ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಜೂ. 8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಸಭೆಯ ಬಳಿಕ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಜೆಡಿಎಸ್ ಮುಖಂಡ ಎಚ್ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಎನ್‌ಡಿಎ ಒಕ್ಕೂಟ 292 ಸೀಟುಗಳು ಹಾಗೂ ಇಂಡಿಯಾ ಬಣ 234 ಸ್ಥಾನಗಳನ್ನು ತನ್ನದಾಗಿಸಿಕೊಂಡಿವೆ. ಎರಡೂ ಬಣಗಳು ಸರ್ಕಾರ ರಚನೆಯ ಕಡೆಗೆ ಗಮನ ಹರಿಸಿವೆ. ಬುಧವಾರ ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ಎರಡೂ ಬಣಗಳ ಮಹತ್ವದ ಸಭೆ ನಡೆಯಲಿದೆ. ಮಿತ್ರಪಕ್ಷಗಳು ಒಟ್ಟಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿ ಸರ್ಕಾರ ರಚನೆಗೆ ತಂತ್ರ- ಪ್ರತಿ ತಂತ್ರ ಹೂಡಲಿವೆ.
ಸಮೀಕ್ಷೆ ಹಾಗೂ ಚುನಾವಣಾ ಪೂರ್ವದ ಸ್ಥಿತಿಗತಿಗಳನ್ನು ಗಮನಿಸಿದರೆ ಇದು ಅಚ್ಚರಿಯ ಫಲಿತಾಂಶವಾಗಿದೆ. ಪ್ರಮುಖವಾಗಿ ಬಲಿಷ್ಠ ಎನಿಸಿಕೊಂಡಿದ್ದ ಬಿಜೆಪಿಗೆ 32 ಸೀಟ್ಗಳ ಕೊರತೆ ಎದುರಿಸಿದೆ. ಆದಾಗ್ಯೂ ತಮ್ಮನ್ನು ಮತ್ತೊಂದು ಬಾರಿ ಅಧಿಕಾರಕ್ಕೆ ಏರಿಸಿದ ಮತದಾರರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್ ಏರಿಕೆ
ಇಂಡಿ ಒಕ್ಕೂಟದಿಂದ ತೀವ್ರ ಪೈಪೋಟಿ. 160 ಸ್ಥಾನಗಳಲ್ಲಿ ಮುನ್ನಡೆ
ಲೋಕಸಭಾ ಚುನಾವಣೆಯಲ್ಲಿ ಇಂಡಿ ಮೈತ್ರಿಕೂಟ 295 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಪ್ರತಿಪಕ್ಷಗಳು ಹೇಳಿಕೊಂಡಿದ್ದವು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್. ಮಂಜುನಾಥ್‌ಗೆ ಮುನ್ನಡೆ, ಡಿ.ಕೆ.ಸುರೇಶ್‌ಗೆ ಹಿನ್ನಡೆ
ದೇಶದ ಆರಂಭಿಕ ಚಿತ್ರ
ಎನ್‌ಡಿಎ 159
ಇಂಡಿಯಾ ಒಕ್ಕೂಟ 63
ಇತರೆ 09
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಕಂಗನಾ ರಣಾವತ್ ಮುನ್ನಡೆ