ನವದೆಹಲಿ: ಗುಜರಾತ್‌ನ ಲ್ಯಾಂಡ್‌ಮಾರ್ಕ್ ಎನಿಸಿಕೊಂಡಿದ್ದ ಮೋರ್ಬಿ ಸೇತುವೆ (Morbi Bridge Collapse) ನಿರ್ಮಾಣದ ಹಿಂದೆ ಆಸಕ್ತಿಕರ ಇತಿಹಾಸವಿದೆ. ಮೋರ್ಬಿ ರಾಜರ ಪ್ರಗತಿಪರತೆ ಹಾಗೂ ವೈಜ್ಞಾನಿಕ ಚಿಂತನೆಯ ಫಲವಾಗಿಯೇ ತೂಗುಸೇತುವೆ ನಿರ್ಮಾಣವಾಯಿತು. ಗುಜರಾತ್‌ನ ರಾಜಧಾನಿ ಗಾಂಧಿನಗರದರಿಂದ ಸುಮಾರು 300 ಕಿ.ಮೀ. ದೂರದಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.
ಮೋರ್ಬಿ ಜಿಲ್ಲಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಈ ಬ್ರಿಡ್ಜ್ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಮೋರ್ಬಿ ಆಡಳಿತರಾಗರ ಪ್ರಗತಿಪರ ಯೋಚನೆ ಮತ್ತು ವೈಜ್ಞಾನಿಕ ಮನೋಧರ್ಮವನ್ನು ಈ ಸೇತುವೆ ಪ್ರತಿಬಿಂಬಿಸುತ್ತದೆ ಎಂದು ವಿವರಿಸಲಾಗಿದೆ.
1922ರಲ್ಲಿ ಅಧಿಕಾರಕ್ಕೆ ಬಂದ ಸರ್ ವಾಘಜೀ ಠಾಕೂರ್ ಅವರ ಆಡಳಿತದಲ್ಲಿ ಈ ಸೇತುವೆ ನಿರ್ಮಾಣವನ್ನು ಶುರು ಮಾಡಲಾಯಿತು. ವಷಾತುಶಾಹಿ ತಂತ್ರಜ್ಞಾನದಿಂದ ವಾಘಜೀ ಅವರು ಪ್ರಭಾವಿತರಾಗಿದ್ದರು. ಇದರ ಪರಿಣಾಮವಾಗಿಯೇ ಅವರು, ಕಲಾತ್ಮಕ ಮತ್ತು ತಾಂತ್ರಿಕವಾದ ಅದ್ಭುತವೊಂದನ್ನು ಸೃಷ್ಟಿಸುವ ಕನಸು ಕಂಡಿದ್ದರು. ಆ ಕಾರಣಕ್ಕಾಗಿಯೇ ಎರಡು ರಾಜಮನೆತನಗಳನ್ನು ಸಂಪರ್ಕಿಸುವ ಅದ್ಭುತ ಸೇತುವೆ ನಿರ್ಮಾಣಕ್ಕೆ ಶ್ರೀಕಾರ ಹಾಕಿದರು. ರಾಜ ಪರಿವಾರ ವಾಸವಾಗಿದ್ದ ನಜರ್‌ಬಾಘ ಪ್ಯಾಲೇಸ್ ಮತ್ತು ದರ್ಬಾರ್‌ಬಾಘ ಪ್ಯಾಲೇಸ್ ನಡುವೆ ಸಂಪರ್ಕ ಕಲ್ಪಿಸುವುದಕ್ಕಾಗಿ ಈ ಸೇತುವೆಯನ್ನು ನಿರ್ಮಿಸಲಾಯಿತು.
ಈ ಬ್ರಿಡ್ಜ್ 1.25 ಮೀಟರ್ ಮತ್ತು 233 ಮೀಟರ್‌ವರೆಗೆ ವ್ಯಾಪಿಸಿದೆ. ಅಂದಿನ ದಿನಗಳಲ್ಲಿ ಯುರೋಪ್‌ನಲ್ಲಿ ಬಳಕೆಯಲ್ಲಿದ್ದ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಅಂದಿನ ಕಾಲದಲ್ಲಿ ಸೇತುವೆ ನಿರ್ಮಾಣಕ್ಕೆ 3.5 ಲಕ್ಷ ರೂ. ವೆಚ್ಚವಾಗಿತ್ತು ಮತ್ತು ಅಗತ್ಯ ಎಲ್ಲ ವಸ್ತುಗಳನ್ನು ಬ್ರಿಟನ್‌ನಿಂದಲೇ ತರಿಸಲಾಗಿತ್ತು. ಸುಮಾರು 140 ವರ್ಷಗಳಿಂದ ಗಟ್ಟಿಮುಟ್ಟಾಗಿದ್ದ ಈ ಸೇತುವೆ ಈಗ ಕುಸಿತ ಕಂಡು, ದೊಡ್ಡ ದುರ್ಘಟನೆಯೇ ಸಂಭವಿಸಿದೆ.
ಇದನ್ನೂ ಓದಿ | Morbi Bridge Collapse | ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಫಿಟ್ನೆಸ್ ಸರ್ಟಿಫಿಕೇಟ್ ಇರಲಿಲ್ಲವೇ?