ಹೊಸದಿಲ್ಲಿ: ಸೋಮವಾರ ವಾಣಿಜ್ಯ ಅಡುಗೆ ಅನಿಲ (Commercial LPG) ದರಗಳನ್ನು (LPG Price) ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ 19 ಕೆಜಿ ಸಿಲಿಂಡರ್‌ಗೆ 1.50 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಆದರೆ ಗೃಹಬಳಕೆಯ ಎಲ್‌ಪಿಜಿ (Domestic LPG) 14.2 ಕಿಲೋಗ್ರಾಂ ಸಿಲಿಂಡರ್‌ಗೆ ರೂ. 903ರಲ್ಲಿ ಬದಲಾಗದೆ ಉಳಿದಿದೆ.
ಜೆಟ್ ಇಂಧನ ಅಥವಾ ಎಟಿಎಫ್ ಬೆಲೆಯನ್ನು ಶೇಕಡಾ 4ರಷ್ಟು ಕಡಿತಗೊಳಿಸಲಾಗಿದೆ. ಇದು ಸತತ ಮೂರನೇ ಮಾಸಿಕ ಕಡಿತವಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಗಳ ಪ್ರಕಾರ, ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ರೂ 4,162.5 ಅಥವಾ ಶೇಕಡಾ 3.9ರಷ್ಟು ಕಡಿತಗೊಳಿಸಲಾಗಿದೆ. ಅದು ಪ್ರತಿ ಕಿಲೋಗೆ ರೂ 101,993.17ಕ್ಕೆ ತಲುಪಿದೆ. ಜೆಟ್ ಇಂಧನ ಬೆಲೆಯಲ್ಲಿ ಇದು ಮೂರನೇ ನೇರ ಮಾಸಿಕ ಇಳಿಕೆಯಾಗಿದೆ.
ಎಟಿಎಫ್ ಬೆಲೆಯನ್ನು ನವೆಂಬರ್‌ನಲ್ಲಿ ಸುಮಾರು 6 ಪ್ರತಿಶತದಷ್ಟು (ಪ್ರತಿ ಕೆಎಲ್‌ಗೆ ರೂ 6,854.25) ಮತ್ತು ಡಿಸೆಂಬರ್‌ನಲ್ಲಿ ರೂ 5,189.25 ಅಥವಾ ಶೇಕಡ 4.6ರಷ್ಟು ಕಡಿತಗೊಳಿಸಲಾಯಿತು. ಜುಲೈ 1ರಿಂದ ನಾಲ್ಕು ನಿರಂತರ ಮಾಸಿಕ ಕಂತುಗಳಲ್ಲಿ ಒಟ್ಟಾರೆ ಪ್ರತಿ ಕಿಲೋ ಲೀಟರ್‌ಗೆ ರೂ 29,391.08 ಹೆಚ್ಚಳವಾಗಿತ್ತು. ಇದೀಗ ಕಡಿತದಿಂದ ಈ ಹೆಚ್ಚಳದ ಸುಮಾರು 45 ಪ್ರತಿಶತವನ್ನು ಹಿಂಪಡೆಯಲಾಗಿದೆ. ಜೆಟ್ ಇಂಧನದ ಬೆಲೆಯಲ್ಲಿನ ಕಡಿತವು ವಿಮಾನಯಾನ ಕಾರ್ಯಾಚರಣೆಯ ಶೇಕಡಾ 40ರಷ್ಟಿದೆ. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳ ಮೇಲಿನ ಹೊರೆಯನ್ನು ಈ ಕಡಿತ ತಗ್ಗಿಸಲಿದೆ.
ಇದರೊಂದಿಗೆ ತೈಲ ಸಂಸ್ಥೆಗಳು ವಾಣಿಜ್ಯ LPG ಬೆಲೆಯನ್ನು 1.50 ರೂ. ಇಳಿಸಿವೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ರಾಷ್ಟ್ರ ರಾಜಧಾನಿಯಲ್ಲಿ 1,755.50 ರೂ ಮತ್ತು ಮುಂಬೈನಲ್ಲಿ 1,708.50 ರೂ. ಇವೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಅಡುಗೆ ಅನಿಲ ಮತ್ತು ಎಟಿಎಫ್ ಬೆಲೆಗಳನ್ನು ಪರಿಷ್ಕರಿಸಿವೆ.
ಇದನ್ನೂ ಓದಿ: LPG Price: ಗೃಹಿಣಿಯರಿಗೆ ಗುಡ್ ನ್ಯೂಸ್; ಜನವರಿ 1ರಿಂದ ಎಲ್‌ಪಿಜಿ ಸಿಲಿಂಡರ್ ಬೆಲೆ 450 ರೂ.!