ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ಮಜಗಾಂವ್ ಡಾಕ್‌ಯಾರ್ಡ್‌ನಲ್ಲಿ (ಹಡಗು ಕಟ್ಟೆ-Dockyard) ಕೆಲಸ ಮಾಡುತ್ತಿದ್ದ (ಹಡಗುಗಳ ಮೇಲೆ ನಿಗಾ ಇರಿಸುವ ಸಿಬ್ಬಂದಿ) ಅಧಿಕಾರಿಯೊಬ್ಬನನ್ನು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ (ATS) ಅಧಿಕಾರಿಗಳು ಬಂಧಿಸಿದ್ದಾರೆ. ಪಾಕಿಸ್ತಾನಕ್ಕೆ (Pakistan) ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದ (Spy) ಹಿನ್ನೆಲೆಯಲ್ಲಿ ನಿಖರ ಮಾಹಿತಿ ಪಡೆದ ಎಟಿಎಸ್ ಅಧಿಕಾರಿಗಳು ಕಲ್ಪೇಶ್ ಬೈಕರ್ (Kalpesh Baikar) ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಮಜಗಾವ್ ಡಾಕ್‌ಯಾರ್ಡ್‌ನಲ್ಲಿ ಆರೋಪಿಯು ಸ್ಟ್ರಕ್ಚುರಲ್ ಫ್ಯಾಬ್ರಿಕೇಟರ್ ಆಗಿದ್ದ ಕಲ್ಪೇಶ್ ಬೈಕರ್, ಕೆಲ ತಿಂಗಳಿಂದ ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ ಎಂದು ತಿಳಿದುಬಂದಿದೆ. ಈತನು ಬೇಹುಗಾರಿಕೆ ನಡೆಸುತ್ತಿರುವ ಕುರಿತು ಎಟಿಎಸ್ ಅಧಿಕಾರಿಗಳು ನಿಖರ ಮಾಹಿತಿ ಪಡೆದಿದ್ದಾರೆ. ಇದಾದ ಬಳಿಕ ಆತನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಈತನು ಪಾಕಿಸ್ತಾನದ ಏಜೆಂಟ್‌ಗೆ ರವಾನಿಸುತ್ತಿದ್ದ ಎಂದು ಹೇಳಲಾಗುತ್ತಿದೆ.
ಹನಿಟ್ರ್ಯಾಪ್‌ಗೆ ಅಧಿಕಾರಿ ಬಲಿ
ಪಾಕಿಸ್ತಾನದ ಮಹಿಳಾ ಏಜೆಂಟ್ ಜತೆ ಕಲ್ಪೇಶ್ ಬೈಕರ್ ಸಂಪರ್ಕ ಸಾಧಿಸಿದ್ದಾನೆ. ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್‌ಗಳ ಮೂಲಕ ಪರಿಚಯವಾಗಿದ್ದು, ಇಬ್ಬರ ಮಧ್ಯೆ ಆತ್ಮೀಯತೆ ಬೆಳೆದಿದೆ. ಪಾಕಿಸ್ತಾನದ ಮಹಿಳೆಯು ಏಜೆಂಟ್ ಎಂಬುದನ್ನು ಅರಿಯದ ಕಲ್ಪೇಶ್ ಬೈಕರ್, ತನ್ನ ವೈಯಕ್ತಿಕ ವಿಚಾರ, ಫೋಟೊ, ವಿಡಿಯೊಗಳನ್ನು ಕೂಡ ಆಕೆಯೊಂದಿಗೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತಕ್ಕೆ ಬಲೂನ್ ಬಿಟ್ಟ ಪಾಕಿಸ್ತಾನ; ಬೇಹುಗಾರಿಕೆ ಕುತಂತ್ರದ ಅನುಮಾನ!
ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡ ಬಳಿಕ ಪಾಕಿಸ್ತಾನದ ಮಹಿಳಾ ಏಜೆಂಟ್ ಈತನಿಗೆ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ತಾನು ಹನಿಟ್ರ್ಯಾಪ್‌ಗೆ ಒಳಗಾಗಿದ್ದೇನೆ ಎಂಬುದನ್ನು ಅರಿತ ಕಲ್ಪೇಶ್ ಬೈಕರ್‌ನು ಅನಿವಾರ್ಯವಾಗಿ ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಆಕೆಯೊಂದಿಗೆ ಹಂಚಿಕೊಂಡಿದ್ದಾನೆ ಎಂದು ಎಟಿಎಸ್ ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ