Site icon Vistara News

ಪ್ರತಿ ಪ್ರಧಾನಿಯನ್ನೂ ಸ್ಮರಿಸುವ ಪ್ರಯತ್ನ: ‘ಮನ್ ಕಿ ಬಾತ್’ ನಲ್ಲಿ PM ಸಂಗ್ರಹಾಲಯ ಪ್ರಸ್ತಾಪಿಸಿದ ಮೋದಿ

modi mann ki baat new

ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಪ್ರಧಾನ ಮಂತ್ರಿ ಸಂಗ್ರಹಾಲಯವು (PM Sangrahalay) ದೇಶಕ್ಕೆ ಹೆಮ್ಮೆಯ ವಿಷಯ ಎಂದು ತಮ್ಮ 88ನೇ ಸಂಚಿಕೆಯ ‘ಮನ್ ಕಿ ಬಾತ್’ (Mann Ki Baat) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ Narendra Modi) ಭಾನುವಾರ ತಿಳಿಸಿದ್ದಾರೆ.

ಪಿಎಂ ಮ್ಯೂಸಿಯಂ ಯುವಜನರಿಗೆ ದೇಶದ ಅಮೂಲ್ಯ ಪರಂಪರೆಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಿದೆ. ಯುವಜನರಿಗೆ ಆಕರ್ಷಣೆಯ ಕೇಂದ್ರ ಆಗುತ್ತಿದೆ. ದೇಶದ ಅಭಿವೃದ್ಧಿಗೆ ಕೋಡುಗೆ ನೀಡಿದ ಎಲ್ಲ ಪ್ರಧಾನಮಂತ್ರಿಯವರ ಕಾರ್ಯವನ್ನೂ ಈ ಸಂಗ್ರಹಾಲಯ ಸ್ಮರಿಸುತ್ತದೆ ಎಂದು ತಿಳಿಸಿದರು.

ಮೇ 18 ರಂದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುವುದು ಎಂದು ನೀವು ತಿಳಿದಿರಲೇಬೇಕು. ಮುಂಬರುವ ರಜಾ ದಿನಗಳಲ್ಲಿ ನಿಮ್ಮ ಸ್ನೇಹಿತರ ವಲಯದೊಂದಿಗೆ ಸ್ಥಳೀಯ ವಸ್ತು ಸಂಗ್ರಹಾಲಯಕ್ಕೆ ಏಕೆ ಭೇಟಿ ನೀಡಬಾರದು? ಎಂದು ಅವರು ಪ್ರಶ್ನಿಸಿದರು. ಸ್ಥಳೀಯ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವ ಮೂಲಕ, ನೀವು ಇತರರ ಮನಸ್ಸಿನಲ್ಲಿ ವಸ್ತುಸಂಗ್ರಹಾಲಯಗಳ ಬಗ್ಗೆ ಕುತೂಹಲವನ್ನು ಜಾಗೃತಗೊಳಿಸುತ್ತೀರಿ.

ನಗರ ಪ್ರದೇಶಗಳಲ್ಲಿ ಸಾಕಷ್ಟು ನೀರು ಲಭ್ಯವಿರಬಹುದು, ಆದರೆ ನೀರಿನ ಒತ್ತಡವಿರುವ ಪ್ರದೇಶಗಳಲ್ಲಿ ವಾಸಿಸುವ ಕೋಟ್ಯಂತರ ಜನರನ್ನು ನೀವು ಯಾವಾಗಲೂ ನೆನಪಿಸಿಕೊಳ್ಳಬೇಕು. ಅವರಿಗೆ ಪ್ರತಿ ಹನಿ ನೀರು ಅಮೃತವಾಗಿದೆ. ಹೊಸದಾಗಿ ಪ್ರಾರಂಭಿಸಲಾದ ಅಮೃತ ಸರೋವರ ಯೋಜನೆ ಬಗ್ಗೆ ಬಗ್ಗೆ ಮಾತನಾಡಿದ ಮೋದಿ, ದೇಶದ ಪ್ರತಿ ಜಿಲ್ಲೆಯಲ್ಲಿ 75 ಜಲಮೂಲಗಳನ್ನು ಅಭಿವೃದ್ಧಿಪಡಿಸಿ ಮತ್ತು ಪುನರುಜ್ಜೀವನಗೊಳಿಸುತ್ತಿದ್ದಾರೆ “ಈ ಅಭಿಯಾನದ ಬಗ್ಗೆ ನೀವೆಲ್ಲರೂ ಮತ್ತು ವಿಶೇಷವಾಗಿ ಯುವಜನರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಮತ್ತು ಅದರ ಜವಾಬ್ದಾರಿಯನ್ನು ಸಹ ಹೊರಬೇಕು” ಎಂದು ಹೇಳಿದರು.

ಡಿಜಿಟಲ್ ಆಗುವುದರ ಮಹತ್ವವನ್ನು ಒತ್ತಿ ಹೇಳಿದ ಮೋದಿಯವರು, ವಿಶೇಷವಾಗಿ ನಗದು ರಹಿತ ಪಾವತಿಗಳು ಮತ್ತು ನಗದು ರಹಿತ ಡೇಔಟ್‌ಗಳಿಗೆ ಹೋಗುವುದು ಉತ್ತಮ. ಈಗ ಸಣ್ಣ ಪಟ್ಟಣಗಳಲ್ಲಿ ಮತ್ತು ಹೆಚ್ಚಿನ ಹಳ್ಳಿಗಳಲ್ಲಿ ಜನರು ಯುಪಿಐ ಮೂಲಕ ವಹಿವಾಟು ನಡೆಸುತ್ತಿದ್ದಾರೆ. ಡಿಜಿಟಲ್ ಎಕಾನಮಿ ಮೂಲಕ ದೇಶದಲ್ಲಿ ಸಂಸ್ಕೃತಿಯೂ ವಿಕಸನಗೊಳ್ಳುತ್ತಿದೆ ಎಂದರು. ಪ್ರತಿದಿನವೂ ಸುಮಾರು ₹ 20,000 ಕೋಟಿ ಮೌಲ್ಯದ ಯುಪಿಐ ವಹಿವಾಟು ನಡೆಯುತ್ತಿದ್ದು, ಕಳೆದ ಮಾರ್ಚ್‌ನಲ್ಲಿ ಯುಪಿಐ ವಹಿವಾಟು ₹10 ಲಕ್ಷ ಕೋಟಿ ತಲುಪಿದೆ ಎಂದು ಅವರು ಹೇಳಿದರು. ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಕುರಿತು ತಮ್ಮ “ಯುವ ಗೆಳೆಯರನ್ನು” ಪ್ರಶ್ನಿಸಿದ ಪ್ರಧಾನಮಂತ್ರಿಯವರು, ತಮ್ಮ ಉತ್ತರಗಳನ್ನು NaMo ಆಪ್‌ನಲ್ಲಿ #MuseumQuiz ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಳ್ಳುವಂತೆ ಕೇಳಿಕೊಂಡರು.

ಇದನ್ನೂ ಓದಿ | ಜಮ್ಮು ಕಾಶ್ಮೀರಕ್ಕೆ ₹20,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು: ಪ್ರಧಾನಿ ಮೋದಿ ಚಾಲನೆ

Exit mobile version