್ದಾನೆ (Plan to get Parole release). ಆದರೆ, ತಾಯಿಯ ಜೊತೆ ಕಳೆಯಲು, ಅವರ ಯೋಗ ಕ್ಷೇಮ ವಿಚಾರಿಸಲು 30 ದಿನ ಪೆರೋಲ್‌ ಬೇಕು ಎಂಬ ಆತನ ಬೇಡಿಕೆಯನ್ನು ಕರ್ನಾಟಕ ಹೈಕೋರ್ಟ್‌ (Karnataka High Court) ತಳ್ಳಿ ಹಾಕಿದೆ.

ಎಲ್ಲರಿಗೂ ತಿಳಿದಿರುವಂತೆ ಉಮೇಶ್‌ ರೆಡ್ಡಿ ಒಬ್ಬ ರೇಪಿಸ್ಟ್‌. ಅತ್ಯಂತ ವಿಕೃತ ಕಾಮಿ. ಆತನ ಮೇಲೆ ಹತ್ತಾರು ಪ್ರಕರಣಗಳಿವೆ. ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಿದ್ದ ಆತ, ಮಹಿಳೆಯರ ಒಳ ಉಡುಪುಗಳನ್ನು ಕದಿಯುವಷ್ಟು ವಿಕೃತನಾಗಿದ್ದ.

ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಉಮೇಶ್‌ ರೆಡ್ಡಿಯನ್ನು 1998ರ ಮಾರ್ಚ್‌ 2ರಂದು ಐಪಿಸಿ ಸೆಕ್ಷನ್‌ಗಳಾದ 302, 376 ಮತ್ತು 392 ಅಡಿ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಮರಡಿ ಸುಬ್ಬಯ್ಯ ಅವರ ಪತ್ನಿ ಜಯಶ್ರೀ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪ ಉಮೇಶ್‌ ರೆಡ್ಡಿಯ ಮೇಲಿತ್ತು. 26-10-2006ರಂದು ರೆಡ್ಡಿಯನ್ನು ಅಪರಾಧಿ ಎಂದು ಘೋಷಿಸಿ, ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. 2009ರ ಫೆ. 18ರಂದು ಹೈಕೋರ್ಟ್‌ನ ತ್ರಿಸದಸ್ಯ ಪೀಠವು ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ 2011ರ ಫೆ. 1ರಂದು ವಜಾ ಮಾಡಿತ್ತು. ಅಂದೇ ಆತ ರಾಜ್ಯಪಾಲರಿಗೆ ಬಳಿಕ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕೃತಗೊಂಡಿತ್ತು.

Umesh Reddy parole
Umesh Reddy parole

2022ರ ನವೆಂಬರ್‌ 4ರಂದು ದೇಶಾದ್ಯಂತ ಇದ್ದ ಗಲ್ಲು ಶಿಕ್ಷೆ ಅಪರಾಧಿಗಳ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಎಲ್ಲರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. 30 ವರ್ಷ ಶಿಕ್ಷೆ ಪೂರ್ಣಗೊಳಿಸಿದ ಬಳಿಕ ಅರ್ಜಿದಾರರು ಕ್ಷಮಾಪಣೆ ಕೋರಿದ್ದರೆ ಅದನ್ನು ಪರಿಗಣಿಸಬಹುದು ಎಂದು ಹೇಳಿತ್ತು. ಅದರ ಪ್ರಕಾರ ಉಮೇಶ್‌ ರೆಡ್ಡಿ 26 ವರ್ಷ ಶಿಕ್ಷೆ ಪೂರೈಸಿದ್ದಾನೆ.

ಇದನ್ನೂ ಓದಿ: Umesh Reddy | ವಿಕೃತ ಕಾಮಿ ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Umesh Reddy : ಈಗ ಉಮೇಶ್‌ ರೆಡ್ಡಿಯ ಬೇಡಿಕೆ ಏನು?

ಉಮೇಶ್‌ ರೆಡ್ಡಿಗೆ ಈಗ 48 ವರ್ಷ. ಅವನ ತಾಯಿ ಅನಾರೋಗ್ಯದಲ್ಲಿದ್ದಾರೆ. ತಾಯಿ ಅಂತಿಮ ದಿನಗಳನ್ನು ಎಣಿಸುತ್ತಿದ್ದು ಅವರ ಜೊತೆ ಕಳೆಯಲು 30 ದಿನಗಳ ಪೆರೋಲ್‌ ರಜೆ ನೀಡಬೇಕು ಎಂದು ಉಮೇಶ್‌ ರೆಡ್ಡಿ ಕೋರಿದ್ದ. ಆದರೆ, ಅರ್ಜಿದಾರ 30 ವರ್ಷ ಶಿಕ್ಷೆ ಪೂರ್ಣಗೊಳಿಸಿಲ್ಲ ಎಂಬ ಸುಪ್ರೀಂ ಕೋರ್ಟ್‌ ಆದೇಶ ಉಲ್ಲೇಖಿಸಿ ಉಮೇಶ್‌ ರೆಡ್ಡಿಯ ಮನವಿಯನ್ನು ಜೈಲಧಿಕಾರಿಗಳು ತಿರಸ್ಕರಿಸಿದ್ದರು. ಅದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ ಮೆಟ್ಟಿಲೇರಿದ್ದ. ಆತನ ಮನವಿಯನ್ನು ಈಗ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

ಪೆರೋಲ್‌ ಮನವಿಗೆ ಪೊಲೀಸ್‌ ಅಧಿಕಾರಿಗಳು ಏನು ಹೇಳಿದ್ದರು?

ಉಮೇಶ್‌ ರೆಡ್ಡಿಯನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಿದರೆ ಹಿಂದಿನ ದ್ವೇಷವು ಆತನ ಬದುಕಿಗೆ ಎರವಾಗಲಿದೆ. ದ್ವೇಷ ಮರುಕಳಿಸಲಿದೆ.ಎಂದು ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರು ಪರಪ್ಪನ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದರು. ಇದನ್ನು ನ್ಯಾಯಾಲಯ ಪರಿಗಣಿಸಿದೆ.

Umesh Reddy parole

ಪೆರೋಲ್‌ ನಿರಾಕರಿಸಲು ಕೋರ್ಟ್‌ ಕೊಟ್ಟ ಕಾರಣಗಳೇನು?

 1. ಉಮೇಶ್‌ ರೆಡ್ಡಿ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ನೋಡಿಕೊಳ್ಳಬೇಕಿದೆ ಎಂದು ವಾದಿಸಲಾಗಿದೆ. ಆದರೆ, ವರದಿಯಲ್ಲಿ ಬೇರೆಯದೇ ಅಂಶವಿದೆ. ಉಮೇಶ್‌ ರೆಡ್ಡಿಗೆ ಇಬ್ಬರು ಸಹೋದರರಿದ್ದು, ಅವರು ತಾಯಿಯನ್ನು ನೋಡಿಕೊಳ್ಳುವುದರ ಜೊತೆಗೆ ಶಿಥಿಲಗೊಂಡಿರುವ ಮನೆಯನ್ನು ಸರಿಪಡಿಸಲಿದ್ದಾರೆ. ಅರ್ಜಿದಾರರು ಪೆರೋಲ್‌ ಕೋರಲು ನೀಡಿರುವ ಮೇಲಿನ ಎರಡೂ ಕಾರಣಗಳು ಸಮರ್ಥನೀಯವಲ್ಲ.
 2. ಪ್ರತಿಯೊಂದು ಪ್ರಕರಣದಲ್ಲಿಯೂ ಮನವಿ ಮಾಡಿದಾಕ್ಷಣ ಪೆರೋಲ್‌ ನೀಡಲಾಗದು. ಪೆರೋಲ್‌ ನೀಡುವಾಗ ನಾಣ್ಯದ ಎರಡೂ ಮುಖಗಳನ್ನು ಪರಿಶೀಲಿಸಬೇಕಿದೆ. ಶಿಕ್ಷೆಯ ಸುಧಾರಣಾ ಸಿದ್ಧಾಂತದಲ್ಲಿ ಇರುವ ಪೆರೋಲ್ ಮಂಜೂರು ಮಾಡುವ ಅವಶ್ಯಕತೆಯನ್ನು ಗಮನಿಸುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವನ್ನು ಪರಿಗಣಿಸಬೇಕಾಗಿದೆ.
 3. ವಿಶೇಷವಾಗಿ ಅಪರಾಧಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವಾಗ ನಾಣ್ಯದ ಮತ್ತೊಂದು ಮುಖವನ್ನು ನಗಣ್ಯವಾಗಿ ಕಾಣಲಾಗದು. ಉಮೇಶ್‌ ರೆಡ್ಡಿಯನ್ನು ಇತರೆ ಅಪರಾಧಿಗಳಂತೆ ನೋಡಿ, ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಗದು.
 4. 30 ವರ್ಷ ಶಿಕ್ಷೆ ಅನುಭವಿಸಿದರೆ ಪೆರೋಲ್‌ ನೀಡಬಹುದು ಎಂಬ ನಿಯಮವು ಅಸ್ಫಾಖ್‌ ಪ್ರಕರಣದಲ್ಲಿನಂತೆ ಎಲ್ಲದಕ್ಕೂ ಅನ್ವಯಿಸದು. ಹೀಗಾಗಿ, ಪೆರೋಲ್‌ ಕೋರಿರುವ ಉಮೇಶ್‌ ರೆಡ್ಡಿ ಪುರಸ್ಕರಿಸಲಾಗದು.

ಉಮೇಶ್‌ ರೆಡ್ಡಿ ಪರ ವಕೀಲರ ವಾದವೇನಿತ್ತು?

 1. ಅರ್ಜಿದಾರರ ಉಮೇಶ್‌ ರೆಡ್ಡಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಸ್ಮತ್‌ ಪಾಷಾ ಪೆರೋಲ್‌ ನೀಡಬಹುದು ಎಂದು ವಾದಿಸಿ ಹಲವು ಕಾರಣ ನೀಡಿದ್ದರು.
 2. ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿದ್ದು, ಅಪರಾಧಿಯು ಇತರೆ ಅಪರಾಧಿಗಳಂತೆ ಆಗಿದ್ದಾನೆ.
 3. ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಅರ್ಥೈಸಿ, ವ್ಯಾಖ್ಯಾನಿಸಲಾಗಿದೆ. 30 ವರ್ಷ ಪೂರ್ಣಗೊಳಿಸುವವರೆಗೆ ಅಪರಾಧಿಯು ಕ್ಷಮಾದಾನ ಕೋರಲಾಗದು ಎಂದು ಹೇಳಲಾಗಿದೆ. ಇದು ಉಮೇಶ್‌ ರೆಡ್ಡಿ ಪೆರೋಲ್‌ ಕೋರಿರುವುದಕ್ಕೆ ಅನ್ವಯಿಸುವುದಿಲ್ಲ.
 4. ಆತನ ತಾಯಿ ಅನಾರೋಗ್ಯದಿಂದ ಬಳಲುತ್ತಿರುವುದಕ್ಕಾಗಿ 30 ದಿನ ಪೆರೋಲ್‌ ಮೇಲೆ ಬಿಡುಗಡೆ ಮಾಡಬೇಕು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಹೇಳಿದ್ದೇನು?

ಸರ್ಕಾರದ ಪರವಾಗಿ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸಿ ಎಸ್‌ ಪ್ರದೀಪ್‌ ಅವರು ಪೆರೋಲ್‌ ಯಾಕೆ ಕೊಡಬಾರದು ಎಂದು ಹಲವು ಅಂಶಗಳನ್ನು ಮುಂದಿಟ್ಟಿದ್ದರು.

 1. ಪ್ರತಿಯೊಬ್ಬ ಅಪರಾಧಿಯನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಗದು.
 2. ಅಪರಾಧಿಯೊಬ್ಬನನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡುವಾಗ ಹಲವು ವಿಚಾರಗಳನ್ನು ಪರಿಗಣಿಸಬೇಕಾಗುತ್ತದೆ.
 3. ಅರ್ಜಿದಾರ ಕ್ಷಮಾಪಣೆಗೆ ಅರ್ಹವಾಗಿಲ್ಲದಾಗಿರುವಾಗ ಅವರನ್ನು ಪೆರೋಲ್‌ ಮೇಲೆ ಬಿಡುಗಡೆ ಮಾಡಲಾಗದು.
 4. ರೆಡ್ಡಿ ಬಿಡುಗಡೆ ಮಾಡುವುದರಿಂದ ಆತನ ಪ್ರಾಣಕ್ಕೆ ಅಪಾಯವಿದ್ದು, ಪೆರೋಲ್‌ ಪಡೆಯಲು ಆತ ಅರ್ಹನಲ್ಲ.
 5. ರೆಡ್ಡಿಯು ಭಯಾನಕ ಕ್ರಿಮಿನಲ್‌ ಆಗಿದ್ದಾನೆ. ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದ ರೆಡ್ಡಿ ಸರಣಿ ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡಿದ್ದಾನೆ. ಆತ ಸೀರಿಯಲ್‌ ಕಿಲ್ಲರ್‌ ಎಂದೇ ಕುಖ್ಯಾತಿ ಪಡೆದಿದ್ದಾನೆ. ಹೀಗಾಗಿ, ಆತನಿಗೆ ಪೆರೋಲ್‌ ನೀಡಬಾರದು.
Continue Reading

ಬಾಗಲಕೋಟೆ

Bagalkot News : ಕೂಲಿ ಕುಟುಂಬದಿಂದ ಬಂದ ಯುವತಿ ಈಗ ಸಿವಿಲ್‌ ನ್ಯಾಯಾಧೀಶೆ!

Civil Judge : ಕನ್ನಡ ಮೀಡಿಯಂನಲ್ಲಿ ಓದಿದ ಗ್ರಾಮೀಣ ಪ್ರತಿಭೆ ಈಗ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆ (BhagyaShree Madara) ಆಗಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

VISTARANEWS.COM


on

By

Bhagyashree Madara Selected as civil judge Bagalkote
Koo

ಬಾಗಲಕೋಟೆ: ಜ್ಞಾನವೆಂಬುದು ಯಾರಪ್ಪನ ಸ್ವತ್ತು ಅಲ್ಲ. ಸಾಧನೆಗೆ ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲ. ಸಾಧಿಸುವ ಛಲವೊಂದು ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಿವಿಲ್‌ ನ್ಯಾಯಾಧೀಶೆ ಹುದ್ದೆಗೆ ಆಯ್ಕೆಯಾಗಿರುವ ಭಾಗ್ಯಶ್ರೀ ಮಾದರ ಅವರೇ ಸಾಕ್ಷಿ.. ಬಾಗಲಕೋಟೆಯ (Bagalkot News) ಗಂಗೂರ ಗ್ರಾಮದ ಭಾಗ್ಯಶ್ರೀ ಮಾದರ ಅವರು ಬಡ ಕುಟುಂಬದವರು. ತಂದೆ, ತಾಯಿ ಕೂಲಿ ಮಾಡಿ ಮಕ್ಕಳನ್ನು ಓದಿಸಿದ್ದರು. ಕನ್ನಡ ಮೀಡಿಯಂ ಸ್ಟೂಡೆಂಟ್‌ ಆದ ಭಾಗ್ಯಶ್ರೀ 2023ರಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇದೀಗ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆ ಆಗಿದ್ದಾರೆ.

ತಂದೆಯ ಹಠವೇ ಸಾಧನೆಗೆ ಪ್ರೇರಣೆ

ನ್ಯಾಯಾಧೀಶೆಯಾಗುವ ನನ್ನ ಕನಸನ್ನು ನನಸಾಗಿಸಿಕೊಂಡಿದ್ದೇನೆ. ತಂದೆಯ ಹಠವೇ ನನ್ನ ಈ ಸಾಧನೆಗೆ ಪ್ರೇರಣೆ ಆಯಿತು. ತಂದೆ-ತಾಯಿಯ ತ್ಯಾಗದಿಂದಲೇ ನ್ಯಾಯಾಧೀಶೆಯಾಗಲು ಕಾರಣವಾಯಿತು ಎಂದು ಭಾಗ್ಯಶ್ರೀ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಎಲ್ಎಲ್​ಬಿ ಪದವಿಯನ್ನು ನಂದಿಮಠ ಕಾಲೇಜಿನಲ್ಲಿ ಪಡೆದ ಭಾಗ್ಯಶ್ರೀಗೆ ತಾವು ಸೋತಾಗ, ತಾಳ್ಮೆ ಕಳೆದುಕೊಂಡ ಮಹಾಭಾರತ, ಭಗವದ್ಗೀತೆಯೇ ಸ್ಫೂರ್ತಿ ಆಗಿದೆ ಅಂತೆ. ಡಾ. ಬಿ.ಆರ್‌. ಅಂಬೇಡ್ಕರ್ ಅವರ ರೀತಿಯಲ್ಲಿ ಕರ್ತವ್ಯದಲ್ಲಿ ನಿರತಳಾಗಬೇಕೆಂದು ಆಸೆ ಹೊಂದಿದ್ದಾರೆ. ಮುಂದಿನ ದಿನದಲ್ಲಿ ಜಿಲ್ಲಾ ನ್ಯಾಯಾಧೀಶೆಯಾಗುವ ಗುರಿಯೂ ಇದ್ದು, ಇದಕ್ಕಾಗಿ ತಯಾರಿ ನಡೆಸುವುದಾಗಿ ತಿಳಿಸಿದ್ದಾರೆ.

ಕೂಲಿ ಮಾಡಿ ಮಗಳ ಕನಸು ನನಸು

ಭಾಗ್ಯಶ್ರೀ ತಂದೆ ದುರ್ಗಪ್ಪ, ತಾಯಿ ಯಮನವ್ವ ಬಡವರು. ಕೂಲಿನಾಲಿ ಮಾಡುವ ಈ ದಂಪತಿ ಇಬ್ಬರೂ ಅನಕ್ಷರಸ್ಥರಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ. ದುರ್ಗಪ್ಪ, ಯಮನವ್ವ ದಂಪತಿಯ ಏಳು ಮಕ್ಕಳ ಪೈಕಿ ಭಾಗ್ಯಶ್ರೀ 5ನೇಯವರು. 2018ರಲ್ಲಿ ಕಾನೂನು ಪದವಿ ಪಡೆದಿರುವ ಭಾಗ್ಯಶ್ರೀ, ಹುನಗುಂದ ಕೋರ್ಟ್​ನಲ್ಲಿ 2018-20ರವರೆಗೆ ಎರಡು ವರ್ಷಗಳ ಕಾಲ ವಕೀಲ ವೃತ್ತಿ ಆರಂಭಿಸಿದ್ದರು.

ಇದನ್ನೂ ಓದಿ: Anil John Sequeira : ಬಂಟ್ವಾಳ ಯುವಕನ ಅಪರೂಪದ ಸಾಧನೆ; 25ನೇ ವಯಸ್ಸಿಗೆ ನ್ಯಾಯಾಧೀಶರಾಗಿ ಆಯ್ಕೆ

ಎರಡು ಬಾರಿ ಫೇಲ್‌ ಆಗಿದ್ದ ಭಾಗ್ಯಶ್ರೀ

2021-22ರವರೆಗೆ ಹೈಕೋರ್ಟ್​ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಶುರು ಮಾಡಿದ್ದ ಭಾಗ್ಯಶ್ರೀ, ಲಾ ಕ್ಲರ್ಕ್ ಕಂ ರಿಸರ್ಚ್ ಅಸಿಸ್ಟೆಂಟ್ ಹುದ್ದೆ ನಿರ್ವಹಣೆಯನ್ನೂ ಮಾಡುತ್ತಿದ್ದರು. ಕೆಲಸದ ಜತೆ ಜತೆಗೆ ನ್ಯಾಯಧೀಶೆ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುತ್ತಿದ್ದರು.

2021ರಲ್ಲಿ ಮೊದಲ ಬಾರಿ ಪರೀಕ್ಷೆ ಬರೆದಾಗ ಪಾಸ್‌ ಆಗಿದ್ದ ಭಾಗ್ಯಶ್ರೀ ಮೌಖಿಕ ಸಂದರ್ಶನದಲ್ಲಿ ಆಯ್ಕೆ ಆಗಿರಲಿಲ್ಲ. ಆದರೂ ಪ್ರಯತ್ನ ಬಿಡದೇ 2022ರಲ್ಲಿ ಮತ್ತೊಮ್ಮೆ ಎಲ್ಲ ಪರೀಕ್ಷೆಗಳನ್ನೂ ಪಾಸ್ ಮಾಡಿದ್ದರು. ಆದರೆ ಮತ್ತೆ ಮೌಖಿಕ ಪರೀಕ್ಷೆಯಲ್ಲಿ ಸರಿಯಾಗಿ ಉತ್ತರಿಸದೇ ಅವಕಾಶವನ್ನು ಕಳೆದುಕೊಂಡಿದ್ದರು. ಇದರಿಂದ ಬೇಸರಗೊಂಡ ಭಾಗ್ಯಶ್ರೀ ತಾವು ಹೋಗುತ್ತಿದ್ದ ವಕೀಲಿ ವೃತ್ತಿಯನ್ನು ಬಿಟ್ಟು, ಮೂರನೇ ಬಾರಿಗೆ ಮಾಡಿದ ಪ್ರಯತ್ನದಲ್ಲಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೋರ್ಟ್

Physical Abuse : ಯುವತಿಯನ್ನು ಪ್ರವಾಸಕ್ಕೆ ಕರೆದೊಯ್ದು ಗ್ಯಾಂಗ್ ರೇಪ್‌; ಇಬ್ಬರು ಕಿರಾತಕರಿಗೆ 20 ವರ್ಷ ಜೈಲು

Physical Abuse : ಜತೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರವಾಸಕ್ಕೆ ಕರೆದೊಯ್ದು ಗ್ಯಾಂಗ್‌ ರೇಪ್‌ ಮಾಡಿದ ಇಬ್ಬರು ದುಷ್ಟರಿಗೆ ಗಂಗಾವತಿ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ. ಇದು 9 ವರ್ಷಗಳ ಹಿಂದೆ ನಡೆದ ಘಟನೆ.

VISTARANEWS.COM


on

Physical abuse
Koo

ಗಂಗಾವತಿ: ಕಚೇರಿಯಲ್ಲಿ ತಮ್ಮ ಜತೆಗೇ ಕೆಲಸ ಮಾಡುತ್ತಿದ್ದ ಯುವತಿಯನ್ನು (Colleague in Office) ಪ್ರವಾಸಕ್ಕೆಂದು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ (Physical Abuse) ಮಾಡಿದ ಇಬ್ಬರು‌ ಕಿರಾತಕರಿಗೆ ಗಂಗಾವತಿ ಕೋರ್ಟ್‌ (Gangavati Court) 20 ವರ್ಷಗಳ ಜೈಲು ಶಿಕ್ಷೆ (20 Years jail term) ವಿಧಿಸಿದೆ.

2015ರಲ್ಲಿ ನಡೆದ ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ, ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳಿಗೆ ತಲಾ ಮೂರು ಲಕ್ಷ ರೂಪಾಯಿ ದಂಡ ಮತ್ತು 20 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.

ಇಬ್ಬರು ಕಿರಾತಕರು ಸಹೋದ್ಯೋಗಿ ಯುವತಿಯನ್ನು ಜತೆಗೆ ಕರೆದೊಯ್ದು ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ನಿದ್ರೆಯ ಮಂಪರಿನಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಮಾಡಿದ್ದು ಸಾಬೀತಾಗಿತ್ತು. ದಂಡ ಪಾವತಿಯಲ್ಲಿ ವಿಫಲವಾದರೆ ಹೆಚ್ಚುವರಿ ಐದು ವರ್ಷ ಸಜೆ ವಿಧಿಸಲಾಗಿದೆ.

ಆರೋಪಿಗಳನ್ನು ಉತ್ತರ ಪ್ರದೇಶದ ಫಾರೂಕಾಬಾದ್‌ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್ ರೋಹಿತ್ ಪ್ರಮೋದ್ ಮಂಗಲಿಕ್ ಮತ್ತು ರಾಜಸ್ತಾನದ ಸಿಕ್ಕರ್ ಜಿಲ್ಲೆಯ ರಾಜಕುಮಾರ ಮದನಾಲ್ ಸೈನಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಪಶ್ಚಿಮ ಬಂಗಾಳದ ಸಂತ್ರಸ್ತ ಯುವತಿ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಒಂಬತ್ತು ವರ್ಷದ ಹಿಂದೆ ನಡೆದಿದ್ದೇನು?

ಆರೋಪಿಗಳು ಮತ್ತು ಸಂತ್ರಸ್ತ ಯುವತಿ ಹೈದರಾಬಾದಿನ ಡಿ.ಇ ಮತ್ತು ಶಾ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2015ರಲ್ಲಿ ಅವರೆಲ್ಲರೂ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಹೋಬಳಿಯ ವಿರುಪಾಪುರ ಗಡ್ಡೆಗೆ ಪ್ರವಾಸಕ್ಕೆ ಬಂದಿದ್ದರು.

ಯುವತಿಯನ್ನು ಪ್ರವಾಸದ ನೆಪದಲ್ಲಿ ಧೈರ್ಯ ತುಂಬಿ ಕರೆತಂದಿದ್ದ ಯುವಕರು ಅಲ್ಲಿನ ಹೇಮಾ ಗೆಸ್ಟ್ ಹೌಸ್ ಎಂಬಲ್ಲಿ ರೂಂ ಬಾಡಿಗೆ ಪಡೆದುಕೊಂಡಿದ್ದರು.

ರಾತ್ರಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಯುವತಿ ಸೇವಿಸುತ್ತಿದ್ದ ತಂಪು ಪಾನೀಯದಲ್ಲಿ ಆಕೆಗೆ ಗೊತ್ತಾಗದಂತೆ ಮತ್ತು ಬರಿಸುವ ಮಾದಕ ದ್ರವ್ಯ ಸೇರಿಸಿ ಕುಡಿಸಿದ್ದಾರೆ. ಬಳಿಕ ಆಕೆ ನಿದ್ರೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ : Physical Abuse : ಮೇಕೆ ಮೇಯಿಸುತ್ತಿದ್ದವಳ ಕೈ-ಕಾಲು ಕಟ್ಟಿ ಅತ್ಯಾಚಾರವೆಸಗಿದ; 16ರ ಬಾಲೆ ಈಗ 7 ತಿಂಗಳ ಗರ್ಭಿಣಿ

ಆಕೆ ನಿದ್ದೆ ಮತ್ತು ಮತ್ತಿನಲ್ಲಿದ್ದಾಗ ಈ ಯುವಕರು ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಆರೋಪಿಸಿ ದೂರು ದಾಖಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ಗಂಗಾವತಿ ಗ್ರಾಮೀಣ ಠಾಣೆಯ ಅಂದಿನ ಸಿಪಿಐ ಪ್ರಭಾಕರ ಧರ್ಮಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಪರವಾಗಿ ಸರ್ಕಾರಿ ಅಭಿಯೋಜಕಿ ಎಸ್. ನಾಗಲಕ್ಷ್ಮಿ ವಾದ ಮಂಡಿಸಿದ್ದರು.  

Continue Reading

ಕೋರ್ಟ್

POCSO Case : ಅಪ್ರಾಪ್ತೆ ಜತೆ ಲೈಂಗಿಕ ಸಂಬಂಧ ಎಲ್ಲ ಸಂದರ್ಭದಲ್ಲಿ ಅಪರಾಧವಲ್ಲ ಎಂದ ಕೋರ್ಟ್‌

POCSO Case : ಅಪ್ರಾಪ್ತ ವಯಸ್ಕರೊಂದಿಗೆ ಸಮ್ಮತಿಯಿಂದ ನಡೆಸುವ ಲೈಂಗಿಕ ಸಂಭೋಗವು ನಡೆಸುವುದು ಪೋಕ್ಸೊ ಕಾಯಿದೆ ಅಡಿ ಅಪರಾಧವೇ ಆದರೂ ಕೆಲವೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ ಮಾಡಬೇಕಾಗುತ್ತದೆ ಎಂದಿದೆ ಕೋರ್ಟ್‌

VISTARANEWS.COM


on

POCSO Case
Koo

ಬೆಂಗಳೂರು: ಪೋಕ್ಸೋ ಕಾಯಿದೆ (POCSO Case) ಇರುವುದು ಅಪ್ರಾಪ್ತ ಹೆಣ್ಮಕ್ಕಗಳನ್ನು ಲೈಂಗಿಕ ದೌರ್ಜನ್ಯದಿಂದ (Sexual Harrassment) ರಕ್ಷಿಸಲು. ಹಾಗಂತ, ಪರಿಣಾಮ ಅರಿಯದೆ ಬೆಳೆಸಿದ ಲೈಂಗಿಕ ಸಂಬಂಧವನ್ನು (Sexual Relationship) ಅಪರಾಧ ಎಂದು ಪರಿಗಣಿಸಲಾಗದು ಎಂಬ ವಿಶಿಷ್ಟ ತೀರ್ಪನ್ನು ನೀಡಿದೆ ರಾಜ್ಯ ಹೈಕೋರ್ಟ್‌ (karnataka High court). ವಿಶೇಷ ಪ್ರಕರಣವೊಂದರಲ್ಲಿ ಈ ರೀತಿ ಹೇಳಿದ ಕೋರ್ಟ್‌ ಯುವಕನ ಮೇಲಿನ ಮೊಕದ್ದಮೆಯನ್ನು ರದ್ದುಗೊಳಿಸಿದೆ.

ಆಂಧ್ರ ಪ್ರದೇಶ ಮೂಲದ 20ರ ಹರೆಯದ ಯುವಕನೊಬ್ಬ 16 ಹರೆಯದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಪ್ರಾಪ್ತೆ ವರಿಸಿದ್ದಕ್ಕಾಗಿ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 366(ಎ), 376(1) ಮತ್ತು ಪೋಕ್ಸೊ ಕಾಯಿದೆ 2012ರ ಸೆಕ್ಷನ್ 4 ಹಾಗೂ 6 ಮತ್ತು 2006ರ ಬಾಲ್ಯ ವಿವಾಹ (Child Marraiage) ಕಾಯಿದೆಯ 9ರ ಅಡಿಯಲ್ಲಿ ಹೊರಿಸಲಾದ ಆರೋಪಗಳನ್ನು ದಾಖಲಿಸಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಯುವಕ ಹೈಕೋರ್ಟ್ ಮೇಟ್ಟಿಲೇರಿದ್ದ. ಕೋರ್ಟ್‌ ಈಗ ಪರಿಸ್ಥಿತಿಯನ್ನು ಅವಲೋಕಿಸಿ ಅವನಿಗೆ ರಕ್ಷಣೆ ನೀಡಿದೆ. ಇಲ್ಲಿ ಬಾಲಕಿ ಮತ್ತು ಬಾಲಕಿಯ ತಾಯಿ ಇಬ್ಬರೂ ಕೂಡಾ ಜೀವನೋಪಾಯಕ್ಕಾಗಿ ಆತನ ಮೇಲೆ ಅವಲಂಬಿತರಾಗಿರುವುದನ್ನು ಪರಿಗಣಿಸಿದ ಕೋರ್ಟ್‌ ಇಂಥ ತೀರ್ಪನ್ನು ನೀಡಿದೆ. ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಇದನ್ನೂ ಓದಿ : POCSO Case : ಕುಂಟೆಬಿಲ್ಲೆ ಆಟವಾಡುತ್ತಿದ್ದ ಬಾಲಕಿಯನ್ನು ಎಳೆದೊಯ್ದು ರೇಪ್; ಕುಡುಕ ಯುವಕನ ಕೃತ್ಯ

ಕೋರ್ಟ್‌ ಪರಿಗಣಿಸಿದ ಅಂಶಗಳು ಯಾವುದು?

 1. ಕಾನೂನಿನ ಅರಿವಿಲ್ಲದೇ ಅರ್ಜಿದಾರ ಹಾಗೂ ಮಗಳ ಮದುವೆ ಅನೀರಿಕ್ಷಿತವಾಗಿ ನಡೆದಿದೆ. ಬಳಿಕ ಮಗಳು ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ವಿವಾಹಕ್ಕೆ ಕಾನೂನುಬದ್ಧ ವಯಸ್ಸು ತಲುಪಿದ ಕೂಡಲೇ ದಂಪತಿ ಕಾನೂನಿನ ಅಡಿಯಲ್ಲಿ ವಿವಾಹ ನೋಂದಾಯಿಸಿಕೊಳ್ಳುತ್ತಾರೆ ಎಂದು ಪೀಠದ ಮುಂದೆ ಅಪ್ರಾಪ್ತ ಬಾಲಕಿ ಹಾಗೂ ತಾಯಿ ಜಂಟಿಯಾಗಿ ಅಫಿಡವಿಟ್ ಸಲ್ಲಿಸಿದನ್ನು ನ್ಯಾಯಾಲಯ ಪರಿಗಣಿಸಿದೆ.
 2. ಹುಡುಗಿಯ ಪಾಲಕರು ಆರ್ಥಿಕವಾಗಿ ದುರ್ಬಲರಾಗಿದ್ದು, ತಾಯಿ ಹಾಗೂ ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತಾಗಿರುವುದನ್ನು ಗಮನಿಸಿದ್ದು, ಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿದ್ದರೆ ಕುಟುಂಬ ಸಂಕಷ್ಟಕ್ಕೀಡಾಗುತ್ತದೆ. ಪತ್ನಿ ಹಾಗೂ ಮಗು ದುಃಖಮಯ ಬದುಕು ಸಾಗಿಸಬೇಕಾಗುತ್ತದೆ. ಇವುಗಳೆಲ್ಲವನ್ನು ಗಣನೆಗೆ ಪಡೆದುಕೊಂಡ ಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ.

ಪ್ರಕರಣದ ಬಗ್ಗೆ ಕೋರ್ಟ್‌ ಹೇಳಿದ್ದೇನು?

 1. ಪೋಕ್ಸೊ ಕಾಯಿದೆಯ ಉದ್ದೇಶವು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದು. ಪರಿಣಾಮ ಅರಿಯದೆ ಪರಸ್ಪರ ಸಮ್ಮತಿಯಿಂದ ಹರಿಹರೆಯದ ಇಬ್ಬರು ಲೈಂಗಿಕ ಸಂಭೋಗ ನಡೆಸುವುದು ಅಪರಾಧವಲ್ಲ ಎಂದು ಕೋರ್ಟ್‌ ಹೇಳಿದೆ.
 2. ಯುವಕ ಹಾಗೂ ಬಾಲಕಿ ಇಬ್ಬರೂ ಸಮಾಜದ ಆರ್ಥಿಕ ಹಿಂದುಳಿದ ವರ್ಗದಿಂದ ಬಂದವರು. ಹೀಗಾಗಿ ಪ್ರಕರಣ ಸಂಬಂಧ ಪರಿಣಾಮಗಳ ಕುರಿತು ಮಾಹಿತಿಯಿಂದ ವಂಚಿತರಾಗಿದ್ದಾರೆ. ಹೀಗಾಗಿ ಶಿಕ್ಷೆ ನೀಡಬೇಕಾಗಿಲ್ಲ.
 3. ಅಪ್ರಾಪ್ತ ವಯಸ್ಕರೊಂದಿಗೆ ಸಮ್ಮತಿಯಿಂದ ಲೈಂಗಿಕ ಸಂಭೋಗವು ನಡೆಸುವುದು ಪೋಕ್ಸೊ ಕಾಯಿದೆ ಅಡಿ ಅಪರಾಧವಾಗಿದ್ದರೂ ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಪರಿಗಣಿಸಿ ದೋಷಾರೋಪಾ ಪ್ರಕ್ರಿಯೆ ರದ್ದುಗೊಳಿಸಲಾಗುತ್ತಿದೆ. ಇಲ್ಲವಾದಲ್ಲಿ ಬಾಲಕಿ ಮತ್ತು ಮಗು ನ್ಯಾಯವೈಫಲ್ಯತೆ ಎದುರಿಸಬೇಕಾಗಬಹುದು.
Continue Reading
Advertisement
Yuva Movie song
ಕರ್ನಾಟಕ4 hours ago

Yuva Rajkumar: ಅಭಿಮಾನಿಗಳಿಂದ ʼಯುವʼ ಚಿತ್ರದ ಮೊದಲ ಸಾಂಗ್‌ ರಿಲೀಸ್‌; ಮಾಸ್ ಲುಕ್‌ನಲ್ಲಿ ಯುವ ರಾಜಕುಮಾರ್

Shashi Tharoor And Rajeev Chandrasekhar
ದೇಶ4 hours ago

ಬಿಜೆಪಿ ಪಟ್ಟಿ ಪ್ರಕಟ: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ Vs ಶಶಿ ತರೂರ್?‌

HIGH dose injection
ಕರ್ನಾಟಕ5 hours ago

ಕೃತಕ ಗರ್ಭಧಾರಣೆಗೆ ಹೈ ಡೋಸ್ ಇಂಜೆಕ್ಷನ್‌; ಖಾಸಗಿ ಆಸ್ಪತ್ರೆ ಎಡವಟ್ಟಿಗೆ ಕಣ್ಣು‌ ಕಳೆದುಕೊಂಡ ಮಹಿಳೆ!

Narendra Modi
ದೇಶ5 hours ago

Narendra Modi: ಬಿಜೆಪಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆಗೆ ಮೋದಿ ಸಂದೇಶ; ಏನದು?

Sophie Devine and Smriti Mandhana warm up ahead of their fourth game
ಕ್ರಿಕೆಟ್5 hours ago

WPL Points Table: ಹೀನಾಯ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡ ಆರ್​ಸಿಬಿ

Pralhad Joshi
ಕರ್ನಾಟಕ6 hours ago

ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ: ಪ್ರಲ್ಹಾದ್‌ ಜೋಶಿ ಭರವಸೆ

Nat Sciver-Brunt celebrates the dismissal of S Meghana
ಕ್ರೀಡೆ6 hours ago

WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

Banavasi Kadambotsava Minister Mankala Vaidya inspected the preparations
ಉತ್ತರ ಕನ್ನಡ6 hours ago

Uttara Kannada News: ಬನವಾಸಿ ಕದಂಬೋತ್ಸವ; ಪೂರ್ವ ಸಿದ್ಧತೆ ಪರಿಶೀಲಿಸಿದ ಸಚಿವ ಮಂಕಾಳ ವೈದ್ಯ

police 1
ಕರ್ನಾಟಕ7 hours ago

ಐಪಿಎಸ್ ಅಧಿಕಾರಿಯಾದ ಕ್ಯಾನ್ಸರ್‌ ಪೀಡಿತ ಬಾಲಕ; ಕನಸು ಈಡೇರಿಸಿ ಮಾನವೀಯತೆ ಮೆರೆದ ಪೊಲೀಸರು

Mukesh Ambani Cries
ದೇಶ7 hours ago

ಮದುವೆ ಪೂರ್ವ ಸಂಭ್ರಮದಲ್ಲಿ ಮಗನ ದುಃಖ ಕೇಳಿ ಗಳಗಳನೆ ಅತ್ತ ಮುಕೇಶ್‌ ಅಂಬಾನಿ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameswaram cafe bomb blast case Accused caught on CCTV
ಬೆಂಗಳೂರು11 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು15 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು1 day ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು2 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ4 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ5 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

ಟ್ರೆಂಡಿಂಗ್‌