Site icon Vistara News

Lok Sabha Election Result 2024 Live: ಎನ್‌ಡಿಎ ನಾಯಕನಾಗಿ ಮೋದಿ ಆಯ್ಕೆ, ಎಲ್ಲ ನಾಯಕರ ಬೆಂಬಲ; ಪ್ರಮಾಣವಚನ ಸ್ವೀಕರಿಸಲು ಮೋದಿ ರೆಡಿ

Lok Sabha Election Result 2024 Live

Lok Sabha Election Result 2024 Live Updates In Vistara News Kannada

ನವದೆಹಲಿ: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಜೂ. 8ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎನ್​ಡಿಎ ಸಭೆಯ ಬಳಿಕ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಜೆಡಿಎಸ್​ ಮುಖಂಡ ಎಚ್​ಡಿ ಕುಮಾರಸ್ವಾಮಿ ದೆಹಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಎನ್​ಡಿಎ ಒಕ್ಕೂಟ 292 ಸೀಟುಗಳು ಹಾಗೂ ಇಂಡಿಯಾ ಬಣ 234 ಸ್ಥಾನಗಳನ್ನು ತನ್ನದಾಗಿಸಿಕೊಂಡಿವೆ. ಎರಡೂ ಬಣಗಳು ಸರ್ಕಾರ ರಚನೆಯ ಕಡೆಗೆ ಗಮನ ಹರಿಸಿವೆ. ಬುಧವಾರ ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ ಎರಡೂ ಬಣಗಳ ಮಹತ್ವದ ಸಭೆ ನಡೆಯಲಿದೆ. ಮಿತ್ರಪಕ್ಷಗಳು ಒಟ್ಟಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿ ಸರ್ಕಾರ ರಚನೆಗೆ ತಂತ್ರ- ಪ್ರತಿ ತಂತ್ರ ಹೂಡಲಿವೆ.

ಸಮೀಕ್ಷೆ ಹಾಗೂ ಚುನಾವಣಾ ಪೂರ್ವದ ಸ್ಥಿತಿಗತಿಗಳನ್ನು ಗಮನಿಸಿದರೆ ಇದು ಅಚ್ಚರಿಯ ಫಲಿತಾಂಶವಾಗಿದೆ. ಪ್ರಮುಖವಾಗಿ ಬಲಿಷ್ಠ ಎನಿಸಿಕೊಂಡಿದ್ದ ಬಿಜೆಪಿಗೆ 32 ಸೀಟ್​ಗಳ ಕೊರತೆ ಎದುರಿಸಿದೆ. ಆದಾಗ್ಯೂ ತಮ್ಮನ್ನು ಮತ್ತೊಂದು ಬಾರಿ ಅಧಿಕಾರಕ್ಕೆ ಏರಿಸಿದ ಮತದಾರರಿಗೆ ಮೋದಿ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Sukhesha Padibagilu

ಕರ್ನಾಟಕ ಲೋಕಸಭಾ ಚುನಾವಣಾ ಫಲಿತಾಂಶ

ಬಿಜೆಪಿ- 21

ಕಾಂಗ್ರೆಸ್​- 05

ಜೆಡಿಎಸ್​-02

Sukhesha Padibagilu

ಕೋಲಾರದಲ್ಲಿ ಜೆಡಿಎಸ್​ ಅಭ್ಯರ್ಥಿಗೆ ಮುನ್ನಡೆ ಹೊಂದಿದೆ.

Sukhesha Padibagilu

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಭರ್ಜರಿ ಮುನ್ನಡೆ. 18000 ಮತಗಳ ಮುನ್ನಡೆ ಕಾಪಾಡಿಕೊಂಡಿದ್ದಾರೆ.

Sukhesha Padibagilu

ಆರಂಭಿಕ ಹಂತದಲ್ಲಿಯೇ ಎನ್​​ಡಿಎಗೆ ಪೈಪೋಟಿ ಕೊಡುತ್ತಿರುವ ಇಂಡಿ ಒಕ್ಕೂಟ.

B Somashekhar

ಚಿಕ್ಕಬಳ್ಳಾಪುರ

ಎರಡನೇ ಸುತ್ತಿನಲ್ಲಿ ಡಾ.ಕೆ.ಸುಧಾಕರ್‌ಗೆ ಮುನ್ನಡೆ

3930 ಮತಗಳ ಅಂತರ ಕಾಯ್ದುಕೊಂಡ ಸುಧಾಕರ್

ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಗೆ 8‌,199 ಮತ

ಕಾಂಗ್ರೆಸ್ ಅಭ್ಯರ್ಥಿಗೆ 4,269 ಮತಗಳು .

Exit mobile version