ನವದೆಹಲಿ: ಏಷ್ಯಾದಲ್ಲೇ ಅತಿ ಹೆಚ್ಚು ಕಲುಷಿತ ನಗರಗಳ ಟಾಪ್ ಟೆನ್ ಪಟ್ಟಿಯಲ್ಲಿ (Most Polluted City) ಭಾರತದ ಮೂರು ನಗರಗಳಿವೆ. ಗುಜರಾತ್‌ನ ಗಾಂಧಿನಗರ(Gandhinagar), ಅಸ್ಸಾಮ್‌ನ ಗುವಾಹಟಿ (Guwahati) ಮತ್ತು ಮಹಾರಾಷ್ಟ್ರದ ಮುಂಬೈ (Mumbai) ಮಹಾನಗರ ಅಗ್ರ ಹತ್ತರ ಪಟ್ಟಿಯಲ್ಲಿವೆ. ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್ ಬಿಡುಗಡೆ ಮಾಡಿರುವ ವರದಿಯಲ್ಲಿ ಏಷ್ಯಾದ ಅತಿ ಹೆಚ್ಚು ಕಲುಷಿತ ನಗರಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.
ವರ್ಲ್ಡ್ ಏರ್ ಕ್ವಾಲಿಟಿ ಇಂಡೆಕ್ಸ್‌ನ ಇತ್ತೀಚಿನ ಮಾಹಿತಿಯ ಪ್ರಕಾರ, ಗಾಂಧಿನಗರದ GIFT ನಗರದಲ್ಲಿ ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ಮುಟ್ಟಿದ್ದು, 724ರ ವಾಯು ಗುಣಮಟ್ಟ ಸೂಚ್ಯಂಕದೊಂದಿಗೆ (air quality index- AQI) 724 ರಷ್ಟಿದೆ. ಗಾಂಧಿನಗರದ ನಂತರ ಸ್ಥಾನದಲ್ಲಿ ಪಾನ್ ಬಜಾರ್, ಗುವಾಹಟಿ (665), ಖಿಂಡಿಪಾಡಾ-ಭಾಂಡೂಪ್ ವೆಸ್ಟ್, ಮುಂಬೈ (471) ಮತ್ತು ಭೋಪಾಲ್‌ನ ಚೌರಾಹಾ, ದೇವಾಸ್ (315) ಪ್ರದೇಶಗಳಿವೆ. ಕಲುಷಿತ ಪಟ್ಟಿಗಳ ಟಾಪ್ ಟೆನ್ ಪಟ್ಟಿಯಲ್ಲಿ ಚೀನಾದ ಐದು ಮತ್ತು ಮುಂಗೋಲಿಯಾದ ಒಂದು ನಗರವಿದೆ.
ಇದನ್ನೂ ಓದಿ: Contaminated Water: ಕಲುಷಿತ ನೀರು ಸೇವಿಸಿ ಮಹಿಳೆ ಸಾವು; ವಾಂತಿ-ಭೇದಿಯಿಂದ 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು
0 ಮತ್ತು 50 ರ ನಡುವಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಉತ್ತಮ, 51ರಿಂದ 100 ಸೂಚ್ಯಂಕವನ್ನು ಮಧ್ಯಮ ಹಾಗೂ 101ರಿಂದ 150 ಸೂಚ್ಯಂಕವನ್ನು ಸೂಕ್ಷ್ಮ ಗುಂಪುಗಳಿಗೆ ಅನಾರೋಗ್ಯಕರ, 151ರಿಂದ 200 ಸೂಚ್ಯಂಕವನ್ನು ಅನಾರೋಗ್ಯಕರ, 201-300 ಸೂಚ್ಯಂಕವನ್ನು ಅತ್ಯಂತ ಅನಾರೋಗ್ಯಕರ ಹಾಗೂ 300+ ಸೂಚ್ಯಂಕವನ್ನು ‘ಅಪಾಯಕಾರಿ’ ಎಂದು ಪರಿಗಣಿಸಲಾಗತ್ತದೆ. ಅಂದ ಹಾಗೆ, ಟಾಪ್ ಟೆನ್ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ನಗರಗಳಿಲ್ಲ.