ಮುಂಬೈ: ನಿನ್ನೆ ಮುಂಬೈನಲ್ಲಿ ನಡೆದ ಡ್ರಂಕ್ ಆಂಡ್ ಡ್ರೈವ್(Mumbai Hit And Run) ಕೇಸ್‌ನ ಪ್ರಮುಖ ಆರೋಪಿ ಶಿವಸೇನೆ ಮುಖಂಡ(ShivSena Leader)ನ ಪುತ್ರ ಘಟನೆಗೂ ಮುನ್ನ ಆರೋಪಿ ಮಿಹಿರ್ ಶಾ(Mihir Shah) ಮತ್ತು ಆತನ ಸ್ನೇಹಿತರು ಬಾರ್‌ಗೆ ತೆರಳಿದ್ದು, ಬರೋಬ್ಬರಿ 18 ಸಾವಿರಕ್ಕೂ ಅಧಿಕ ಬಿಲ್ ಆಗಿತ್ತು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಮಿಹಿರ್ ಹಾಗೂ ಆತನ ಸೇಹಿತರು ಜೂಹೂನಲ್ಲಿರುವ ಗ್ಲೋಬಲ್ ತಾಪಸ್ ಬಾರ್‌ಗೆ ತೆರಳಿದ್ದರು ಎನ್ನಲಾಗಿದೆ.
ಇನ್ನು ಈ ಬಗ್ಗೆ ಬಾರ್ ಮಾಲಿಕ ಕರಣ್ ಶಾ ಮಾಹಿತಿ ನೀಡಿದ್ದು, ಮಿಹಿರ್ ಶಾ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾರ್‌ಗೆ ಬಂದಿದ್ದ. ಈ ವೇಳೆ ಆತನ ಜೊತೆ ಯಾರೂ ಮಹಿಳೆಯರು ಇರಲಿಲ್ಲ. ಅವರು 18,730 ಬಿಲ್ ಪಾವತಿಸಿ ತಮ್ಮ ಮರ್ಸಿಡಿಸ್ ಬೆನ್ಸ್ ಕಾರಿನಲ್ಲಿ ತೆರಳಿದ್ದರು. ಮಿಹಿರ್‌ನ ಹೊರತಾಗಿ ಉಳಿದವರೆಲ್ಲವರೂ ಒಂದೊಂದು ಬಿಯರ್ ಕುಡಿದಿದ್ದರು. ಮಿಹಿರ್ ಮಾತ್ರ ರೆಡ್ ಬುಲ್ ಸೇವಿಸಿದ್ದ. ಬಾರ್‌ಗೆ ಅವರು ಪ್ರವೇಶಿಸುವ ಮುನ್ನ ಅವರ ಗುರುತಿನ ಚೀಟಿ ಪರಿಶೀಲನೆ ಮಾಡಲಾಗಿತ್ತು. ಪೊಲೀಸರಿಗೆ ಅಗತ್ಯವಿರವ ಎಲ್ಲಾ ಮಾಹಿತಿಯನ್ನು ನಾವು ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಆರೋಪಿಯ ತಂದೆ ಅರೆಸ್ಟ್
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಹಿರ್‌ನ ತಂದೆ, ಶಿವಸೇನೆ ನಾಯಕ ನಾಯಕ ರಾಜೇಶ್ ಶಾ ಅವರನ್ನು ಪಾಲ್ಘರ್ ಜಿಲ್ಲೆಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರು ರಾಜೇಶ್ ಶಾ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಕಾರಣ ಅವರನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಕಾರು ಚಾಲಕ ರಾಜಋಷಿ ಬಿದಾವತ್ ಎಂಬುವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಮುಂಬೈನ ವೊರ್ಲಿಯಲ್ಲಿ ರಾಜೇಶ್ ಶಾ (Rajesh Shah) ಅವರ ಪುತ್ರ ಮಿಹಿರ್ ಶಾ (Mihir Shah) ಕುಡಿದು ವಾಹನ ಚಲಾಸುವಾಗ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದು, ಮಹಿಳೆ ಮೃತಪಟ್ಟಿದ್ದಾರೆ. ಆಕೆಯ ಪತಿಯು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ 24 ವರ್ಷದ ಮಿಹಿರ್ ಶಾ ಪರಾರಿಯಾಗಿದ್ದ, ಬಳಿಕ ಪೊಲೀಸರು ಅವನ ತಂದೆಯನ್ನು ವಶಪಡಿಸಿಕೊಂಡಿದ್ದಾರೆ.
ಕಾವೇರಿ ನಖ್ವಾ ಮತ್ತು ಪ್ರದೀಕ್ ನಖ್ವಾ ಎಂಬ ದಂಪತಿ ಹೋಗುತ್ತಿದ್ದ ಬೈಕ್‌ಗೆ BMW ಕಾರು ಡಿಕ್ಕಿ ಹೊಡೆದಿದ್ದು, ಕೂಡಲೇ ಮಿಹಿರ್ ಶಾ ಎಸ್ಕೇಪ್ ಆಗಿದ್ದಾನೆ. ಬೆಳಗ್ಗೆ 5:30ರ ಸಮಯದಲ್ಲಿ ದಂಪತಿ ಸಾಸಾನ್ ಡಾಕ್ ಮಾರುಕಟ್ಟೆಯಿಂದ ಮೀನು ಖರೀದಿಸಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನು ದಂಪತಿ ಪ್ರದೀಕ್ ನಖ್ವಾ ಮಾರುಕಟ್ಟೆಯಲ್ಲಿ ಮೀನಿನ ವ್ಯಾಪಾರಿಯಾಗಿದ್ದಾರೆ. ಕಾರು ಡಿಕ್ಕಿಯಗುತ್ತಿದ್ದಂತೆ ರಸ್ತೆಗೆ ಬಿದ್ದಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಕಾವೇರಿ ಮತ್ತು ಪ್ರದೀಕ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾವೇರಿ ಕೊನೆಯುಸಿರೆಳೆದಿದ್ದಾರೆ.
ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮಿಹಿರ್ ಶಾ ನಾಪತ್ತೆಯಾಗಿದ್ದ. ಮಿಹಿರ್ ಶಾ ತನ್ನ ಫೋನನ್ನೂ ಸ್ವಿಚ್ ಆಫ್ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದರು. ಮಿಹಿರ್ ಪೊಲೀಸರಿಗೆ ಹೆದರಿ ತನ್ನ ಪ್ರೇಯಸಿ ಮನೆಯಲ್ಲಿ ಅವಿತಿದ್ದ. ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರ ಪ್ರಕಾರ ಮಿಹಿರ್ ಕಳೆದ ರಾತ್ರಿ ಜೂಹೂ ಪ್ರದೇಶದಲ್ಲಿರುವ ಬಾರ್‌ನಲ್ಲಿ ಕಂಠಪೂರ್ತಿ ಕುಡಿದಿದ್ದು. ತನ್ನ ಮನೆಗೆ ಹಿಂದಿರುಗುವ ವೇಳೆ ಲಾಂಗ್ ಡ್ರೈವ್ ಕರೆದುಕೊಂಡು ಹೋಗುವಂತೆ ಡ್ರೈವರ್‌ಗೆ ಹೇಳಿದ್ದಾನೆ. ವರ್ಲಿಗೆ ತಲುಪುತ್ತಿದ್ದಂತೆ ತಾನು ಕಾರು ಚಲಾಯಿಸುವುದಕ್ಕೆ ಮುಂದಾಗಿದ್ದಾನೆ. ಆಗ ಅತ್ಯಂತ ವೇಗವಾಗಿ ಕಾರು ಚಲಾಯಿಸಿದ ಮಿಹಿರ್, ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಇದನ್ನೂ ಓದಿ: Mumbai Rain : ಭಾನುವಾರ ರಾತ್ರಿ ಪೂರ್ತಿ ಸುರಿದ ಮಳೆಗೆ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತ