Morbi Bridge Collapse | ಎಂಜಿನಿಯರಿಂಗ್ ಅದ್ಭುತ ಮೋರ್ಬಿ ಸೇತುವೆ ನಿರ್ಮಾಣ ಹಿಂದಿನ ಕತೆ ಕೌತುಕ - Vistara News

ದೇಶ

Morbi Bridge Collapse | ಎಂಜಿನಿಯರಿಂಗ್ ಅದ್ಭುತ ಮೋರ್ಬಿ ಸೇತುವೆ ನಿರ್ಮಾಣ ಹಿಂದಿನ ಕತೆ ಕೌತುಕ

ಭಾನುವಾರ ಸಂಜೆ ಕುಸಿದ ಮೋರ್ಬಿ ಸೇತುವೆ (Morbi Bridge Collapse) ನಿರ್ಮಾಣದ ಹಿಂದಿದೆ ಕೌತುಕದ ಕತೆ. ಈ ದುರ್ಘಟನೆಯಲ್ಲಿ 140ಕ್ಕೂ ಅಧಿಕ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ.

VISTARANEWS.COM


on

Morbi Bridge
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಗುಜರಾತ್‌ನ ಲ್ಯಾಂಡ್‌ಮಾರ್ಕ್ ಎನಿಸಿಕೊಂಡಿದ್ದ ಮೋರ್ಬಿ ಸೇತುವೆ (Morbi Bridge Collapse) ನಿರ್ಮಾಣದ ಹಿಂದೆ ಆಸಕ್ತಿಕರ ಇತಿಹಾಸವಿದೆ. ಮೋರ್ಬಿ ರಾಜರ ಪ್ರಗತಿಪರತೆ ಹಾಗೂ ವೈಜ್ಞಾನಿಕ ಚಿಂತನೆಯ ಫಲವಾಗಿಯೇ ತೂಗುಸೇತುವೆ ನಿರ್ಮಾಣವಾಯಿತು. ಗುಜರಾತ್‌ನ ರಾಜಧಾನಿ ಗಾಂಧಿನಗರದರಿಂದ ಸುಮಾರು 300 ಕಿ.ಮೀ. ದೂರದಲ್ಲಿ ಮಚ್ಚು ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ.

ಮೋರ್ಬಿ ಜಿಲ್ಲಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಈ ಬ್ರಿಡ್ಜ್‌ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಮೋರ್ಬಿ ಆಡಳಿತರಾಗರ ಪ್ರಗತಿಪರ ಯೋಚನೆ ಮತ್ತು ವೈಜ್ಞಾನಿಕ ಮನೋಧರ್ಮವನ್ನು ಈ ಸೇತುವೆ ಪ್ರತಿಬಿಂಬಿಸುತ್ತದೆ ಎಂದು ವಿವರಿಸಲಾಗಿದೆ.

1922ರಲ್ಲಿ ಅಧಿಕಾರಕ್ಕೆ ಬಂದ ಸರ್ ವಾಘಜೀ ಠಾಕೂರ್ ಅವರ ಆಡಳಿತದಲ್ಲಿ ಈ ಸೇತುವೆ ನಿರ್ಮಾಣವನ್ನು ಶುರು ಮಾಡಲಾಯಿತು. ವಷಾತುಶಾಹಿ ತಂತ್ರಜ್ಞಾನದಿಂದ ವಾಘಜೀ ಅವರು ಪ್ರಭಾವಿತರಾಗಿದ್ದರು. ಇದರ ಪರಿಣಾಮವಾಗಿಯೇ ಅವರು, ಕಲಾತ್ಮಕ ಮತ್ತು ತಾಂತ್ರಿಕವಾದ ಅದ್ಭುತವೊಂದನ್ನು ಸೃಷ್ಟಿಸುವ ಕನಸು ಕಂಡಿದ್ದರು. ಆ ಕಾರಣಕ್ಕಾಗಿಯೇ ಎರಡು ರಾಜಮನೆತನಗಳನ್ನು ಸಂಪರ್ಕಿಸುವ ಅದ್ಭುತ ಸೇತುವೆ ನಿರ್ಮಾಣಕ್ಕೆ ಶ್ರೀಕಾರ ಹಾಕಿದರು. ರಾಜ ಪರಿವಾರ ವಾಸವಾಗಿದ್ದ ನಜರ್‌ಬಾಘ ಪ್ಯಾಲೇಸ್ ಮತ್ತು ದರ್ಬಾರ್‌ಬಾಘ ಪ್ಯಾಲೇಸ್‌ ನಡುವೆ ಸಂಪರ್ಕ ಕಲ್ಪಿಸುವುದಕ್ಕಾಗಿ ಈ ಸೇತುವೆಯನ್ನು ನಿರ್ಮಿಸಲಾಯಿತು.

ಈ ಬ್ರಿಡ್ಜ್ 1.25 ಮೀಟರ್ ಮತ್ತು 233 ಮೀಟರ್‌ವರೆಗೆ ವ್ಯಾಪಿಸಿದೆ. ಅಂದಿನ ದಿನಗಳಲ್ಲಿ ಯುರೋಪ್‌ನಲ್ಲಿ ಬಳಕೆಯಲ್ಲಿದ್ದ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಅಂದಿನ ಕಾಲದಲ್ಲಿ ಸೇತುವೆ ನಿರ್ಮಾಣಕ್ಕೆ 3.5 ಲಕ್ಷ ರೂ. ವೆಚ್ಚವಾಗಿತ್ತು ಮತ್ತು ಅಗತ್ಯ ಎಲ್ಲ ವಸ್ತುಗಳನ್ನು ಬ್ರಿಟನ್‌ನಿಂದಲೇ ತರಿಸಲಾಗಿತ್ತು. ಸುಮಾರು 140 ವರ್ಷಗಳಿಂದ ಗಟ್ಟಿಮುಟ್ಟಾಗಿದ್ದ ಈ ಸೇತುವೆ ಈಗ ಕುಸಿತ ಕಂಡು, ದೊಡ್ಡ ದುರ್ಘಟನೆಯೇ ಸಂಭವಿಸಿದೆ.

ಇದನ್ನೂ ಓದಿ | Morbi Bridge Collapse | ಮೋರ್ಬಿ ಸೇತುವೆ ಕುಸಿತಕ್ಕೆ ಕಾರಣವೇನು? ಫಿಟ್ನೆಸ್‌ ಸರ್ಟಿಫಿಕೇಟ್ ಇರಲಿಲ್ಲವೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Instagram Reel: ಪ್ರಾಣಕ್ಕೇ ಕುತ್ತು ತಂದ ಇನ್‌ಸ್ಟಾಗ್ರಾಮ್‌ ರೀಲ್ಸ್‌; ಸಾಹಸ ಪ್ರದರ್ಶಿಸಲು ಹೋಗಿ 21 ವರ್ಷದ ಯುವಕ ಸಾವು

Instagram Reel: ಇನ್‌ಸ್ಟಾಗ್ರಾಮ್‌ ರೀಲ್ಸ್‌ ಹುಚ್ಚಿಗೆ 21 ವರ್ಷದ ಯುವ ಬಲಿಯಾಗಿದ್ದಾನೆ. ಉತ್ತರ ಪ್ರದೇಶದ ಜನಪದ್ ಬಂದಾದ ಖೈರಾಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಂ ಕುಮಾರ್ ಎನ್ನುವ ಯುವ ಧ್ವಜ ಸ್ತಂಭದಲ್ಲಿ ತಲೆಕೆಳಗಾಗಿ ನೇತಾಡುವ ಸಾಹಸ ಪ್ರದರ್ಶನಕ್ಕೆ ಮುಂದಾಗಿದ್ದ. ಈ ವೇಳೆ ಕಂಬ ಕುಸಿದು ಬಿದ್ದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Instagram Reel
Koo

ಲಕ್ನೋ: ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹುಚ್ಚು ಸಾಹಸ ಪ್ರದರ್ಶಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಡುತ್ತಾರೆ. ಅದರಲ್ಲೂ ಜನಪ್ರಿಯತೆ ಗಳಿಸಲು ಯಾವ ಮಟ್ಟಕ್ಕೂ ಬೇಕಾದರೂ ಇಳಿಯಲು ತಯಾರಿರುತ್ತಾರೆ. ಇಂತಹ ಇನ್‌ಸ್ಟಾಗ್ರಾಮ್‌ ರೀಲ್ಸ್‌ (Instagram Reel) ಮಾಡಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಂತಹದ್ದೇ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ನ ಚಿತ್ರೀಕರಣಕ್ಕಾಗಿ ಸಾಹಸ ಪ್ರದರ್ಶಿಸುತ್ತಿದ್ದ 21 ವರ್ಷದ ಯುವಕನೊಬ್ಬ ಮೃತಪಟ್ಟಿದ್ದಾನೆ.

ಮೃತನನ್ನು ಶಿವಂ ಕುಮಾರ್ ಎಂದು ಗುರುತಿಸಲಾಗಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಶಿವಂ ಕುಮಾರ್‌ ಶಾಲೆಯ ಧ್ವಜ ಸ್ತಂಭದಲ್ಲಿ ನೇತಾಡುತ್ತಿದ್ದ. ಸ್ನೇಹಿತರು ಇದನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಆತನ ಭಾರ ತಾಳಲಾರದೆ ಧ್ವಜ ಸ್ತಂಭ ಕುಸಿದು ಶಿವಂ ಕುಮಾರ್ ಕೊನೆಯುಸಿರು ಎಳೆದಿದ್ದಾನೆ.

ಘಟನೆ ವಿವರ

ಈ ಅವಘಡ ಗುರುವಾರ (ಏಪ್ರಿಲ್‌ 18) ಸಂಜೆ ನಡೆದಿದೆ. ಉತ್ತರ ಪ್ರದೇಶದ ಜನಪದ್ ಬಂದಾದ ಖೈರಾಡಾ ಗ್ರಾಮದ ಪ್ರೌಢಶಾಲೆಯಲ್ಲಿ ಈ ಘಟನೆ ವರದಿಯಾಗಿದೆ. ಶಿವಂ ತನ್ನ ತಂದೆಯನ್ನು ರೈಲ್ವೆ ನಿಲ್ದಾಣದಿಂದ ಕರೆದುಕೊಂಡು ಬಂದು ಮನೆಗೆ ಬಿಟ್ಟು ಸಂಜೆ ಸುಮಾರು 5 ಗಂಟೆಗೆ ಶಾಲೆಗೆ ತಲುಪಿದ್ದ. ಅಷ್ಟರಲ್ಲೆ ಶಾಲೆಗೆ ಬಂದಿದ್ದ ಆತನ ಸ್ನೇಹಿತರಾದ ಅನು ಮತ್ತು ಅಂಕಿತ್ ಅವನಿಗಾಗಿ ಕಾಯುತ್ತಿದ್ದರು. ನಂತರ ಈ ಮೂವರು ಶಾಲೆಯ ಛಾವಣಿಯನ್ನು ಏರಿದರು. ಇದು ಶಿವಂ ಅವರ ಕೊನೆಯ ಇನ್‌ಸ್ಟಾಗ್ರಾಂ ಸ್ಟಂಟ್ ಎಂದು ಆಗ ಅವರಿಗೆ ತಿಳಿದಿರಲಿಲ್ಲ. ಸ್ನೇಹಿತರು ರೆಕಾರ್ಡ್‌ ಮಾಡುತ್ತಿದ್ದಂತೆ ಶಿವಂ ಕಂಬದಲ್ಲಿ ಸಾಹಸ ಪ್ರದರ್ಶಿಸತೊಡಗಿದ್ದ. ಆಗ ಇದ್ದಕ್ಕಿದ್ದಂತೆ ಕಂಬ ಕುಸಿಯಿತು. ಬಿದ್ದು ಗಂಭೀರ ಗಾಯಗೊಂಡಿದ್ದ ಶಿವಂ ಸ್ನೇಹಿತರ ಕಣ್ಣೇದುರು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಹಿಂದೆಯೂ ಇದೇ ರೀತಿಯ ಸಾಹಸ ಪ್ರದರ್ಶಿಸಿದ್ದ

ಅಚ್ಚರಿ ಎಂದರೆ ಶಿವಂ ಇಂತಹ ಸಾಹಸ ಪ್ರದರ್ಶಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಆತನ ಇನ್‌ಸ್ಟಾಗ್ರಾಂ ತುಂಬ ಇಂತಹದ್ದೇ ಸಾಹಸದ ವಿಡಿಯೊ ತುಂಬಿಕೊಂಡಿದೆ. ಮರ ಮತ್ತು ಛಾವಣಿಯಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ಹಲವು ರೀಲ್ಸ್‌ಗಳಿವೆ.

ಶಿವಂ ಅವರದ್ದು ಬಡತನದ ಕುಟುಂಬ. ಅವರ ತಂದೆ ವರ್ದಾನಿ ವಾಟರ್ ಪೌಚ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿದ್ದಾರೆ. ಕುಟುಂಬವು ಇದುವರೆಗೆ ಯಾವುದೇ ಔಪಚಾರಿಕ ದೂರು ದಾಖಲಿಸಿಲ್ಲ ಎಂದು ಮಾಟೌಂಡ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರಾಮ್ ಮೋಹನ್ ರೈ ಹೇಳಿದ್ದಾರೆ.

ಇದನ್ನೂ ಓದಿ: Viral News: ರಿಕ್ಷಾದ ಟಾಪ್‌ಗೆ ಹತ್ತಿ ಸ್ಟೆಪ್‌ ಹಾಕಿದ ಯುವಕ; ವಿಡಿಯೊ ಕೊನೆಯಲ್ಲಿರುವ ರೋಚಕ ಟ್ವಿಸ್ಟ್‌ ಮಿಸ್‌ ಮಾಡದೆ ನೋಡಿ

ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಉತ್ತರ ಪ್ರದೇಶದಲ್ಲಿ ಅಮಾನುಷ ಘಟನೆಯೊಂದು ನಡೆದಿತ್ತು. ಗಾಜಿಯಾಬಾದ್‌ನಲ್ಲಿ ಯುವಕನೋರ್ವ ನಾಯಿಯ ಕಾಲನ್ನು ಹಿಡಿದು ಕ್ರೂರವಾಗಿ ತಿರುಗಿಸುವ ಮೂಲಕ ಅಮಾನುಷವಾಗಿ ವರ್ತಿಸಿದ ವಿಡಿಯೊ ವೈರಲ್‌ ಆದ ಬಳಿಕ ಈತನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು. ಝಾಫರ್‌ (Zafar) ಎನ್ನುವ ಯುವಕ ನಾಯಿಯನ್ನು ಬಲವಂತದಿಂದ ಎಳೆದುಕೊಂಡು ಬರುತ್ತಾನೆ. ನಾಯಿ ಗಾಬರಿಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಮತ್ತಷ್ಟು ಬಿಗಿಯಾಗಿ ಹಿಡಿದುಕೊಳ್ಳುವ ಆತ ಅದನ್ನು ಅನಾಮತ್ತಾಗಿ ಎತ್ತಿಕೊಳ್ಳುತ್ತಾನೆ. ಬಳಿಕ ಅದರ ಕಾಲುಗಳನ್ನು ಹಿಡಿದುಕೊಂಡು ವೇಗವಾಗಿ ಸುತ್ತುತ್ತಾನೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ ಇದನ್ನು ಚಿತ್ರೀಕರಿಸಲಾಗಿತ್ತು.

Continue Reading

ಪ್ರಮುಖ ಸುದ್ದಿ

Lok Sabha Election : ಕಾಂಗ್ರೆಸ್​ ಪರ ಶಾರುಖ್​ ಖಾನ್​ ಪ್ರಚಾರ; ಬಿಜೆಯಿಂದ ಆಕ್ಷೇಪ!; ವಿಡಿಯೊ ಇದೆ

Lok Sabah Election: ಪ್ರಣೀತಿ ಶಿಂಧೆ ಅವರು 2003-2004ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. ಅವರು ಸೋಲಾಪುರ ಸಿಟಿ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಸೋಲಾಪುರದಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

VISTARANEWS.COM


on

lok sabha Election
Koo

ಮುಂಬಯಿ: ಮಹಾರಾಷ್ಟ್ರದ ಸೋಲಾಪುರದಲ್ಲಿ (Lok Sabha Election) ಕಾಂಗ್ರೆಸ್ ಅಭ್ಯರ್ಥಿ ಪ್ರಣೀತಿ ಶಿಂಧೆ ಪರ ಬಾಲಿವುಡ್ ಬಾದ್​ ಶಾ ಶಾರುಖ್ ಖಾನ್ (Shah Rukh Khan) ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಪ್ರಚಾರ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ಪಕ್ಷದ ‘ಹಗರಣ’ ಎಂದು ಕರೆದಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಚುನಾವಣಾ ಆಯೋಗ ಮತ್ತು ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿ ಪ್ರಚಾರದ ಬಗ್ಗೆ ಕೆಲವು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ . “ಕಾಂಗ್ರೆಸ್ ಪಕ್ಷವು ಜನರನ್ನು ನಾಚಿಕೆಯಿಲ್ಲದೆ ಮತ್ತು ಬಹಿರಂಗವಾಗಿ ಮೂರ್ಖರನ್ನಾಗಿಸಲು ಮುಂದಾಗಿದೆ.. ನಕಲಿ ಸಮೀಕ್ಷೆಗಳನ್ನು ಹರಡುವುದು, ಭಾರತ ವಿರೋಧಿ ನಿರೂಪಣೆಗಳನ್ನು ರಚಿಸುವುದು, ಎಐ ಬಳಸಿ ಸೆಲೆಬ್ರಿಟಿಗಳ ಡೀಪ್ ಫೇಕ್​​ಗಳನ್ನು ನಿರ್ಮಿಸುತ್ತದೆ. ಈ ಪಕ್ಷವು ಈಗಾಗಲೇ ಇವಿಎಂಗಳನ್ನು ದೂಷಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.

ವರದಿಗಳ ಪ್ರಕಾರ ಇದು ಶಾರುಖ್ ಖಾನ್ ಅವರ ಹೋಲುವ ಇಬ್ರಾಹಿಂ ಖಾದ್ರಿ ಎಂಬುವರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಇಬ್ರಾಹಿಂ ಖಾದ್ರಿ ಶಾರುಖ್ ಖಾನ್ ಅವರ ತದ್ರೂಪಿ ಎಂದೇ ಪ್ರಸಿದ್ದರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಶಾರುಖ್​ ಖಾನ್​ ಅವರ ರಯೀಸ್ ಸಿನಿಮಾ ಬಿಡುಗಡೆಯಾದಾಗ ಗುಜರಾತ್ ಮೂಲದ ಇಬ್ರಾಹಿಂ ಖಾದ್ರಿ ಖ್ಯಾತಿ ಪಡೆದುಕೊಂಡಿದ್ದರು. ಏಕೆಂದರೆ ಶಾರುಖ್​ ಅವರೊಂದಿಗಿನ ಖಾದ್ರಿ ಅವರ ಹೋಲಿಕೆ ಈ ವೇಳೆ ಗಮನಕ್ಕೆ ಬಂದಿತ್ತು. ಖಾದ್ರಿ ಶಾರುಖ್​ ಅವರಂತೆಯೇ ಮಾತನಾಡುವ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಶಾರುಖ್ ಅವರ ಸಿಗ್ನೇಚರ್ ಸ್ಟೈಲ್​ಗಳನ್ನು ನಕಲ ಮಾಡುತ್ತಾರೆ. ಅವರ ನೃತ್ಯ ಚಲನೆಗಳನ್ನೂ ಅನುಕರಣೆ ಮಾಡುತ್ತಾರೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಶಾರುಖ್ ಅವರ ತದ್ರೂಪಿ ಖಾದರ್​ ಪೋನಿಟೈಲ್ ಹೊಂದಿದ್ದಾರೆ. ಜನರತ್ತ ಕೈ ಬೀಸುತ್ತಾ ತೆರೆದ ವಾಹನದಲ್ಲಿ ಸಾಗಿದ್ದಾರೆ. ಆವಾಹನದಲ್ಲಿ ರಾಹುಲ್ ಗಾಂಧಿ, ಪ್ರಣೀತಿ ಶಿಂಧೆ ಅವರ ಭಾವಚಿತ್ರವಿರುವ ಕಾಂಗ್ರೆಸ್ ಬ್ಯಾನರ್ ಇತ್ತು.

ಪ್ರಣೀತಿ ಶಿಂಧೆ ಅವರು 2003-2004ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ. ಅವರು ಸೋಲಾಪುರ ಸಿಟಿ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕಿಯಾಗಿದ್ದಾರೆ. ಲೋಕಸಭೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ. ಸೋಲಾಪುರದಲ್ಲಿ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. 2019 ರಲ್ಲಿ ಸುಶೀಲ್ ಶಿಂಧೆ ಸೋಲಾಪುರ ಕ್ಷೇತ್ರದಲ್ಲಿ ಬಿಜೆಪಿಯ ಜೈಸಿದ್ದೇಶ್ವರ ಸ್ವಾಮಿ ವಿರುದ್ಧ ಸೋತಿದ್ದರು. ಈ ಬಾರಿ ಸುಶೀಲ್ ಶಿಂಧೆ ಅವರ ಪುತ್ರಿಯ ವಿರುದ್ಧ ಬಿಜೆಪಿ ರಾಮ್ ಸಾತ್ಪುತೆ ಅವರನ್ನು ಕಣಕ್ಕಿಳಿಸಿದೆ. ರಾಮ್ ಅವರು ಮಹಾರಾಷ್ಟ್ರದ ಮಾಲ್ಶಿರಾಸ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ವೀಡಿಯೊ ವೈರಲ್ ಆಗಿತ್ತು.

Continue Reading

ಪ್ರಮುಖ ಸುದ್ದಿ

Narayana Murthy : 4.2 ಕೋಟಿ ರೂಪಾಯಿ ಡಿವಿಡೆಂಡ್​ ಜೇಬಿಗಿಳಿಸಿದ ನಾರಾಯಣ ಮೂರ್ತಿಯ 5 ತಿಂಗಳ ಮೊಮ್ಮಗ!

Narayana Murthy : ಕಳೆದ ವರ್ಷ ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಏಕಾಗ್ರ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗಳು. ಏಕಾಗ್ರಹ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರ ಪುತ್ರ. ಕೃಷ್ಣ ಮತ್ತು ಅನೌಷ್ಕಾ, ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿಯರಾಗಿದ್ದಾರೆ.

VISTARANEWS.COM


on

Narayana Murthy
Koo

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರ ಮೊಮ್ಮಗ ಏಕಾಗ್ರ ರೋಹನ್ ಕೇವಲ ಐದು ತಿಂಗಳ ವಯಸ್ಸಿನಲ್ಲಿ ಇನ್ಫೋಸಿಸ್​ ಸಂಸ್ಥೆಯಿಂದ 4.2 ಕೋಟಿ ರೂ.ಗಳ ಲಾಭಾಂಶವನ್ನು ಪಡೆದುಕೊಂಡಿದ್ದಾರೆ. ನಾರಾಯಣ ಮೂರ್ತಿ ಅವರು ಕಳೆದ ತಿಂಗಳು ಇನ್ಫೋಸಿಸ್​​ನ 240 ಕೋಟಿ ಮೌಲ್ಯದ 15 ಲಕ್ಷ ಷೇರುಗಳನ್ನು (0.04% ಪಾಲನ್ನು ಪುಟ್ಟ ಬಾಲಕನಿಗೆ ನೀಡಿದ್ದರು. ಆ ಷೇರುಗಳಿಗೆ ಈಗ ದೊಡ್ಡ ಮೊತ್ತದ ಡಿವಿಡೆಂಡ್​ ಸಿಕ್ಕಿದೆ.

ಎಕ್ಸ್​ಚೇಂಜ್​ ಫೈಲಿಂಗ್ ಪ್ರಕಾರ, ಏಕಾಗ್ರ ಇನ್ಫೋಸಿಸ್​ನ 15,00,000 ಷೇರುಗಳನ್ನು ಹೊಂದಿದ್ದಾನೆ. ಈ ವ್ಯವಹಾರವನ್ನು “ಆಫ್-ಮಾರ್ಕೆಟ್” ನಡೆಸಲಾಯಿತು ಎಂದು ಫೈಲಿಂಗ್ ಬಹಿರಂಗಪಡಿಸಿದೆ.

ಕಳೆದ ವರ್ಷ ನವೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಏಕಾಗ್ರ ರೋಹನ್ ಮೂರ್ತಿ, ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮೂರನೇ ಮೊಮ್ಮಗಳು. ಏಕಾಗ್ರಹ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರ ಪುತ್ರ. ಕೃಷ್ಣ ಮತ್ತು ಅನೌಷ್ಕಾ, ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿಯರಾಗಿದ್ದಾರೆ.

ಶೇಕಡಾ 30ರಷ್ಟು ಲಾಭ ಹೆಚ್ಚಳ

ಇನ್ಫೋಸಿಸ್ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭದಲ್ಲಿ 30% ಹೆಚ್ಚಳವನ್ನು ಘೋಷಿಸಿದೆ. ಕಳೆದ ವರ್ಷದ 6,128 ಕೋಟಿ ರೂ.ಗೆ ಹೋಲಿಸಿದರೆ 7,969 ಕೋಟಿ ರೂ.ಗೆ ತಲುಪಿದೆ. ಆದಾಯವು 37,923 ಕೋಟಿ ರೂ.ಗೆ ಸ್ವಲ್ಪ ಏರಿಕೆ ಕಂಡಿದೆ. ಮಾರ್ಚ್ 2024 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಒಟ್ಟು ಲಾಭವು 8.9% ರಷ್ಟು ಏರಿಕೆಯಾಗಿ 26,233 ಕೋಟಿ ರೂ.ಗೆ ತಲುಪಿದೆ/ ಕಾರ್ಯಾಚರಣೆಗಳಿಂದ ವಾರ್ಷಿಕ ಆದಾಯವು 4.7% ರಷ್ಟು ಏರಿಕೆಯಾಗಿ 1,53,670 ಕೋಟಿ ರೂ.ಗೆ ತಲುಪಿದೆ. ಇನ್ಫೋಸಿಸ್ ಮಂಡಳಿಯು 2024ರ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 20 ರೂ.ಗಳ ಅಂತಿಮ ಲಾಭಾಂಶ ಶಿಫಾರಸು ಮಾಡಿದೆ. ಜೊತೆಗೆ ಪ್ರತಿ ಷೇರಿಗೆ 8 ರೂ.ಗಳ ವಿಶೇಷ ಲಾಭಾಂಶವನ್ನು ಶಿಫಾರಸು ಮಾಡಿದೆ. ಹೆಚ್ಚುವರಿಯಾಗಿ, ಇನ್ಫೋಸಿಸ್ ಜರ್ಮನಿಯ ಇನ್-ಟೆಕ್ ಸಂಸ್ಥೆಯನ್ನು 450 ಮಿಲಿಯನ್ ಯುರೋಗಳ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಳ್ಳಲು ಯೋಜಿಸಿದೆ.

ಇದನ್ನೂ ಓದಿ: CET 2024 Exam: ಗಣಿತ, ಜೀವಶಾಸ್ತ್ರದ ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ ವಿರುದ್ಧ ದೂರು; ಏಪ್ರಿಲ್‌ 24ಕ್ಕೆ ಸಮಿತಿ ರಚನೆಗೆ ಕೆಇಎ ನಿರ್ಧಾರ

ಮುಂದಿನ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ 1-3% ಆದಾಯದ ಬೆಳವಣಿಗೆಯನ್ನು ನಿರೀಕ್ಷಿಸುತ್ತದೆ. ಸಂಶೋಧನಾ ಸಂಸ್ಥೆ ಮೋತಿಲಾಲ್ ಓಸ್ವಾಲ್ ಪ್ರಕಾರ, 2025ರ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಆದಾಯ ನಿರೀಕ್ಷೆಗಿಂತ ಕಡಿಮೆಯಾಗಿದೆ. ಆದರೆ ಇನ್ಫೋಸಿಸ್ ಮಧ್ಯಮಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಅವರು ಊಹೆ ಮಾಡಿದ್ದಾರೆ. ಇನ್ಫೋಸಿಸ್ 2025 ರ ಹಣಕಾಸು ವರ್ಷದ ನಂತರ ವೇಗವಾಗಿ ಬೆಳೆಯಲು ಪ್ರಾರಂಭಿಸಬಹುದು ಎಂದು ಹೇಳಿದೆ. ಟಿಸಿಎಸ್​ನಂತ ಕಂಪನಿಗಳಿಗೆ ಹೋಲಿಸಿದರೆ ಇನ್ಪೋಸಿಸ್​ ಷೇರುಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ.

Continue Reading

Lok Sabha Election 2024

Lok Sabha Election 2024: ಹಕ್ಕು ಚಲಾಯಿಸಿ ಮಾದರಿಯಾದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ

Lok Sabha Election 2024: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದೆ. ಈ ಮಧ್ಯೆ ಮಹಾರಾಷ್ಟ್ರದ ನಾಗ್ಪುರದ ಮತಗಟ್ಟೆಯೊಂದರಲ್ಲಿ ವಿಶಿಷ್ಟ ಮಹಿಳೆಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಗಮನ ಸೆಳೆದಿದ್ದಾರೆ. ಅವರೇ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎನಿಸಿಕೊಂಡಿರುವ ಜ್ಯೋತಿ ಆಮ್ಗೆ. 30 ವರ್ಷದ ಜ್ಯೋತಿ 62.8 ಸೆಂ.ಮೀ. ಎತ್ತರ ಹೊಂದಿದ್ದಾರೆ. ಈ ಕಾರಣಕ್ಕೆ ಜ್ಯೋತಿ ಅವರನ್ನು ವಿಶ್ವದ ಕುಬ್ಜ ಮಹಿಳೆ ಎಂಬುದಾಗಿ ಗಿನ್ನಿಸ್ ಸಂಸ್ಥೆ ಪ್ರಕಟಿಸಿದೆ.

VISTARANEWS.COM


on

Lok Sabha Election 2024
Koo

ಮುಂಬೈ: ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಗೆ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಮಹಾರಾಷ್ಟ್ರದ ನಾಗ್ಪುರದ ಮತಗಟ್ಟೆಯೊಂದರಲ್ಲಿ ವಿಶಿಷ್ಟ ಮಹಿಳೆಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಗಮನ ಸೆಳೆದಿದ್ದಾರೆ. ಅವರೇ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎನಿಸಿಕೊಂಡಿರುವ ಜ್ಯೋತಿ ಆಮ್ಗೆ (Jyoti Amge).

30 ವರ್ಷದ ಜ್ಯೋತಿ 62.8 ಸೆಂ.ಮೀ. ಎತ್ತರ ಇದ್ದಾರೆ. ನಾಗ್ಪುರದ ನಿವಾಸಿಯಾಗಿರುವ ಅವರು ತಮ್ಮ ಪೋಷಕರ ಜತೆಗೆ ಮನೆ ಸಮೀಪದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಹೊಳೆಯುವ ಕೆಂಪು ಬಾರ್ಬಿ ಶೈಲಿಯ ಉಡುಪನ್ನು ಧರಿಸಿ ಆಗಮಿಸಿದ್ದ ಅವರು ಎಲ್ಲರ ಗಮನ ಸೆಳೆದರು. ಅಧಿಕಾರಿಗಳು ಕೂಡ ಕರ್ತವ್ಯ ಮರೆಯದ ಜ್ಯೋತಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ʼʼಇದು ನನ್ನ ಎರಡನೇ ಲೋಕಸಭಾ ಚುನಾವಣೆಯ ಮತದಾನ. ನಾನು ಈಗಾಗಲೇ ಎರಡು ಬಾರಿ ಮತ ಚಲಾಯಿಸಿದ್ದೇನೆ. ಈ ಹಿಂದೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾನ ಮಾಡಿದ್ದೇನೆ. ನಾನು ಯಾವಾಗಲೂ ನನ್ನ ಮತದಾನದ ಹಕ್ಕನ್ನು ಚಲಾಯಿಸುತ್ತೇನೆ ಮತ್ತು ಅದು ನನ್ನ ಕರ್ತವ್ಯವೂ ಹೌದು” ಎಂದು ಜ್ಯೋತಿ ಹಕ್ಕು ಚಲಾಯಿಸಿದ ನಂತರ ಹೆಮ್ಮೆಯಿಂದ ಮಾಧ್ಯಮಗಳಿಗೆ ತನ್ನ ಶಾಯಿ ಮೆತ್ತಿದ ಬೆರಳನ್ನು ಪ್ರದರ್ಶಿಸಿದರು. 2011ರಲ್ಲಿ ಜ್ಯೋತಿ ಅವರನ್ನು ವಿಶ್ವದ ಕುಬ್ಜ ಮಹಿಳೆ ಎಂಬುದಾಗಿ ಗಿನ್ನಿಸ್ ಸಂಸ್ಥೆ ಪ್ರಕಟಿಸಿದೆ.

“ಮತದಾನ ನಮ್ಮ ಕರ್ತವ್ಯ ಮತ್ತು ಹಕ್ಕು. ನಮ್ಮ ಮತದೊಂದಿಗೆ, ನಮ್ಮನ್ನು ಪ್ರತಿನಿಧಿಸಲು ಉತ್ತಮ ನಾಯಕನನ್ನು ಆಯ್ಕೆ ಮಾಡುವುದನ್ನು ನಾವು ಖಚಿತಪಡಿಸಬಹುದು” ಎಂದು ಮಿಷನ್ಸ್ಕಿ ಇಂಡಿಯಾ ಹ್ಯೂಮನ್ ರೈಟ್ಸ್ ಅಸೋಸಿಯೇಷನ್‌ (Missionsky India Human Rights Association)ನ ಬ್ರ್ಯಾಂಡ್‌ ಅಂಬಾಸಿಡರ್ ಆಗಿರುವ ಜ್ಯೋತಿ ಹೇಳಿದರು.

‘Primordial Dwarfism’ (ಪ್ರಿಮೊರ್ಡಿಯಲ್ ಡ್ವಾರ್ಫಿಸಂ) ಎಂಬ ಕಾರಣದಿಂದ ಜ್ಯೋತಿ ಅವರ ಬೆಳವಣಿಗೆ ಕುಂಠಿತಗೊಂಡಿದೆ. ಅವರು ಭಾರತೀಯ ಮತ್ತು ಹಾಲಿವುಡ್ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜ್ಯೋತಿ ಅಮ್ಗೆ ಅವರು 1993ರ 16 ಡಿಸೆಂಬರ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ್ದರು.

ಇದನ್ನೂ ಓದಿ: Lok Sabha Election: ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಡಿಕೆಸು ನಂ.1 ಶ್ರೀಮಂತ; ಟಾಪ್‌ 10 ಪಟ್ಟಿ ಇಲ್ಲಿದೆ

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣ ಗಮನಾರ್ಹವಾಗಿ ಏರಿಕೆ ಕಂಡಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ತ್ರಿಪುರಾದಲ್ಲಿ ಶೇ. 53.04 ಹಕ್ಕು ಚಲಾವಣೆಯಾಗಿದೆ. ಮೇಘಾಲಯ ಮತ್ತು ಮಣಿಪುರ ನಂತರದ ಸ್ಥಾನದಲ್ಲಿವೆ. ಪಶ್ಚಿಮ ಬಂಗಾಳದಲ್ಲಿ ಶೇ. 50.96ರಷ್ಟು ಮತದಾನವಾಗಿದ್ದರೆ, ಲಕ್ಷದ್ವೀಪದಲ್ಲಿ ಕಡಿಮೆ ಶೇ. 29.91ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 43.11, ಅಸ್ಸಾಂನಲ್ಲಿ ಶೇ. 45.12 ಮತ್ತು ಮಧ್ಯಪ್ರದೇಶದಲ್ಲಿ ಶೇ. 44.43, ಶೇ. 40.05ರಷ್ಟು ಮತದಾನವಾಗಿದೆ.

Continue Reading
Advertisement
Instagram Reel
ದೇಶ1 min ago

Instagram Reel: ಪ್ರಾಣಕ್ಕೇ ಕುತ್ತು ತಂದ ಇನ್‌ಸ್ಟಾಗ್ರಾಮ್‌ ರೀಲ್ಸ್‌; ಸಾಹಸ ಪ್ರದರ್ಶಿಸಲು ಹೋಗಿ 21 ವರ್ಷದ ಯುವಕ ಸಾವು

IPL 2024
ಕ್ರೀಡೆ16 mins ago

IPL 2024 : ಪಾಂಡ್ಯನನ್ನು ವಿಚಿತ್ರ ನಾಯಕ ಎಂದ ಮುಂಬೈ ಇಂಡಿಯನ್ಸ್​ ಆಲ್​ರೌಂಡರ್​​

Karnataka Weather Forecast
ಮಳೆ23 mins ago

Karnataka Weather : ವರ್ಷಾಘಾತಕ್ಕೆ ಉತ್ತರ ಕರ್ನಾಟಕ ಸುಸ್ತು; ರಾತ್ರಿಯೆಲ್ಲ ಗಾಳಿ ಸಹಿತ ಮಳೆಯಾರ್ಭಟ

lok sabha Election
ಪ್ರಮುಖ ಸುದ್ದಿ45 mins ago

Lok Sabha Election : ಕಾಂಗ್ರೆಸ್​ ಪರ ಶಾರುಖ್​ ಖಾನ್​ ಪ್ರಚಾರ; ಬಿಜೆಯಿಂದ ಆಕ್ಷೇಪ!; ವಿಡಿಯೊ ಇದೆ

Road accident between bike and Bolero near Mudgal Two dead
ಕರ್ನಾಟಕ46 mins ago

Road Accident: ಮುದ್ಗಲ್‌ ಬಳಿ ಬೈಕ್‌ – ಬುಲೇರೋ ನಡುವೆ ಅಪಘಾತ; ಸ್ಥಳದಲ್ಲೇ ಇಬ್ಬರು ಸಾವು

Wedding Saree Selection
ಫ್ಯಾಷನ್50 mins ago

Wedding Saree Selection: ಮದುವೆ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಇಲ್ಲಿದೆ ಸೀರೆ ಎಕ್ಸ್‌ಫರ್ಟ್‌ಗಳ ಟಿಪ್ಸ್

ಶಿವಮೊಗ್ಗ1 hour ago

Book Release: ರಾಮನೇನು ದೇವನೇ? ಪುಸ್ತಕ ಲೋಕಾರ್ಪಣೆ ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Wipro Q4 Results
ವಾಣಿಜ್ಯ1 hour ago

Wipro Q4 Results: ಐಟಿ ದೈತ್ಯ ವಿಪ್ರೋದ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ

Fraud Case in Bengaluru
ಬೆಂಗಳೂರು1 hour ago

Fraud Case : ಉದ್ಯಮಿಗೆ ಚಮತ್ಕಾರಿ ಚೆಂಬು ಕೊಟ್ಟವರು ಅರೆಸ್ಟ್‌; 22 ಬ್ಯಾಂಕ್‌ಗಳಿಗೆ ಟೋಪಿ ಹಾಕಿದ ಫ್ಯಾಮಿಲಿ ಲಾಕ್‌

Jackfruit benefits
ಆರೋಗ್ಯ1 hour ago

Jackfruit Benefits: ಈ ಬೇಸಿಗೆಯಲ್ಲಿ ಹಲಸಿನಹಣ್ಣನ್ನು ಯಾಕೆ ತಿನ್ನಲೇಬೇಕು ಗೊತ್ತೆ? ಇಲ್ಲಿವೆ 10 ಕಾರಣಗಳು!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ3 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ13 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌