ನವದೆಹಲಿ/ವಾಷಿಂಗ್ಟನ್: ಜೂನ್ 21ರಿಂದ 24ರವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜೂನ್ 22ರಂದು ಅಮೆರಿಕ ಸಂಸತ್ ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕಾಗಿ ಶ್ವೇತಭವನದ ಸೌತ್‌ಲಾನ್‌ನಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ತುದಿಗಾಲ ಮೇಲೆ ನಿಂತಿದ್ದಾರೆ. ಇನ್ನು, ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಭಾರತ ಮೂಲಕದ ವ್ಯಕ್ತಿಯೊಬ್ಬರು ಭಾರತದ ಥಾಲಿಗೆ ‘ಮೋದಿಜಿ ಥಾಲಿ’ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.
ಕಿಚಡಿ, ರಸಗುಲ್ಲ, ಇಡ್ಲಿ, ಡೋಕ್ಲಾ, ಪಾಪಡ್, ಚಾಚ್ ಸೇರಿ ಹಲವು ತಿಂಡಿಗಳುಳ್ಳ ‘ಮೋದಿಜಿ ಥಾಲಿ’ ಎಂದು ನ್ಯೂಜೆರ್ಸಿಯಲ್ಲಿರುವ ಶೆಫ್ (ಬಾಣಸಿಗ) ಶ್ರೀಪಾದ್ ಕುಲಕರ್ಣಿ ಹೆಸರಿಟ್ಟಿದ್ದಾರೆ. ಇವರು ಈ ಕುರಿತು ವಿಡಿಯೊ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. “ಮೋದಿಜಿಯವರೇ ನಮಸ್ಕಾರ. ನ್ಯೂಜೆರ್ಸಿಯಲ್ಲಿರುವ ಎಲ್ಲ ಭಾರತೀಯರ ಬೇಡಿಕೆ ಮೇರೆಗೆ ನಿಮ್ಮ ಹೆಸರಿನಲ್ಲಿ ವಿಶೇಷ ಥಾಲಿ ಮಾಡಿದ್ದೇವೆ. ಥಾಲಿಯಲ್ಲಿ ಇಷ್ಟೆಲ್ಲ ತಿನಿಸುಗಳು ಇರಲಿವೆ” ಎಂದು ಕುಲಕರ್ಣಿ ವಿವರಿಸಿದ್ದಾರೆ.
ಹೀಗಿದೆ ಮೋದಿಜಿ ಥಾಲಿ
#WATCH | A New Jersey-based restaurant launches 'Modi Ji' Thali for PM Narendra Modi's upcoming State Visit to the US. Restaurant owner Shripad Kulkarni gives details on the Thali. pic.twitter.com/XpOEtx9EDg
— ANI (@ANI) June 11, 2023
ಹಾಗೆಯೇ, ಇತ್ತೀಚೆಗೆ ಮೋದಿಜಿ ಥಾಲಿಗೆ ಭಾರಿ ಬೇಡಿಕೆ ಉಂಟಾಗಿದೆ ಎಂದು ತಿಳಿದುಬಂದಿದೆ. ಹೋಟೆಲ್ ಸಿಬ್ಬಂದಿ ಸೇರಿ ಹಲವರು ಮೋದಿಜಿ ಥಾಲಿಯ ರುಚಿ ನೋಡಿದ್ದು, ಅದು ಅದ್ಭುತವಾಗಿದೆ ಎಂದು ತಿಳಿಸಿದ್ದಾರೆ. ಮೋದಿ ಅವರಿಗಾಗಿ ಮಾಡಿದ ವಿಶೇಷ ಥಾಲಿಯ ವಿಡಿಯೊ ಈಗ ವೈರಲ್ ಆಗಿದೆ. ಇನ್ನು ಮೋದಿ ಅವರು ಅಮೆರಿಕ ಭೇಟಿ ವೇಳೆ ಅನಿವಾಸಿ ಭಾರತೀಯರನ್ನು ಕೂಡ ಭೇಟಿಯಾಗಲಿದ್ದಾರೆ.
ಇದನ್ನೂ ಓದಿ: Narendra Modi: ನಿನ್ನ ನಾಮದ ಬಲವೊಂದಿದ್ದರೆ ಸಾಕು; ಮೋದಿ ಮತ್ತೆ ವಿಶ್ವದ ನಂ 1 ಜನಪ್ರಿಯ ನಾಯಕ
ನರೇಂದ್ರ ಮೋದಿ ಅವರು ಜೂನ್ 22ರಂದು ಅಮೆರಿಕ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅಮೆರಿಕ ಸಂಸತ್‌ನಲ್ಲಿ ಮೋದಿ ಮಾಡುತ್ತಿರುವ ಎರಡನೇ ಭಾಷಣ ಇದಾಗಿದೆ. ಆ ಮೂಲಕ ಮೋದಿ ಅವರು ಅಮೆರಿಕ ಸಂಸತ್‌ನಲ್ಲಿ ಭಾಷಣ ಮಾಡಿದ ಭಾರತದ ಎರಡನೇ ಪ್ರಧಾನಿ ಎನಿಸಲಿದ್ದಾರೆ. ಮೋದಿ ಭಾಷಣದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಜತೆ ಭೋಜನಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಮೋದಿ ಅವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ.