Site icon Vistara News

India vs Pakistan: ಭಾರತ ಮತ್ತು ಪಾಕಿಸ್ತಾನ ಸೇನಾ ಬಲಾಬಲ! ಯಾರು ಮುಂದಿದ್ದಾರೆ?

India Pakistan War

ಗತ್ತಿನ ಅತ್ಯಂತ ಶಕ್ತಿಶಾಲಿ ಸೇನೆಗಳ (Most powerful military) ಟಾಪ್ 10 ಪಟ್ಟಿಯಲ್ಲಿ (Top 10 List) ಭಾರತೀಯ ಸೇನೆಯು (Indian Military) ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನಗಳಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾಗಳಿವೆ. ಹಾಗೆಯೇ, ಇದೇ ಪಟ್ಟಿಯಲ್ಲಿ ಪಾಕಿಸ್ತಾನವು (Pakistan Military) 9ನೇ ಸ್ಥಾನವನ್ನು ಪಡೆದುಕೊಂಡಿವೆ. ಸ್ವಾತಂತ್ರ್ಯ ನಂತರದ ಬಳಿಕ ಭಾರತ ಮತ್ತು ಪಾಕಿಸ್ತಾನಗಳು ಅನೇಕ ಬಾರಿ ಯುದ್ಧವನ್ನು ಕೈಗೊಂಡಿವೆ. ಸೇನಾ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ, ಉಭಯ ರಾಷ್ಟ್ರಗಳ ಸೇನಾ ಬಲಾಬಲ ಎಷ್ಟಿರಬಹುದು ಎಂಬುದು ಕೂತಹಲ ಸಹಜ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಸೇನಾ ಬಲದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ(India vs Pakistan).

ಸೇನಾ ಬಲಾಬಲ

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತವು 800,000 ಹೆಚ್ಚು ಸಕ್ರಿಯ ಮಿಲಿಟರಿ ಸಿಬ್ಬಂದಿಯನ್ನು ಹೊಂದಿದೆ. ವಿವಿಧ ಅಧಿಕಾರ ವರ್ಗದಲ್ಲಿ 1.4 ಮಿಲಿಯನ್ ಅಧಿಕಾರಿಗಳು ಮತ್ತು ಸೈನಿಕರನ್ನು ಕಾರ್ಯನಿರ್ವಹಿಸುತ್ತಿದ್ದಾರೆ. ಪಾಕಿಸ್ತಾನವು 6.5 ಲಕ್ಷ ಸಕ್ರಿಯ ಸೇನಾ ಸಿಬ್ಬಂದಿಯನ್ನು ಹೊಂದಿದೆ.

ವಾಯಪಡೆ

ಭಾರತದ ಬಳಿ 2296 ವಿಮಾನಗಳಿದ್ದು, ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಭಾರತ. ಅದೇ ವೇಳೆ, ಪಾಕಿಸ್ತಾನದ ಬಳಿ ಒಟ್ಟು 1,434 ವಿಮಾನಗಳಿವೆ. ವಾಯು ಪಡೆ, ನೌಕಾ ಪಡೆ ಬಳಸುವ ಎಲ್ಲ ರೀತಿಯ ವಿಮಾನಗಳು ಇದರಲ್ಲಿ ಸೇರಿವೆ. ಹೆಲಿಕಾಪ್ಟರ್ಸ್, ಸಾರಿಗೆ ವಿಮಾನಗಳು, ಫಿಕ್ಸೆಡ್ ವಿಂಗ್ ಮತ್ತು ರೂಟೂರ್ ವಿಂಗ್‌ ವಿಮಾನಗಳು ಕೂಡ ಇದರಲ್ಲೇ ಲೆಕ್ಕ ಹಾಕಲಾಗಿದೆ. ಪ್ರತ್ಯಕೇವಾಗಿ ಹೇಳಬೇಕು ಎಂದರೆ, ತೇಜಸ್, ಎಂಕೆ1, ಎಂಕೆ1ಎ ಸೇರಿದಂತೆ 606 ಫೈಟರ್ ಜೆಟ್‌ಗಳಿವೆ. ಮಿಗ್ 21ಬಿಷನ್, ಸ್ಪೇಸ್‌ಕ್ಯಾಟ್ ಜಾಗ್ವಾರ್ಸ್, ಮಿಗ್ 29ಎಸ್ ವಿಮಾನಗಳನ್ನು ಮುಂದಿನ 4ರಿಂದ 5 ವರ್ಷಗಳಲ್ಲಿ ಸೇನೆಯಿಂದ ಕೈಬಿಡಲಾಗುತ್ತದೆ. ಅದರಂತೆ, ಪಾಕಿಸ್ತಾನದ ಬಳಿ ಒಟ್ಟು 387 ಫೈಟರ್ಸ್ ಜೆಟ್ ಇದ್ದು, ಇದರಲ್ಲಿ ಚೀನಾ, ಫ್ರಾನ್ಸ್ ಮತ್ತು ಅಮೆರಿಕದಿಂದ ಖರೀದಿಸಿದ ವಿಮಾನಗಳಿವೆ. ಪಾಕ್ ಬಳಿಕ ಅಟ್ಯಾಕ್ ಹೆಲಿಕಾಪ್ಟರ್ಸ್ ಇದ್ದು, ಭಾರತವು ಅತ್ಯುತ್ತಮ ಸ್ಪೇಷನ್ ಮಿಷನ್, ಏರಿಯಲ್ ಟ್ಯಾಕರ್ಸ್ ಮತ್ತು ಸಾರಿಗೆ ವಿಮಾನಗಳಿವೆ.

ಭೂ ಸೇನೆ

ಭಾರತದಲ್ಲಿ ಬಳಿ 4,614 ಟ್ಯಾಂಕ್ಸ್ ಇದ್ದು, ಜಾಗತಿಕ ಟಾಪ್ ಟೆನ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಬಳಿ 3,742 ಟ್ಯಾಂಕ್ಸ್ ಇವೆ. ಭಾರತದ ಬಳಿ, ‌1,51,248 ಶಸ್ತ್ರಸಜ್ಜಿತ ವಾಹನಗಳಿದ್ದು, ಇದು ಪಾಕಿಸ್ತಾನಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು. ವಿಶೇಷ ಎಂದರೆ, ಸ್ವಯಚಾಲಿತ ಫಿರಂಗಿಗಳ ವಿಷಯದಲ್ಲಿ ಪಾಕಿಸ್ತಾನವು ಭಾರತಕ್ಕಿಂತ ಮುಂದಿದೆ. ಎರಡು ರಾಷ್ಟ್ರಗಳ ನಡುವೆ 612ರಷ್ಟು ವ್ಯತ್ಯಾಸವಿದೆ. ಭಾರತದಲ್ಲಿ 140 ಸ್ವಯಂ ಚಾಲಿತ ಫಿರಂಗಿ ಬಂದೂಕುಗಳಿವೆ.

ನೌಕಾ ಪಡೆ

ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ನೌಕಾ ಪಡೆಯ ಬಲ ಹೆಚ್ಚಾಗಿದೆ. ಭಾರತದ ಒಟ್ಟು ನೌಕಾ ಬಲವು 242 ಇದ್ದರೆ, ಪಾಕಿಸ್ತಾನದ ಬಳಿ 114 ಹಡುಗಗಳಿವೆ. ಭಾರತದ ಬಳಿ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಎಂಬ ಎರಡು ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಹಡಗುಗಳಿವೆ. ಭಾರತದ ಬಳಿ ಇರುವ ಡಿಸ್ಟ್ರಾಯರ್ಸ್, ಕಾರ್ವೆಟ್‌ಗಳು, ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು ವಿಶ್ವದಲ್ಲೇ ಬಲಿಷ್ಠ ನೌಕಾ ಪಡೆಯ ಎಂದು ಗುರುತಿಸಲು ನೆರವು ನೀಡಿವೆ. ಈ ವಿಷಯಲ್ಲಿ ಪಾಕಿಸ್ತಾನವು ಹಿಂದಿದೆ. ಆದರೂ, ಜಗತ್ತಿನ ಟಾಪ್ 10 ಶಕ್ತಿಶಾಲಿ ಸೇನೆಗಳ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಎರಡೂ ಇರುವುದರಿಂದ ಯಾವುದೇ ರಾಷ್ಟ್ರವನ್ನು ಕೆಳಮಟ್ಟದಲ್ಲಿ ಅಂದಾಜಿಸುವಂತಿಲ್ಲ ಎನ್ನುತ್ತಾರೆ ತಜ್ಞರು.

ಈ ಸುದ್ದಿಯನ್ನೂ ಓದಿ: ಜಗತ್ತಿನ ಶಕ್ತಿಶಾಲಿ ಸೇನೆ; ನಂ.1 ಸ್ಥಾನದಲ್ಲಿ ಅಮೆರಿಕ! ಭಾರತ, ಪಾಕಿಸ್ತಾನಕ್ಕೆ ಯಾವ ರ‍್ಯಾಂಕ್?

Exit mobile version