ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಜೂ. 8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಸಭೆಯ ಬಳಿಕ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಜೆಡಿಎಸ್ ಮುಖಂಡ ಎಚ್ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಎನ್‌ಡಿಎ ಒಕ್ಕೂಟ 292 ಸೀಟುಗಳು ಹಾಗೂ ಇಂಡಿಯಾ ಬಣ 234 ಸ್ಥಾನಗಳನ್ನು ತನ್ನದಾಗಿಸಿಕೊಂಡಿವೆ. ಎರಡೂ ಬಣಗಳು ಸರ್ಕಾರ ರಚನೆಯ ಕಡೆಗೆ ಗಮನ ಹರಿಸಿವೆ. ಬುಧವಾರ ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ಎರಡೂ ಬಣಗಳ ಮಹತ್ವದ ಸಭೆ ನಡೆಯಲಿದೆ. ಮಿತ್ರಪಕ್ಷಗಳು ಒಟ್ಟಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿ ಸರ್ಕಾರ ರಚನೆಗೆ ತಂತ್ರ- ಪ್ರತಿ ತಂತ್ರ ಹೂಡಲಿವೆ.
ಸಮೀಕ್ಷೆ ಹಾಗೂ ಚುನಾವಣಾ ಪೂರ್ವದ ಸ್ಥಿತಿಗತಿಗಳನ್ನು ಗಮನಿಸಿದರೆ ಇದು ಅಚ್ಚರಿಯ ಫಲಿತಾಂಶವಾಗಿದೆ. ಪ್ರಮುಖವಾಗಿ ಬಲಿಷ್ಠ ಎನಿಸಿಕೊಂಡಿದ್ದ ಬಿಜೆಪಿಗೆ 32 ಸೀಟ್ಗಳ ಕೊರತೆ ಎದುರಿಸಿದೆ. ಆದಾಗ್ಯೂ ತಮ್ಮನ್ನು ಮತ್ತೊಂದು ಬಾರಿ ಅಧಿಕಾರಕ್ಕೆ ಏರಿಸಿದ ಮತದಾರರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್ ಏರಿಕೆ
ಬೀದರ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ
52,780 ಮತಗಳಿಂದ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ
ಬೀದರ್ ಕ್ಷೇತ್ರದಲ್ಲಿ ಸತತ ಮುನ್ನಡೆ ಸಾಧಿಸುತ್ತಿರುವ ಸಾಗರ್ ಖಂಡ್ರೆ
ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ
ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾಗೆ ನಿರಂತರ ಹಿನ್ನಡೆ
ಸಾಗರ್ ಖಂಡ್ರೆ (ಕಾಂಗ್ರೆಸ್)—–: 2,35,706
ಭಗವಂತ ಖೂಬಾ (ಬಿಜೆಪಿ)—– 1,82,926
ಅಂತರ —– 52,780
ಚಾಮರಾಜನಗರ
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಭಾರಿ ಮುನ್ನಡೆ
ಸುನೀಲ್ ಬೋಸ್ ಗೆ 72 ಸಾವಿರ ಮತಗಳಿಂದ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ 3,46,738
ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜುಗೆ 2,73,747
ಹಾಸನ
ಏಳನೇ ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ
ಮುನ್ನಡೆ ಕಾಯ್ದುಕೊಂಡ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ
4,028 ಮತಗಳಿಂದ ಪ್ರಜ್ವಲ್ ಮುನ್ನಡೆ
ಜೆಡಿಎಸ್ – ಪ್ರಜ್ವಲ್ ರೇವಣ್ಣ – 2,80,003
ಕಾಂಗ್ರೆಸ್ – ಶ್ರೇಯಸ್ ಪಟೇಲ್ – 2,75,975
ಡಿಕೆ ಸುರೇಶ್ಗೆ ಹಿನ್ನಡೆ, ಶಿವಕುಮಾರ್ ಮನೆಗೆ ಭೇಟಿ
ಮಾಜಿ ಸಚಿವ ಕೆ. ಸುಧಾಕರ್ ಅವರಿಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ದೊರಕಿದೆ. ಅದೇ ವೇಗದೊಂದಿಗೆ ಅವರು ಸಾಗುತ್ತಿದ್ದಾರೆ.