Site icon Vistara News

Modi Government: ಮೋದಿ ಸರ್ಕಾರ ಉರುಳಿಸೋಕೆ ಅಮೆರಿಕದ CIA ಕುತಂತ್ರ; ಬಾಪಿಸ್ಟ್‌ ಚರ್ಚ್‌, ಚಂದ್ರಬಾಬು ನಾಯ್ಡುವೇ ದಾಳ

Modi Government

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ನಾಯಕತ್ವದಲ್ಲಿ ಭಾರತ ಇಂದು ವಿಶ್ವಗುರುವಾಗಿ ಬೆಳೆದು ನಿಂತಿದೆ(Modi Government)ಕಳೆದ ಹಲವು ವರ್ಷಗಳಿಂದ ಯಾವುದೇ ಬೇರೆ ರಾಷ್ಟ್ರಗಳ ಹಂಗಿಲ್ಲದೇ, ಪ್ರತಿ ಒಂದು ವಿಚಾರದಲ್ಲೂ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಮೂಲಕ, ದಿಟ್ಟ ನೀತಿಯನ್ನು ಅನುಸರಿಸುವ ಮೂಲಕ ಜಗತ್ತನ್ನೇ ಭಾರತ ತನ್ನತ್ತ ಸೆಳೆದಿದೆ. ಯಾವ ಒತ್ತಡಕ್ಕೂ ಈಗ ಭಾರತ ಮಣಿಯುವುದಿಲ್ಲ. ಇದಕ್ಕೆ ಮೂಲ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ. ಇಂತಹ ಪರಿಸ್ಥಿತಿ ಇರುವಾಗ ಇದೀಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಅಮೆರಿಕದಲ್ಲಿ ಕುತಂತ್ರ ನಡೆಯುತ್ತಿರುವ ಬಗ್ಗೆ ವರದಿಯೊಂದು ಬಹಳ ಸದ್ದು ಮಾಡುತ್ತಿದೆ. ಅಮೆರಿಕದ ಗುಪ್ತಚರ ಇಲಾಖೆ ಸಿಐಎ(CIA) ಭಾರತದ ಪ್ರತಿಪಕ್ಷ ಹಾಗೂ ಎನ್‌ಡಿಎ(NDA) ಮಿತ್ರಪಕ್ಷ ನಾಯಕರನ್ನು ಬಳಸಿಕೊಂಡು ಸರ್ಕಾರ ಕೆಡುವು ಪ್ರಯತ್ನ ನಡೆಸುತ್ತಿರುವ ವಿಚಾರ ಬಯಲಾಗಿದೆ.

NDAಗೆ ಕಂಟಕ ಆಗ್ತಾರಾ ಚಂದ್ರಬಾಬು ನಾಯ್ಡು?

ರಷ್ಯಾದ ಸುದ್ದಿ ಮಾಧ್ಯಮ ಸ್ಪಟ್ನಿಕ್‌ ಈ ಶಾಕಿಂಗ್‌ ವರದಿಯನ್ನು ಬಿತ್ತರಿಸಿದೆ ಎನ್ನಲಾಗಿದೆ. ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಬಿಹಾಯ ಸಿಎಂ ನಿತೀಶ್‌ ಕುಮಾರ್‌ ಅವರು ಪ್ರಮುಖ ಪಾತ್ರವಹಿಸಿದ್ದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇವರಿಬ್ಬರ ಸಹಾಯವಿಲ್ಲದೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿಗೆ ಸುಲಭದ ಮಾತಾಗಿರಲಿಲ್ಲ. ಇದೀಗ ಇದೇ ವಿಚಾರವನ್ನು ಬಂಡವಾಳ ಮಾಡಿಕೊಂಡಿರುವ CIA ಆಂಧ್ರದ ಬಾಪಿಸ್ಟ್‌ ಚರ್ಚ್‌ ಮತ್ತು ಚಂದ್ರಬಾಬು ನಾಯ್ಡುವನ್ನು ಅವರನ್ನು ಬಳಿಸಿಕೊಂಡು ಮೋದಿ ಸರ್ಕಾರವನ್ನು ಕೆಡವಲು ಸಂಚು ರೂಪಿಸಿದೆ. ಆ ಮೂಲಕ ಭಾರತದಲ್ಲಿ ಅತಂತ್ರ ಸೃಷ್ಟಿಸಲು ಅಮೆರಿಕ ಯತ್ನಿಸುತ್ತಿದೆ ಎಂದು ಸ್ಪಟ್ನಿಕ್‌ ವರದಿ ಮಾಡಿದೆ.

ಭಾರತೀಯ ನಾಯಕರ ಭೇಟಿ

ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳು ಭಾರತದ ಅನೇಕ ರಾಜಕೀಯ ನಾಯಕರ ಜೊತೆ ಸೀಕ್ರೆಟ್‌ ಮೀಟಿಂಗ್‌ ನಡೆಸಿದ್ದಾರೆಂದೆ ಸ್ಪಟ್ನಿಕ್‌ ವರದಿ ಮಾಡಿದೆ. ಇದಕ್ಕೆ ಪೂರಕ ಎಂಬಂತೆ ಯುಎಸ್ ಕೌನ್ಸುಲ್ ಜನರಲ್ ಜೆನ್ನಿಫರ್ ಲಾರ್ಸನ್ ಅವರು ಹೈದರಾಬಾದ್‌ನಲ್ಲಿ ಚಂದ್ರಬಾಬು ನಾಯ್ಡು, A.I.M.I.M ನಾಯಕ ಅಸಾದುದ್ದೀನ್‌ ಓವೈಸಿ, ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಭಾರತದ ಮೇಲೆ ಏನು ಪರಿಣಾಮ?

ಉಸಾನಾಸ್ ಫೌಂಡೇಶನ್‌ನ ಸಂಸ್ಥಾಪಕ ಮತ್ತು ನಿರ್ದೇಶಕರಾದ ಡಾ ಅಭಿನವ್ ಪಾಂಡ್ಯ ಅವರು ಭಾರತದಲ್ಲಿ ಅಶಾಂತಿಯನ್ನು ಪ್ರಚೋದಿಸುವ ಗುಂಪುಗಳಿಗೆ ಯುಎಸ್ ಬೆಂಬಲ ನೀ ಗ್ರಹಿಸುವ ಬಗ್ಗೆ “ನಿಜವಾದ ಆತಂಕಗಳನ್ನು” ವ್ಯಕ್ತಪಡಿಸಿದ್ದಾರೆ. ಮೋದಿಯವರ ವಿದೇಶಾಂಗ ನೀತಿ ಧೋರಣೆಯನ್ನು ಹಾಳುಮಾಡಲು ಲೋಕಸಭೆ ಚುನಾವಣೆಯಲ್ಲಿ ಯುಎಸ್ ಮಧ್ಯಪ್ರವೇಶಿಸಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Tirupati Temple : ತಿರುಪತಿ ದೇಗುಲವನ್ನು ಹಿಂದೂ ನಂಬಿಕೆಯಂತೆ ಪವಿತ್ರಗೊಳಿಸುವೆ; ಸಿಎಂ ಚಂದ್ರಬಾಬು ನಾಯ್ಡು ಶಪಥ

Exit mobile version