ಬೆಂಗಳೂರು: ಸರ್ಕಾರದ ಸಬ್ಸಿಡಿ ಮತ್ತು ಪ್ರಯೋಜನಗಳನ್ನು ಪಡೆಯಲು ನಿಮ್ಮ ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆ ಆಧಾರ್ ಕಾರ್ಡ್ ಅನ್ನು ಲಿಂಕ್ (LPG Aadhaar Link) ಮಾಡುವುದು ಕಡ್ಡಾಯ. ನಿಮ್ಮ ಗುರುತನ್ನು ಭದ್ರಪಡಿಸಲು ಮತ್ತು ದುರುಪಯೋಗ ತಪ್ಪಿಸಲು ಈ ಪ್ರಕ್ರಿಯೆ ಅಗತ್ಯ. ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಎಲ್‌ಪಿಜಿಗೆ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ.
ನಿಮ್ಮ ಆಧಾರ್ ಅನ್ನು ಎಲ್‌ಪಿಜಿ ಗ್ಯಾಸ್ ಸಂಪರ್ಕದೊಂದಿಗೆ ಲಿಂಕ್ ಮಾಡಲು ನೀವು ಫಾರ್ಮ್ 1 (Form 1) ಮತ್ತು ಫಾರ್ಮ್ 2 (Form 2) ಎಂಬ ಎರಡು ಫಾರ್ಮ್‌ಗಳನ್ನು ಭರ್ತಿ ಮಾಡಬೇಕು ಮತ್ತು ಅವುಗಳನ್ನು ನಿಮ್ಮ ಎಲ್‌ಪಿಜಿ ಸಂಪರ್ಕ ಪೂರೈಕೆದಾರರಿಗೆ ಸಲ್ಲಿಸಬೇಕು. ಎಲ್‌ಪಿಜಿ ಗ್ರಾಹಕರ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದೇ ಫಾರ್ಮ್ 1. ಫಾರ್ಮ್ 2 ಎನ್ನುವುದು ಎಲ್‌ಪಿಜಿ ಸಂಪರ್ಕವನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಫಾರ್ಮ್ ಆಗಿದೆ. ನೀವು ಈ ಫಾರ್ಮ್‌ಗಳನ್ನು ಆನ್‌ಲೈನ್‌ಲ್ಲಿ ಡೌನ್‌ಲೋಡ್ ಮಾಡಬಹುದು ಅಥವಾ ಎಲ್‌ಪಿಜಿ ವಿತರಕರ ಕಚೇರಿಗೆ ಭೇಟಿ ನೀಡುವ ಮೂಲಕ ಫಾರ್ಮ್ ಪಡೆದುಕೊಳ್ಳಬಹುದು.
ಆನ್‌ಲೈನ್ ಮೂಲಕ ಲಿಂಕ್ ಮಾಡುವ ವಿಧಾನ
ಎಲ್‌ಪಿಜಿಗೆ ಆಧಾರ್ ಲಿಂಕ್ ಮಾಡುವುದು ಸಂಪೂರ್ಣವಾಗಿ ಆನ್‌ಲೈನ್ ಅಲ್ಲ. ನೀವು ಅಗತ್ಯವಿರುವ ಫಾರ್ಮ್ ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಡೌನ್‌ಲೋಡ್ ಮಾಡಿ ಅವುಗಳನ್ನು ಆಫ್‌ಲೈನ್‌ನಲ್ಲಿ ಸಲ್ಲಿಸಬೇಕು. ಫಾರ್ಮ್ ಡೌನ್‌ಲೋಡ್ ಮಾಡಲು ಮತ್ತು ನಿಮ್ಮ ಆಧಾರ್ ಅನ್ನು ಎಲ್‌ಪಿಜಿಯೊಂದಿಗೆ ಲಿಂಕ್ ಮಾಡುವ ಹಂತಗಳು ಇಲ್ಲಿವೆ:
- ಎಲ್‌ಪಿಜಿ ಗ್ಯಾಸ್ ಪೂರೈಸುವ ಎಚ್ಪಿ, ಭಾರತ್ ಗ್ಯಾಸ್, ಇಂಡೇನ್ ಮುಂತಾದ ಕಂಪೆನಿಗಳ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- LPG services ಆಯ್ಕೆಯನ್ನು ಕ್ಲಿಕ್ ಮಾಡಿ ಬಳಿಕ Join DBTL using Aadhaar ಅಥವಾ Download Forms ಸೆಲೆಕ್ಟ್ ಮಾಡಿ.
- ಫಾರ್ಮ್ 1 ಮತ್ತು ಫಾರ್ಮ್ 1 ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ಔಟ್ ತೆಗೆಯಿರಿ.
- ಸೂಕ್ತ ಮಾಹಿತಿ ನೀಡಿ ಫಾರ್ಮ್ 1 ಅನ್ನು ಭರ್ತಿ ಮಾಡಿ ಮತ್ತು ಆಧಾರ್ ಕಾರ್ಡ್ ಕಾಪಿಯನ್ನು ಲಗತ್ತಿಸಿ. ಬಳಿಕ ನೀವು ಅಕೌಂಟ್ ಹೊಂದಿರುವ ಬ್ಯಾಂಕ್ಗೆ ಅಥವಾ ನಿಮ್ಮ ಎಲ್‌ಪಿಜಿ ವಿತರಕರ ಕಚೇರಿಯಲ್ಲಿ ಲಭ್ಯವಿರುವ ಡ್ರಾಪ್-ಬಾಕ್ಸ್ಗೆ ಹಾಕಿ.
- ಫಾರ್ಮ್ 2 ಅನ್ನು ಭರ್ತಿ ಮಾಡಿ. ಅಗತ್ಯವಾದ ಡಾಕ್ಯುಮೆಂಟ್ ಲಗತ್ತಿಸಿ. ಇದನ್ನು ಎಲ್‌ಪಿಜಿ ವಿತರಕರ ಕಚೇರಿಗೆ ಸಲ್ಲಿಸಿ. ಇದರಿಂದ ನಿಮ್ಮ ಆಧಾರ್ ನಂಬರ್ ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಆಗುತ್ತದೆ.
ಆಫ್‌ಲೈನ್ ಮೂಲಕ ಲಿಂಕ್ ಮಾಡುವ ವಿಧಾನ
- ಎಲ್‌ಪಿಜಿ ಗ್ಯಾಸ್ ಪೂರೈಕೆದಾರರ ಕಚೇರಿಗೆ ಭೇಟಿ ಫಾರ್ಮ್ 1 ಮತ್ತು ಫಾರ್ಮ್ 2 ಅನ್ನು ಪಡೆದುಕೊಳ್ಳಿ.
- ಸೂಕ್ತ ಮಾಹಿತಿ ನೀಡಿ ಫಾರ್ಮ್ 1 ಅನ್ನು ಭರ್ತಿ ಮಾಡಿ ಮತ್ತು ಆಧಾರ್ ಕಾರ್ಡ್ ಕಾಪಿಯನ್ನು ಲಗತ್ತಿಸಿ. ಬಳಿಕ ನೀವು ಅಕೌಂಟ್ ಹೊಂದಿರುವ ಬ್ಯಾಂಕ್ಗೆ ಅಥವಾ ನಿಮ್ಮ ಎಲ್‌ಪಿಜಿ ವಿತರಕರ ಕಚೇರಿಯಲ್ಲಿ ಲಭ್ಯವಿರುವ ಡ್ರಾಪ್-ಬಾಕ್ಸ್ಗೆ ಹಾಕಿ.
- ಫಾರ್ಮ್ 2 ಅನ್ನು ಭರ್ತಿ ಮಾಡಿ. ಬಳಿಕ ಎಲ್‌ಪಿಜಿ ಗ್ಯಾಸ್ ವಿತರಕ ಕಚೇರಿಗೆ ಸಲ್ಲಿಸಿ. ಜತೆಗೆ ಆಧಾರ್ ನಂಬರ್ ಮತ್ತು ಎಲ್‌ಪಿಜಿ ಕನ್ಸೂಮರ್ ನಂಬರ್ ಒದಗಿಸಿ.
ಜತೆಗೆ ನಿಮ್ಮ ಎಲ್‌ಪಿಜಿ ಪೂರೈಕೆದಾರರ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಆಧಾರ್ ಕಾರ್ಡ್ ಅನ್ನು ನಿಮ್ಮ ಗ್ಯಾಸ್ ಸಂಪರ್ಕದೊಂದಿಗೆ ಲಿಂಕ್ ಮಾಡಲು ಸಹಾಯವನ್ನು ಕೋರಬಹುದು. ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರತಿನಿಧಿ ನೀಡಿದ ಸೂಚನೆಗಳನ್ನು ಅನುಸರಿಸಿದರೆ ಸಾಕು.
ಇದನ್ನೂ ಓದಿ: Aadhaar Card: ಆಧಾರ್ ಕಾರ್ಡ್ ಉಚಿತ ತಿದ್ದುಪಡಿ ಅವಧಿ ಮತ್ತೊಮ್ಮೆ ವಿಸ್ತರಣೆ; ಆನ್‌ಲೈನ್ ಮೂಲಕ ಹೀಗೆ ಅಪ್‌ಡೇಟ್ ಮಾಡಿ