Site icon Vistara News

ರಾಹುಲ್‌ ಗಾಂಧಿ ಗಂಡಸ್ತನ ತಿಳಿಯಲು ಅವರ ಜತೆ ನಿಮ್ಮ ತಾಯಿಯನ್ನು ಮಲಗಿಸಿ ಎಂದ ಕಾಂಗ್ರೆಸ್‌ ನಾಯಕ!

Pratap Dudhat

Make your mother, daughters sleep with Rahul Gandhi, you'll get to know if he's impotent or not: Says Congress Leader Pratap Dudhat

ಗಾಂಧಿನಗರ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ವಿವಾದ ಸೃಷ್ಟಿಸುತ್ತಿವೆ. ಪ್ರತಿಪಕ್ಷ ನಾಯಕರ ವಿರುದ್ಧ ಮಾತನಾಡುವ ಭರದಲ್ಲಿ ಅವಾಚ್ಯ, ಅಶ್ಲೀಲ ಪದಗಳ ಬಳಕೆ, ಏಕವಚನದಲ್ಲಿಯೇ ದಾಳಿ ಮಾಡುವುದು ಸೇರಿ ಹಲವು ರೀತಿಯ ಹೇಳಿಕೆಗಳು ಜನರಲ್ಲಿ ಅಸಹ್ಯ ಮೂಡಿಸಿವೆ. ಇದರ ಬೆನ್ನಲ್ಲೇ, ಗುಜರಾತ್‌ ಕಾಂಗ್ರೆಸ್‌ ನಾಯಕ (Gujarat Congress Leader) ಪ್ರತಾಪ್‌ ದುಧತ್‌ (Pratap Dudhat) ಅವರು ನೀಡಿದ ಹೇಳಿಕೆಯು ಭಾರಿ ವಿವಾದ ಭುಗಿಲೆಬ್ಬಿಸಿದೆ. “ರಾಹುಲ್‌ ಗಾಂಧಿ ಅವರು ಗಂಡಸೋ ಅಥವಾ ನಪುಂಸಕರೋ ಎಂಬುದನ್ನು ತಿಳಿಯಲು, ನಿಮ್ಮ ತಾಯಿ, ಪುತ್ರಿಯರನ್ನು ಅವರ ಜತೆ ಮಲಗಿಸಿ” ಎಂಬುದಾಗಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವುದು ಭಾರಿ ಸಂಚಲನ ಮೂಡಿಸಿದೆ.

ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ ಪ್ರತಾಪ್‌ ದುಧತ್‌, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. “ಬಿಜೆಪಿ ನಾಯಕರು ಯಾವಾಗಲೂ ರಾಹುಲ್‌ ಗಾಂಧಿ ಅವರ ಮದುವೆ ಬಗ್ಗೆ ಮಾತನಾಡುತ್ತಾರೆ. ಅಷ್ಟಕ್ಕೂ, ರಾಹುಲ್‌ ಗಾಂಧಿ ಅವರು ಗಂಡಸೋ ಅಥವಾ ನಪುಂಸಕರೋ ಎಂಬುದನ್ನು ತಿಳಿಯಲು ನಿಮ್ಮ ಪುತ್ರಿಯರು, ತಾಯಿಯನ್ನು ಅವರ ಜತೆ ಮಲಗಿಸಿ. ಆಗ ನಿಮಗೆ ರಾಹುಲ್‌ ಗಾಂಧಿ ಗಂಡಸು ಹೌದೋ, ಅಲ್ಲವೋ ಎಂಬುದು ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದ್ದು, ಕಾಂಗ್ರೆಸ್ ನಾಯಕನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಾಪ್‌ ದುಧತ್‌ ಅವರ ವಿಡಿಯೊ ವೈರಲ್‌ ಆಗುತ್ತಲೇ ಜನ ಪ್ರತಿಕ್ರಿಯಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. “ದೇಶದ ಹೆಣ್ಣುಮಕ್ಕಳಿಗೆ ಕಾಂಗ್ರೆಸ್‌ ಕೊಡುವ ಗೌರವ ಹೇಗಿದೆ ನೋಡಿ” ಎಂಬುದಾಗಿ ಒಬ್ಬರು ಟೀಕಿಸಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 25 ಕ್ಷೇತ್ರಗಳಲ್ಲೂ ಗೆಲ್ಲಬಾರದು ಎಂದು ತೀರ್ಮಾನಿಸಿದೆ. ಇದೇ ಕಾರಣಕ್ಕಾಗಿ ಆ ಪಕ್ಷದ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮತಗಳನ್ನು ಕೇಳಲು ಬಂದಾಗ ಇಂತಹ ನಾಯಕರಿಗೆ ಹೆಣ್ಣುಮಕ್ಕಳು ಸರಿಯಾಗಿ ಪಾಠ ಕಲಿಸಬೇಕು” ಎಂದು ಇನ್ನೊಬ್ಬರು ಹೇಳಿದ್ದಾರೆ. ಅಷ್ಟೇ ಅಲ್ಲ, “ಈ ಕಾಂಗ್ರೆಸ್ ನಾಯಕನ ವಿರುದ್ಧ ಕೇಸ್‌ ದಾಖಲಿಸಬೇಕು”, “ಹೆಣ್ಣುಮಕ್ಕಳ ಬಗ್ಗೆ ಕಾಂಗ್ರೆಸ್‌ ನಾಯಕರು ಹೀಗೆ ಮಾತಾಡಿ, ಮಾತಾಡಿಯೇ ಕಾಂಗ್ರೆಸ್‌ ಸೋಲಿಗೆ ಕಾರಣರಾಗಿದ್ದಾರೆ”, “ಕಾಂಗ್ರೆಸ್‌ನಲ್ಲಿ ಟಿಕೆಟ್‌ ಗಿಟ್ಟಿಸಿಕೊಳ್ಳಲು ಹೀಗೆ ಮಾತನಾಡುವುದೇ ಮೊದಲ ಅರ್ಹತೆ ಇರಬೇಕು” ಎಂಬುದು ಸೇರಿ ನೂರಾರು ಜನ ಕಾಂಗ್ರೆಸ್‌ ನಾಯಕನ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಕಾಂಗ್ರೆಸ್‌ ನಾಯಕ ಸುರ್ಜೇವಾಲಾ ಅವರ ವಿವಾದಾತ್ಮಕ ಹೇಳಿಕೆ ಬಳಿಕ ಟಿಎಂಸಿಗೂ ಸಂಕಷ್ಟ

Exit mobile version