Site icon Vistara News

ಸೇನೆ ವಾಪಸ್‌ ಕರೆಸಿಕೊಳ್ಳಿ ಎಂದು ಭಾರತಕ್ಕೆ ಮಾಲ್ಡೀವ್ಸ್‌ ಮತ್ತೆ ಆಗ್ರಹ, ಚೀನಾ ಕಿತಾಪತಿ

Mohamed Muizzu

Sack President, Summon Minister: Maldives Opposition Defends PM Narendra Modi

ಮಾಲೆ: ಮಾಲ್ಡೀವ್ಸ್‌ ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ತಿಂಗಳಲ್ಲಿ ಮೊಹಮ್ಮದ್‌ ಮುಯಿಜು (Mohamed Muizzu) ಅವರು ತಾವು ಎಂದಿಗೂ ಚೀನಾ ಪರ ಹಾಗೂ ಚೀನಾದ ಮುಲಾಜಿನಲ್ಲಿ ಸಿಲುಕಿರುವವರು ಎಂಬುದನ್ನು ಸಾಬೀತುಪಡಿಸಿದ್ದಾರೆ. “ಮಾಲ್ಡೀವ್ಸ್‌ನಲ್ಲಿರುವ ಸೈನಿಕರನ್ನು ಕೂಡಲೇ ಭಾರತ ಸರ್ಕಾರವು ವಾಪಸ್‌ ಕರೆಸಿಕೊಳ್ಳಬೇಕು” ಎಂದು ಮಾಲ್ಡೀವ್ಸ್‌ ಸರ್ಕಾರವು (Maldives Government) ಮನವಿ ಮಾಡಿದೆ.

“ಭಾರತದ ಭೂ ವಿಜ್ಞಾನಗಳ ಸಚಿವ ಕಿರಣ್‌ ರಿಜಿಜು ಹಾಗೂ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರು ಶನಿವಾರ (ನವೆಂಬರ್‌ 18) ಭೇಟಿಯಾಗಿದ್ದಾರೆ. ಇದೇ ವೇಳೆ, ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳಿ ಎಂಬುದಾಗಿ ಮೊಹಮ್ಮದ್‌ ಮುಯಿಜು ಮನವಿ ಮಾಡಿದ್ದಾರೆ” ಎಂದು ಮಾಲ್ಡೀವ್ಸ್‌ ಅಧ್ಯಕ್ಷರ ಕಚೇರಿ ತಿಳಿಸಿದೆ. ಮೊಹಮ್ಮದ್‌ ಮುಯಿಜು ಅವರು ಚೀನಾ ಪರ ನಿಲುವು ಹೊಂದಿರುವ ನಾಯಕರಾಗಿದ್ದು, ಇದರ ಹಿಂದೆ ಚೀನಾದ ಕಿತಾಪತಿ ಇದೆ ಎಂದು ಹೇಳಲಾಗುತ್ತಿದೆ.

ಕಿರಣ್‌ ರಿಜಿಜು-ಮೊಹಮ್ಮದ್‌ ಮುಯಿಜು ಭೇಟಿ

ಭಾರತದ ಸುಮಾರು 70 ಸೈನಿಕರು ಮಾಲ್ಡೀವ್ಸ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಭಾರತದ ಯೋಧರು ರೆಡಾರ್‌ ಹಾಗೂ ನಿಗಾ ಯುದ್ಧವಿಮಾನವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಚೀನಾ ಕೂಡ ಮಾಲ್ಡೀವ್ಸ್‌ನಲ್ಲಿ ಸೈನಿಕರನ್ನು ನಿಯೋಜಿಸಿದೆ. ಯಾವ ದೇಶದ ಸೇನೆಯೂ ಮಾಲ್ಡೀವ್ಸ್‌ನಲ್ಲಿ ಇರುವುದು ಬೇಕಾಗಿಲ್ಲ ಎಂದು ಮೊಹಮ್ಮದ್‌ ಮುಯಿಜು ಹೇಳಿದ್ದಾರೆ. ಆದರೆ, ಸೈನಿಕರನ್ನು ವಾಪಸ್‌ ಕಳುಹಿಸುವ ಕುರಿತು ಚೀನಾ ಜತೆ ಮಾತನಾಡಿರುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಎರಡು ತಿಂಗಳ ಹಿಂದಷ್ಟೇ ಭರ್ಜರಿ ಜಯದೊಂದಿಗೆ ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಮೊಹಮ್ಮದ್ ಮುಯಿಜು ಅವರು ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು.ಈ ವೇಳೆ, ಅವರು ತಮಗೆ ಮತಗಳನ್ನು ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಇದೇ ವೇಳೆ, ಭ್ರಷ್ಟಾಚಾರ ಅಪರಾಧಕ್ಕಾಗಿ 11 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ಬಿಡುಗಡೆಗೆ ಆದೇಶಿಸಿದ್ದರು.

ಇದನ್ನೂ ಓದಿ: Maldives President: ಚೀನಾ ಪರ ನಾಯಕ ಮೊಹಮ್ಮದ್ ಮೊಯಿಜ್ಜು ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ

ಪಿಪಿಎಂ ನಾಯಕ ಯಾಮೀನ್ ಅವರು ಜೈಲಿನಿಂದ ಬಿಡುಗಡೆಯಾಗಲೇಬೇಕು. ಜೈಲು ಶಿಕ್ಷೆಯಿಂದ ಗೃಹ ಬಂಧನಕ್ಕೆ ಕೈದಿಯನ್ನು ಸ್ಥಳಾಂತರಿಸುವ ಅಧಿಕಾರ ಅಧ್ಯಕ್ಷರಿಗೆ ಇದೆ. ನಮ್ಮ ದೇಶದ ಹಿತಾಸಕ್ತಿಗೆ ಅನುಗುಣವಾಗಿ ನಾನು ಮಾಡುತ್ತಿರುತ್ತಿರುವ ಅತ್ಯುತ್ತಮ ಕ್ರಮವಾಗಿದೆ ಎದು ನಾನು ನಂಬುತ್ತೇನೆ ಎಂದು ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಹೇಳಿದ್ದರು. ಚೀನಾ ಸರ್ಕಾರದಿಂದ ತೀವ್ರ ಸಾಲ ತಂದಿರುವ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಈ ಹಿಂದಿನ ಸರ್ಕಾರವು ಚೀನಾದಿಂದ ಸಾಕಷ್ಟು ಸಾಲವನ್ನು ಪಡೆದುಕೊಂಡಿದೆ.‌

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version