ಮಧ್ಯಪ್ರದೇಶ: ಹೊಟೇಲ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಹಿಂದೂ ಯುವತಿಯ ಮೃತದೇಹ ಪತ್ತೆ(Love Jihad)ಯಾಗಿದ್ದು, ಆಕೆ ಪ್ರಿಯಕರ ಜುನೈದ್(Junaid) ಎಂಬಾತನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮಧ್ಯಪ್ರದೇಶ(Madhyapradesh)ದ ಧಾರ್ ಜಿಲ್ಲೆಯಲ್ಲಿ ಈ ಘಟನೆ ನಡೆಸಿದ್ದು, ಸಾಮಾಜಿಕ ಜಾಲತಾಣ(Social Media)ದಲ್ಲಿ ವಿಡಿಯೋ ಬಹಳ ಸುದ್ದಿ ಮಾಡುತ್ತಿದೆ. ಪೊಲೀಸ್ ಮಾಹಿತಿ ಪ್ರಕಾರ, ಜುನೈದ್ ಎಂಬಾತನ ಹೆಸರಿನಲ್ಲಿ ಬುಕ್ ಆಗಿದ್ದ ಹೊಟೇಲ್ ರೂಂನಲ್ಲಿ ಹಿಂದೂ ಯುವತಿಯ(24) ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ.
ವಟಿಕಾ ಎಂಬ ಹೊಟೇಲ್‌ನಲ್ಲಿ ಈ ಘಟನೆ ನಡೆದಿದ್ದು, ಮೃತ ಯುವತಿ ಎರಡು ದಿನಗಳಿಂದ ಆರೋಪಿ ಜುನೈದ್ ಜೊತೆ ಹೊಟೇಲ್‌ನಲ್ಲಿ ತಂಗಿದ್ದಳು. ಅನುಮಾನಗೊಂಡ ಹೊಟೇಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಬಾಗಿಲು ಒಡೆದು ನೋಡಿದಾಗ ಆಕೆಯ ದೇಹ ಸೀಲಿಂಗ್ ಫ್ಯಾನ್‌ನಲ್ಲಿ ನೇತಾಡುತ್ತಿತ್ತು.
ಮದುವೆಗೆ ನಿರಾಕರಿಸಿದ್ದಕ್ಕೆ ಸೂಸೈಡ್
ಇನ್ನು ಆರೋಪಿ ಜುನೈದ್ ಮದುವೆಗೆ ನಿರಾಕರಿಸಿದಕ್ಕೆ ಬೇಸರಗೊಂಡು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆದಿಕಾರಿ ಅಮಿತ್ ಕುಮಾರ್ ಮಿಶ್ರಾ, 24 ವರ್ಷದ ಯುವತಿ ಮೃತದೇಹ ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದೆವು. ಆಕೆ ತನ್ನ ಚೂಡಿದಾರ್ ಶಾಲಿನಿಂದ ಕುತ್ತಿಗೆ ಬಿಗಿದು ಸಾವಿಗೆ ಶರಣಾಗಿದ್ದಾಳೆ. ಇನ್ನು ಈಕೆ ಎರಡು ದಿನಗಳಿಂದ ಜುನೈದ್ ಎಂಬಾತನ ಜತೆ ಹೊಟೇಲ್‌ನಲ್ಲಿ ತಂಗಿದ್ದಳು ಎಂಬ ಮಾಹಿತಿ ಇದೆ.
Hindu girl’s body found h@nged in a room of a hotel booked by Mohammad Junaid. When he came out of the room, this is what the hotel staff found. It is said that Junaid kiIIed and h@nged the girl. In the video it can be seen that the Iegs are touching the bed. Case of r@pe is also… pic.twitter.com/IEFCphCRcu
— Shubham Sharma (@Shubham_fd) April 29, 2024
ಇದನ್ನೂ ಓದಿ:America Shootout: ಅಮೆರಿಕದಲ್ಲಿ ಮತ್ತೆ ಶೂಟೌಟ್; 4 ಪೊಲೀಸರು ಬಲಿ
ಯುವತಿ ಮತ್ತು ಆರೋಪಿ ಜುನೈದ್ ಇಂಧೋರ್‌ನ ಮಹುಗಾವ್ ಜಿಲ್ಲೆಯವರಾಗಿದ್ದು, ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಕಾಲೇಜಿನಲ್ಲೇ ಇಬ್ಬರು ಪರಸ್ಪರ ಪ್ರೀತಿಸಲು ಶುರುಮಾಡಿದ್ದು, ಕಳೆದ ಐದು ವರ್ಷದಿಂದ ರಿಲೇಶನ್‌ಶಿಪ್‌ನಲ್ಲಿದ್ದರು. ಯುವತಿ ತನ್ನನ್ನು ಮದುವೆ ಆಗುವಂತೆ ಜುನೈದ್‌ನನ್ನು ಆಗಾಗ ಒತ್ತಾಯಿಸುತ್ತಿದ್ದಳು. ಆದರೆ ಆತ ಮದುವೆಗೆ ತಯಾರಿರಲಿಲ್ಲ. ನೆಪ ಹೇಳಿಕೊಂಡು ಮದುವೆಯನ್ನು ಮುಂದಕ್ಕೆ ತಳ್ಳುತ್ತಲೇ ಇದ್ದ. ಇದೇ ಕಾರಣಕ್ಕೆ ಬೇಸರಗೊಂಡಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಇವರಿಬ್ಬರ ಪ್ರೀತಿಯ ವಿಷಯ ಮನೆಯವರಿಗೂ ತಿಳಿದಿತ್ತು. ಇದೀಗ ನಾಪತ್ತೆಯಾಗಿರುವ ಜುನೈದ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.