Site icon Vistara News

ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್‌ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!

Rahul Gandhi

Wayanad or Rae Bareli? Rahul Gandhi says not guided by God like Narendra Modi

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ಮಾದರಿ ನೀತಿ ಸಂಹಿತೆ ಉಲ್ಲಂಘನೆ (MCC Violations) ಮಾಡಿದ ಕುರಿತಂತೆ ಚುನಾವಣೆ ಆಯೋಗವು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಪ್ರತಿಕ್ರಿಯೆ ಕೇಳಿದೆ. ಏಪ್ರಿಲ್‌ 29ರ ಬೆಳಗ್ಗೆ 11 ಗಂಟೆಯೊಳಗೆ ಇಬ್ಬರೂ ನಾಯಕರು ಪ್ರತಿಕ್ರಿಯೆ ನೀಡಬೇಕು ಎಂಬುದಾಗಿ ಚುನಾವಣೆ ಆಯೋಗವು (Election Commission) ಸೂಚನೆ ನೀಡಿದೆ.

ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿ ಅವರು ಚುನಾವಣೆ ಪ್ರಚಾರದ ವೇಳೆ ಜಾತಿ, ಧರ್ಮ, ಸಮುದಾಯ ಹಾಗೂ ಭಾಷೆ ಆಧಾರದ ಮೇಲೆ ಮತಗಳನ್ನು ಕೇಳಿದ್ದಾರೆ. ದ್ವೇಷ ಹರಡುವ ರೀತಿಯಲ್ಲಿ ಇವರು ಮಾತನಾಡಿದ್ದಾರೆ ಎಂಬ ಕುರಿತು ಆರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಇಬ್ಬರು ನಾಯಕರ ಪ್ರತಿಕ್ರಿಯೆ ಕೇಳಿದೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಆಸ್ತಿ ಹಂಚಿಕೆ ವಿಷಯ ಪ್ರಸ್ತಾಪಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವನ್ನು ಮುಸ್ಲಿಮರಿಗೆ ನೀಡುತ್ತದೆ ಎಂದಿದ್ದರು. “ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ನಿಮ್ಮ ಆದಾಯ ಮತ್ತು ಆಸ್ತಿಯ ಮೇಲೆ ಕಣ್ಣಿಟ್ಟಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದನ್ನು ಉಲ್ಲೇಖಿಸಿದೆ. ಮಹಿಳೆಯರು ಚಿನ್ನವನ್ನು ಆಭರಣಗಳ ರೂಪದಲ್ಲಿ ಧರಿಸಲು ಮಾತ್ರವಲ್ಲ, ಅದನ್ನು ರಸಕ್ಷಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಈಗ ಅವರ ಕಣ್ಣು ಮಹಿಳೆಯರ ಮಂಗಳಸೂತ್ರದ ಮೇಲೆ ನೆಟ್ಟಿದೆ. ತಾಯಿ ಮತ್ತು ಸಹೋದರಿಯರ ಚಿನ್ನವನ್ನು ದೋಚುವುದು ಇವರ ಉದ್ದೇಶ. ಹೀಗಾಗಿ ಅವರು ಅಧಿಕಾರಕ್ಕೆ ಬಂದರೆ ನಿಮ್ಮ ಮಂಗಳಸೂತ್ರವೂ ಸುರಕ್ಷಿತವಲ್ಲʼʼ ಎಂದು ಮೋದಿ ಹೇಳಿದ್ದರು.

ನರೇಂದ್ರ ಮೋದಿ ಅವರ ಹೇಳಿಕೆಗೆ ದೇಶಾದ್ಯಂತ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಪ್ರತಿಪಕ್ಷಗಳ ನಾಯಕರು ಆಗ್ರಹಿಸಿದ್ದರು. ಇದಕ್ಕೂ ಮೊದಲು ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಬೇಕು ಚುನಾವಣೆ ಆಯೋಗವು ನಿರಾಕರಿಸಿತ್ತು. ರಾಹುಲ್‌ ಗಾಂಧಿ ಅವರ ಕೆಲ ಹೇಳಿಕೆಗಳ ಕುರಿತು ಕೂಡ ಅಸಮಾಧಾನ ವ್ಯಕ್ತವಾಗಿತ್ತು. ಹಾಗಾಗಿ, ಚುನಾವಣಾ ಆಯೋಗವು ಇಬ್ಬರೂ ನಾಯಕರಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ರಾಜಕೀಯ ಭಾಷಣ ತೆರವಿಗೆ ಆಯೋಗ ಆದೇಶ

ರಾಜಕೀಯ ನಾಯಕರು ನೀಡುವ ವಿವಾದಾತ್ಮಕ ಹೇಳಿಕೆಗಳ ಭಾಷಣಗಳ ವಿಡಿಯೊ, ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಇದಕ್ಕೂ ಮೊದಲು ಚುನಾವಣಾ ಆಯೋಗವು ಎಕ್ಸ್‌ ಸಾಮಾಜಿಕ ಜಾಲತಾಣಕ್ಕೆ ಸೂಚಿಸಿದೆ. ಈ ಮಧ್ಯೆ ಚುನಾವಣಾ ಆಯೋಗ ಆದೇಶದಂತೆ ಸಾಮಾಜಿಕ ಜಾಲತಾಣ ಎಕ್ಸ್‌ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಭಾಷಣವನ್ನು ಒಳಗೊಂಡಿರುವ ಕೆಲವು ಪೋಸ್ಟ್‌ಗಳನ್ನು ತೆಗೆದು ಹಾಕಿದೆ.

ಇದನ್ನೂ ಓದಿ: Lok Sabha Election 2024: ಹಿಂದೂ ಧರ್ಮದ ಉಳಿವಿಗಾಗಿ ಮತ್ತೆ ಮೋದಿ ಬೆಂಬಲಿಸಿ: ಪ್ರಲ್ಹಾದ್‌ ಜೋಶಿ

Exit mobile version