ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಜೂ. 8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಸಭೆಯ ಬಳಿಕ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಜೆಡಿಎಸ್ ಮುಖಂಡ ಎಚ್ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಎನ್‌ಡಿಎ ಒಕ್ಕೂಟ 292 ಸೀಟುಗಳು ಹಾಗೂ ಇಂಡಿಯಾ ಬಣ 234 ಸ್ಥಾನಗಳನ್ನು ತನ್ನದಾಗಿಸಿಕೊಂಡಿವೆ. ಎರಡೂ ಬಣಗಳು ಸರ್ಕಾರ ರಚನೆಯ ಕಡೆಗೆ ಗಮನ ಹರಿಸಿವೆ. ಬುಧವಾರ ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ಎರಡೂ ಬಣಗಳ ಮಹತ್ವದ ಸಭೆ ನಡೆಯಲಿದೆ. ಮಿತ್ರಪಕ್ಷಗಳು ಒಟ್ಟಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿ ಸರ್ಕಾರ ರಚನೆಗೆ ತಂತ್ರ- ಪ್ರತಿ ತಂತ್ರ ಹೂಡಲಿವೆ.
ಸಮೀಕ್ಷೆ ಹಾಗೂ ಚುನಾವಣಾ ಪೂರ್ವದ ಸ್ಥಿತಿಗತಿಗಳನ್ನು ಗಮನಿಸಿದರೆ ಇದು ಅಚ್ಚರಿಯ ಫಲಿತಾಂಶವಾಗಿದೆ. ಪ್ರಮುಖವಾಗಿ ಬಲಿಷ್ಠ ಎನಿಸಿಕೊಂಡಿದ್ದ ಬಿಜೆಪಿಗೆ 32 ಸೀಟ್ಗಳ ಕೊರತೆ ಎದುರಿಸಿದೆ. ಆದಾಗ್ಯೂ ತಮ್ಮನ್ನು ಮತ್ತೊಂದು ಬಾರಿ ಅಧಿಕಾರಕ್ಕೆ ಏರಿಸಿದ ಮತದಾರರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ.
ಇದನ್ನೂ ಓದಿ: Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್ ಏರಿಕೆ
ಬಿಹಾರದಲ್ಲಿ ಎನ್‌ಡಿಎ ಒಕ್ಕೂಟಕ್ಕೆ ಭರ್ಜರಿ ಮುನ್ನಡೆ. ಲಾಲೂ ನೇತೃತ್ವದ ಆರ್ಜೆಡಿಗೆ ಹಾಗೂ ಕಾಂಗ್ರೆಸ್ ಗೆ ಭಾರೀ ಹಿನ್ನಡೆ..
50 ಸಾವಿರ ಮತಗಳ ಮುನ್ನಡೆಯಲ್ಲಿ ಸಾಗುತ್ತಿರುವ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ ಮಂಜುನಾಥ್
ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆ ಅರ್ಧ ಗಂಟೆ ವಿಳಂಬ
8.30ಕ್ಕೆ ಆರಂಭವಾದ ಅಂಚೆ ಮತ ಎಣಿಕೆ.
ಅತಿ ಹೆಚ್ಚು ಅಂಚೆ ಮತ ಆಗಿರುವ ಕಾರಣ
ವಿಂಗಡಣೆ ಮಾಡುತ್ತಿರೋ ಚುನಾವಣಾ ಸಿಬ್ಬಂದಿ
ತುಮಕೂರಿನಲ್ಲಿ ವಿ. ಸೋಮಣ್ಣಗೆ ಮುನ್ನಡೆ
ಸತತ ಮುನ್ನಡೆ ಕಾಯ್ದುಕೊಂಡ ವಿ.ಸೋಮಣ್ಣ
ಸೋಮಣ್ಣ -13453 ಮತಗಳು
ಮುದ್ದಹನುಮೇಗೌಡ- 12,296 ಮತಗಳು
ಮುನ್ನಡೆ- 1157 ಮತಗಳು
ಲೋಕ ಸಭಾ ಚುನಾವಣಾ ಫಲಿತಾಂಶ
ಎನ್‌ಡಿಎ-303
ಇಂಡಿ- 169
ಇತರ- 36