Site icon Vistara News

LPG Price: ವಾಣಿಜ್ಯ ಗ್ಯಾಸ್‌ ಸಿಲಿಂಡರ್‌ ಬೆಲೆ 92 ರೂ. ಇಳಿಕೆ

LPG

ನವ ದೆಹಲಿ: ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಸುಮಾರು ₹92ರಷ್ಟು ಕಡಿತಗೊಳಿಸಲಾಗಿದೆ. ಆದರೆ ಮನೆಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಬದಲಾಗಿಲ್ಲ.

ಪೆಟ್ರೋಲಿಯಂ ಕಂಪನಿಗಳು ಸಾಮಾನ್ಯವಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1ರಂದು ಪರಿಷ್ಕರಿಸುತ್ತವೆ. ಹಾಗೆಯೇ ಈ ಬದಲಾವಣೆಯಾಗಿದೆ.

ಕಳೆದ ತಿಂಗಳು ಕೇಂದ್ರವು 14.2 ಕೆಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ₹ 50 ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ₹ 350 ಹೆಚ್ಚಿಸಿತ್ತು. 2022ರಲ್ಲಿ ಮನೆಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ನಾಲ್ಕು ಬಾರಿ ಹೆಚ್ಚಿಸಲಾಗಿತ್ತು. ಈ ವರ್ಷದ ಜನವರಿಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ₹25 ಹೆಚ್ಚಿಸಲಾಯಿತು. ದೆಹಲಿಯಲ್ಲಿ ₹1,768 ಬೆಲೆ ಇತ್ತು.

ಮನೆಬಳಕೆ LPG ಸಿಲಿಂಡರ್‌ಗಳಿಗೆ ಹೋಲಿಸಿದರೆ, ವಾಣಿಜ್ಯ ಅನಿಲದ ದರಗಳು ಹೆಚ್ಚು ಏರಿಳಿತಗೊಳ್ಳುತ್ತವೆ. ಕಳೆದ ವರ್ಷ ಇದೇ ವೇಳೆಗೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ₹2,253ರಲ್ಲಿತ್ತು. ಒಂದು ವರ್ಷದಲ್ಲಿ, ರಾಷ್ಟ್ರ ರಾಜಧಾನಿಯೊಂದರಲ್ಲೇ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆ ₹225 ಇಳಿಕೆಯಾಗಿದೆ.

ಮಾರ್ಚ್‌ನಲ್ಲಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಯೋಜನೆಯ 9.59 ಕೋಟಿ ಫಲಾನುಭವಿಗಳು ವಾರ್ಷಿಕವಾಗಿ ಪ್ರತಿ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ ₹ 200 ಸಬ್ಸಿಡಿ ಪಡೆಯುತ್ತಾರೆ ಎಂದು ಹೇಳಿದ್ದರು. ಸಬ್ಸಿಡಿ ಹೊಂದಿರುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯುತ್ತಿರುವವರು ಹೆಚ್ಚುವರಿ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗೆ ಖರೀದಿಸಬಹುದು.

ತೈಲ ಬೆಲೆ ಸತತ ಐದನೇ ತಿಂಗಳಿಗೆ ಕುಸಿದಿದೆ. 2020ರ ಆರಂಭದಿಂದ ಎರಡನೇ ತ್ರೈಮಾಸಿಕ ಕುಸಿತದಲ್ಲಿ ದರ ಉತ್ತುಂಗಕ್ಕೇರಿ ನಂತರ ಬ್ಯಾಂಕಿಂಗ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕುಸಿದಿದೆ.

ಇದನ್ನೂ ಓದಿ: LPG Price Hike | ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್​ ಬೆಲೆ ಹೆಚ್ಚಳ; ಹೊಸ ವರ್ಷದ ಮೊದಲ ದಿನವೇ ದರ ಏರಿಕೆ ಹೊರೆ

Exit mobile version