ಮುಂಬೈ: ನವದೆಹಲಿಯ ಶಹಬಾದ್‌ನಲ್ಲಿ ಯುವಕನೊಬ್ಬ 16 ವರ್ಷದ ಗರ್ಲ್‌ಫ್ರೆಂಡ್‌ಗೆ 21 ಬಾರಿ ಚಾಕು ಇರಿದು ಘೋರವಾಗಿ ಹತ್ಯೆ ಮಾಡಿದ ಪ್ರಕರಣದ ಬೆನ್ನಲ್ಲೇ ಮುಂಬೈನಲ್ಲಿ ಯುವಕನೊಬ್ಬ ತನ್ನ ಗರ್ಲ್‌ಫ್ರೆಂಡ್ ಮೇಲೆ ಹಲ್ಲೆ ನಡೆಸಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್‌ಗೆ ನಿರಾಕರಿಸಿದ ಕಾರಣ ಯುವತಿಯ ಕತ್ತುಹಿಸುಕಿ, ಆಕೆಯ ತಲೆಯನ್ನು ಬಂಡೆಗೆ ಬಡಿಸಿ ಹಲ್ಲೆ ಮಾಡಿದ್ದಾನೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮುಂಬೈ ಉಪನಗರ ಬಾಂದ್ರಾದಲ್ಲಿ ಮೇ 31ರಂದು ಘಟನೆ ನಡೆದಿದೆ. ಬಾಂದ್ರಾದ ಬಾಂಡ್‌ಸ್ಟಾಂಡ್‌ನಲ್ಲಿ 28 ವರ್ಷದ ಆಕಾಶ್ ಮುಖರ್ಜಿ ಹಾಗೂ ಆತನ ಗರ್ಲ್‌ಫ್ರೆಂಡ್ ಭೇಟಿಯಾಗಿದ್ದಾರೆ. ಇದೇ ವೇಳೆ, ರೊಮ್ಯಾನ್ಸ್ ಮಾಡಲು ಆಕಾಶ್ ಮುಂದಾಗಿದ್ದಾನೆ. ರೊಮಾನ್ಸ್‌ಗೆ ಸಹಕರಿಸುವಂತೆಯೂ ಪೀಡಿಸಿದ್ದಾನೆ. ಆದರೆ, ಸಾರ್ವಜನಿಕ ಸ್ಥಳದಲ್ಲಿ ರೊಮ್ಯಾನ್ಸ್ ಮಾಡಲು ಯುವತಿ ನಿರಾಕರಿಸಿದ್ದಾಳೆ. ಇದರಿಂದ ಆಕಾಶ್ ಮುಖರ್ಜಿ ಕುಪಿತಗೊಂಡು ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ರೊಮ್ಯಾನ್ಸ್‌ಗೆ ನಿರಾಕರಿಸಿದ ಕಾರಣ ಆಕಾಶ್ ಮೊದಲು ತನ್ನ ಗರ್ಲ್‌ಫ್ರೆಂಡ್ ಕತ್ತುಹಿಸುಕಿದ್ದಾನೆ. ಇದಾದ ಬಳಿಕ ಬಂಡೆಗೆ ಆಕೆಯ ತಲೆ ಬಡಿಸಿದ್ದಾನೆ. ಇದಾದ ಬಳಿಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಆಕಾಶ್ ಮುಖರ್ಜಿಯನ್ನು ಪೊಲೀಸರು ಬಂಧಿಸಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: Delhi Murder: ಸಾಹಿಲ್‌ನಿಂದ ಹತಳಾದ ಸಾಕ್ಷಿ ನನ್ನ ಗರ್ಲ್‌ಫ್ರೆಂಡ್ ಎಂದ ಮತ್ತೊಬ್ಬ ಯುವಕ; ಕೊಲೆಗೆ ಮತ್ತೊಂದು ಟ್ವಿಸ್ಟ್
ಆಕಾಶ್ ಮುಖರ್ಜಿ ಹಾಗೂ ಯುವತಿಯು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಬುಧವಾರ ಇಬ್ಬರೂ ಕಲ್ಯಾಣ ಪ್ರದೇಶದಿಂದ ರೈಲಿನಲ್ಲಿ ತಿರುಗಾಡಿದ್ದಾರೆ. ಗೇಟ್‌ವೇ ಆಫ್ ಇಂಡಿಯಾ, ಗಿರಗಾಂವ್ ಚೌಪಟ್ಟಿ ಸೇರಿ ಹಲವು ಕಡೆ ಸುತ್ತಾಡಿದ್ದಾರೆ. ಸಾಯಂಕಾಲ ಬಾಂದ್ರಾ ಬಾಂಡ್‌ಸ್ಟಾಂಡ್‌ಗೆ ಬಂದಾಗ ಆಕಾಶ್ ಮುಖರ್ಜಿ ರೊಮ್ಯಾನ್ಸ್‌ಗೆ ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಸಾಹಿಲ್ ಎಂಬ ಯುವಕನು 16 ವರ್ಷದ ಸಾಕ್ಷಿಯನ್ನು ಕೆಲ ದಿನಗಳ ಹಿಂದಷ್ಟೇ ಕ್ರೂರವಾಗಿ ಹತ್ಯೆಗೈದಿದ್ದಾನೆ. ಹತ್ಯೆಗೈದ ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದು, ನ್ಯಾಯಾಲಯವು ಕಸ್ಟಡಿಗೆ ನೀಡಿದೆ. ಇದರ ಬೆನ್ನಲ್ಲೇ, ಗರ್ಲ್‌ಫ್ರೆಂಡ್ ಮೇಲೆ ಹಲ್ಲೆ ನಡೆದ ಪ್ರಕರಣ ಮುಂಬೈನಲ್ಲಿ ನಡೆದಿದೆ.