ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಜೂ. 8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಸಭೆಯ ಬಳಿಕ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಜೆಡಿಎಸ್ ಮುಖಂಡ ಎಚ್ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಎನ್‌ಡಿಎ ಒಕ್ಕೂಟ 292 ಸೀಟುಗಳು ಹಾಗೂ ಇಂಡಿಯಾ ಬಣ 234 ಸ್ಥಾನಗಳನ್ನು ತನ್ನದಾಗಿಸಿಕೊಂಡಿವೆ. ಎರಡೂ ಬಣಗಳು ಸರ್ಕಾರ ರಚನೆಯ ಕಡೆಗೆ ಗಮನ ಹರಿಸಿವೆ. ಬುಧವಾರ ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ಎರಡೂ ಬಣಗಳ ಮಹತ್ವದ ಸಭೆ ನಡೆಯಲಿದೆ. ಮಿತ್ರಪಕ್ಷಗಳು ಒಟ್ಟಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿ ಸರ್ಕಾರ ರಚನೆಗೆ ತಂತ್ರ- ಪ್ರತಿ ತಂತ್ರ ಹೂಡಲಿವೆ.
ಸಮೀಕ್ಷೆ ಹಾಗೂ ಚುನಾವಣಾ ಪೂರ್ವದ ಸ್ಥಿತಿಗತಿಗಳನ್ನು ಗಮನಿಸಿದರೆ ಇದು ಅಚ್ಚರಿಯ ಫಲಿತಾಂಶವಾಗಿದೆ. ಪ್ರಮುಖವಾಗಿ ಬಲಿಷ್ಠ ಎನಿಸಿಕೊಂಡಿದ್ದ ಬಿಜೆಪಿಗೆ 32 ಸೀಟ್ಗಳ ಕೊರತೆ ಎದುರಿಸಿದೆ. ಆದಾಗ್ಯೂ ತಮ್ಮನ್ನು ಮತ್ತೊಂದು ಬಾರಿ ಅಧಿಕಾರಕ್ಕೆ ಏರಿಸಿದ ಮತದಾರರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್ ಏರಿಕೆ
ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುನ್ನಡೆ
ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಮುನ್ನಡೆ
ದೇಶಾದ್ಯಂತ 102 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಮುನ್ನಡೆ
ಎನ್‌ಡಿಎ 102
ಇಂಡಿಯಾ ಒಕ್ಕೂಟ 40
ಇತರೆ 10
ಕರ್ನಾಟಕದ 18 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
ಬಿಜೆಪಿ 18
ಕಾಂಗ್ರೆಸ್ 03
ಜೆಡಿಎಸ್ 01
ದೇಶ, ರಾಜ್ಯದಲ್ಲಿ ಎನ್‌ಡಿಎಗೆ ಆರಂಭಿಕ ಮುನ್ನಡೆ
ಲೋಕಸಭೆ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು, ದೇಶ ಹಾಗೂ ಕರ್ನಾಟಕದಲ್ಲಿ ಎನ್‌ಡಿಎ ಅಭ್ಯರ್ಥಿಗಳು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಈಗ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು, ಶೀಘ್ರದಲ್ಲೇ ಇವಿಎಂ ಮತಗಳ ಎಣಿಕೆ ಆರಂಭವಾಗಲಿದೆ.