ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ (PM Modi US Visit) ನರೇಂದ್ರ ಮೋದಿ (Narendra Modi) ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ (Jil Biden) ಬುಧವಾರ ಶ್ವೇತಭವನದಲ್ಲಿ ಬರಮಾಡಿಕೊಂಡರು. ಹಾಗೆಯೇ, ಮೋದಿ ಅವರಿಗೆ ವಿಶೇಷ ಭೋಜನದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಮೋದಿ ಊಟಕ್ಕೆ ಮ್ಯಾರಿನೇಟೆಡ್ ರಾಗಿ ಕೇಕ್, ಗ್ರಿಲ್ಡ್ ಕಾರ್ನ್ ಕೆರ್ನೆಲ್ ಸಲಾಡ್ ಸೇರಿ ಹಲವು ತಿನಿಸುಗಳನ್ನು ಮೋದಿ ಅವರಿಗೆ ಬಡಿಸಲಾಗಿದೆ.
ಅಮೆರಿಕ ಅಧ್ಯಕ್ಷ, ಪ್ರಥಮ ಮಹಿಳೆ ಮತ್ತು ಪ್ರಧಾನ ಮಂತ್ರಿಗಳು ಆತ್ಮೀಯ ಭೋಜನ ಕೂಟದಲ್ಲಿ ಒಟ್ಟುಗೂಡಿದರು ಮತ್ತು ಭಾರತದ ವಿವಿಧ ಪ್ರದೇಶಗಳ ಸಂಗೀತದ ಬ್ಯಾಂಡ್‌ನ ಸಂಗೀತವನ್ನು ಆಲಿಸಿ ಆನಂದಿಸಿದರು ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ.
Washington, DC | At a media preview at the White House, ahead of the State Dinner that will be hosted for PM Narendra Modi, dishes that will be served have been put on display.
— ANI (@ANI) June 21, 2023
The menu will include Marinated Millet and Grilled Corn Kernel Salad among other dishes. pic.twitter.com/ScA7ojdbYd
ಮೆನುವಿನಲ್ಲಿ ಇನ್ನೇನಿತ್ತು?
ಮೋದಿ ಅವರಿಗೆ ಲೆಮನ್-ಡಿಲ್ ಯೊಗರ್ಟ್ ಸಾಸ್, ಕ್ರಿಸ್ಪ್‌ಡ್ ಮಿಲೆಟ್ ಕೇಕ್, ಸಮ್ಮರ್ ಸ್ಕ್ವಾಶಸ್, ಕಾಂಪ್ರೆಸ್ಡ್ ಕಲ್ಲಂಗಡಿ, ಟ್ಯಾಂಗಿ ಅವೊಕಾಡೊ ಸಾಸ್, ಸ್ಟಫ್ಡ್ ಪೋರ್ಟೊಬೆಲ್ಲೋ ಮಶ್ರೂಮ್, ಕ್ರೀಮಿ ಸ್ಯಾಫ್ರನ್-ಇನ್‌ಫ್ಯೂಸ್ಡ್ ರಿಸೊಟ್ಟೊ, ರೋಸ್ ಆ್ಯಡ್ ಕಾರ್ಡಮಮ್-ಇನ್‌ಫ್ಯೂಸ್ಡ್ ಸ್ಟ್ರಾಬೆರಿ ಶಾರ್ಟ್‌ಕೇಕ್ ಸೇರಿ ಹಲವು ತಿನಿಸುಗಳನ್ನು ಮೋದಿ ಸವಿದರು. ಹಾಗೆಯೇ, ಅಮೆರಿದಕ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರೇ ವಿಶೇಷ ಮುತುವರ್ಜಿ ವಹಿಸಿ ಮೋದಿ ಅವರಿಗೆ ವಿಶೇಷ ಮೆನು ತಯಾರಿಸಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: PM Modi US Visit: ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದ ಯೋಗಾಭ್ಯಾಸ ಹೇಗಾಯಿತು? ಫೋಟೊಗಳು ಇಂತಿವೆ
ʼʼಯುಎಸ್ ಅಧ್ಯಕ್ಷ ಜೋ ಬೈಡೆನ್, ಪ್ರಥಮ ಮಹಿಳೆ ಜಿಲ್ ಬೈಡೆನ್ ಮತ್ತು ಪಿಎಂ ಮೋದಿ ಅವರು ಭಾರತದ ಹಲವೆಡೆಯ ಸಂಗೀತವನ್ನು ಭಾರತದ ಬ್ಯಾಂಡ್ ಮೂಲಕ ಆನಂದಿಸಿದರು. DMV ಆಧಾರಿತ ಭಾರತೀಯ ನೃತ್ಯ ಸ್ಟುಡಿಯೊ ಆದ ʼಸ್ಟುಡಿಯೋ ಧೂಮ್ʼನ ಯುವ ನೃತ್ಯಗಾರರು ಹೊಸ ಪೀಳಿಗೆಯ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಭಾರತೀಯ ನೃತ್ಯ ಪ್ರದರ್ಶನ ನೀಡಿದರುʼʼ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
ಮೋದಿಯವರು ನಿನ್ನೆಯಿಡೀ ನ್ಯೂಯಾರ್ಕ್‌ನಲ್ಲಿ ವಿವಿಧ ರಂಗಗಳ ತಜ್ಞರನ್ನು ಭೇಟಿಯಾಗಿದ್ದರು. ನಂತರ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 9ನೇ ಅಂತರರಾಷ್ಟ್ರೀಯ ನಿಮಿತ್ತ ವಿಶೇಷ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಯುಎನ್ ಅಧಿಕಾರಿಗಳು, ರಾಜತಾಂತ್ರಿಕರು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ನಂತರ ವಿಶೇಷ ವಿಮಾನದಲ್ಲಿ ವಾಷಿಂಗ್ಟನ್‌ಗೆ ಆಗಮಿಸಿದರು.