ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಸ್‌ನಲ್ಲಿ ನಡೆಯೋ ಪ್ರಯಾಣಿಕರ ಗಲಾಟೆ, ಜಗಳಕ್ಕಿಂತ ಹೆಚ್ಚಾಗಿ ವಿಮಾನದಲ್ಲಿ ನಡೆಯೋ ಕಿರಿಕ್‌ಗಳ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ವಿಮಾನದೊಳಗೆ ಪ್ರಯಾಣಿಕರ ನಡುವೆ ಗಲಾಟೆ, ಹೊಡೆದಾಟ ನಡೆದಿರುವ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಮತ್ತೊಂದು ಘಟನೆ ಬೆಳಕಿಗೆ ಬಂದಿದೆ(Lohegaon airport). ಮಹಿಳೆಯೊಬ್ಬಳು ಸಹಪ್ರಯಾಣಿಕರು ಮತ್ತು ಸಿಐಎಸ್‌ಎಫ್ ಕಾನ್‌ಸ್ಟೆಬಲ್(CISF Constable) ಮೇಲೆ ಹಲ್ಲೆ ನಡೆಸಿದ್ದಾಳೆ(Viral News).
ಖಾಸಗಿ ವಿಮಾನದಲ್ಲಿ ನವದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಪುಣೆಯ ಲೋಹೆಗಾಂವ್ ಏರ್‌ಪೋರ್ಟ್‌ನಲ್ಲಿ ಇಬ್ಬರು ಸಹ ಪ್ರಯಾಣಿಕರು ಮತ್ತು ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ನಂತರ ಆಕೆಯನ್ನು ವಿಮಾನದಿಂದ ಹೊರಗೆ ಕಳುಹಿಸಲಾಯಿತು. ಬೋರ್ಡಿಂಗ್ ಪ್ರಕ್ರಿಯೆ ವೇಳೆ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಮಹಿಳೆ ಆರಂಭದಲ್ಲಿ ತಮ್ಮ ನಿಯೋಜಿತ ಸ್ಥಳಗಳಲ್ಲಿ ಕುಳಿತಿದ್ದ ಸಹೋದರ ಮತ್ತು ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದಾಳೆ.
ಇದರ ನಂತರ, ಸಿಬ್ಬಂದಿ ಸಿಐಎಸ್ಎಫ್ ನೆರವಿಗೆ ಕರೆದರು, ಪರಿಸ್ಥಿತಿಯನ್ನು ನಿಭಾಯಿಸಲು ಕಾನ್‌ಸ್ಟೆಬಲ್‌ಗಳಾದ ಪ್ರಿಯಾಂಕಾ ರೆಡ್ಡಿ ಮತ್ತು ಸೋನಿಕಾ ಪಾಲ್ ಅಲ್ಲಿಗೆ ಬಂದರು. ಈ ವೇಳೆ ಮಹಿಳೆ ಕಾನ್‌ಸ್ಟೆಬಲ್ ರೆಡ್ಡಿಗೆ ಕಪಾಳಮೋಕ್ಷ ಮಾಡಿದ್ದಾಳೆ ಅಲ್ಲದೇ ಆಕೆಯ ಕೈಗೆ ಕಚ್ಚಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೆಲವು ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕೊನೆಗೆ ಆಕೆ ಮತ್ತು ಆಕೆಯ ಪತಿಯನ್ನು ವಿಮಾನದಿಂದ ಕೆಳಗಿಳಿಸಲಾಯಿತು. ನಂತರ ಅವರನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇನ್ನು ಮಹಿಳೆ ಮತ್ತು ಆಕೆಯ ಪತಿ ಪುಣೆಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಇವರು ಪುಣೆಯಿಂದ ದೆಹಲಿಗೆ ಅಂತ್ಯಕ್ರಿಯೆಗೆಂದು ತೆರಳುತ್ತಿದ್ದರು ಎನ್ನಲಾಗಿದೆ.
ಒಂದು ವರ್ಷದ ಹಿಂದೆ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕನೊಬ್ಬನ ಮೇಲೆ ಮಲ-ಮೂತ್ರ ವಿಸರ್ಜಿಸಿದ ಘಟನೆ ವರದಿಯಾಗಿತ್ತು. ಮುಂಬಯಿ-ದೆಹಲಿ ಮಾರ್ಗದ ಎಐಸಿ 866 ಎಂಬ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ರಾಮ್ ಸಿಂಗ್ ಇಂಥ ಹೊಲಸು ಮಾಡಿದ್ದಾನೆ. ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ. ಈತ ಮದ್ಯಪಾನ ಮಾಡಿದ್ದರ ಬಗ್ಗೆ ಉಲ್ಲೇಖವಾಗಿಲ್ಲ. ಮುಂಬಯಿಯಿಂದ ದೆಹಲಿಗೆ ಹೋಗುತ್ತಿದ್ದ ವಿಮಾನದ 9 ನೇ ಸಾಲಿನಲ್ಲಿ, 17F ಸೀಟ್ ನಲ್ಲಿ ಕುಳಿತಿದ್ದ ರಾಮ್ ಸಿಂಗ್, ವಿಮಾನ ಹೊರಟ ಕೆಲವೇ ಹೊತ್ತಲ್ಲಿ ಅನುಚಿತ ವರ್ತನೆ ತೋರಿಸಿದ್ದಾನೆ. ಸೀಟ್ ನಿಂದ ಕೆಳಗೆ ಇಳಿದು ಮಲ-ಮೂತ್ರ ವಿಸರ್ಜಿಸಿ, ಅಲ್ಲೇ ಉಗುಳಿದ್ದಾನೆ. ಅಷ್ಟರಲ್ಲಿ ವಿಮಾನ ಸಿಬ್ಬಂದಿ ಅಲ್ಲಿಗೆ ಬಂದು ರಾಮ್ ಸಿಂಗ್ ನನ್ನು ಅಲ್ಲಿಂದ ಕರೆದುಕೊಂಡು ಹೋಗಿ ಐಸೋಲೇಟ್ ಮಾಡಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಹೊಲಸು ಮಾಡಿದ ಪ್ರಯಾಣಿಕ; ಮಲ-ಮೂತ್ರ ವಿಸರ್ಜಿಸಿ, ಗಲಾಟೆ