Site icon Vistara News

video viral: ಚಿಕ್ಕ ಕಣ್ಣುಗಳಿದ್ದರೆ ಇಷ್ಟೆಲ್ಲಾ ಅನುಕೂಲವಾಗುತ್ತಾ? ನಾಗಾಲ್ಯಾಂಡ್ ಸಚಿವರು ಹೇಳಿದ ಲಾಭಗಳು ಇಲ್ಲಿವೆ!

nagaland minister

ಕೊಹಿಮಾ: ಈಶಾನ್ಯ ರಾಜ್ಯಗಳ ಜನರ ಕಣ್ಣು ಸ್ವಲ್ಪ ಸಣ್ಣ ಸಣ್ಣ. ಚೀನಾದ ಜನರ ಹಾಗೆ. ನಾವು ಅವರನ್ನು ನೋಡಿ ಪಾಪ.. ಅಂತೇವೆ. ಆದರೆ, ಈ ರೀತಿ ಚಿಕ್ಕ ಚಿಕ್ಕ ಕಣ್ಣುಗಳಿಗೆ ಹಲವು ಅನುಕೂಲಗಳಿವೆ ಅಂತ ನಾಗಾಲ್ಯಾಂಡ್‌ನ ಉನ್ನತ ಶಿಕ್ಷಣ ಮತ್ತು ಬುಡಕಟ್ಟು ಅಭಿವೃದ್ಧಿ ಸಚಿವ ತೆಮ್​ಜನ್ ಇಮ್ನಾ ಅಲೋಂಗ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಚಿವರು ತಮ್ಮ ಚಿಕ್ಕ ಕಣ್ಣುಗಳ ಕುರಿತಾಗಿ ಹಾಸ್ಯಭರಿತವಾಗಿ ಮಾತನಾಡಿದ್ದಾರೆ. ಈಶಾನ್ಯ ಭಾರತದ ಜನರ ಮುಖ ಹಾಗೂ ಕಣ್ಣುಗಳು ವಿಭಿನ್ನವಾಗಿರುತ್ತವೆ. ಅದರಲ್ಲೂ ಕಣ್ಣುಗಳು ಬಹಳ ಚಿಕ್ಕದಾಗಿರುತ್ತದೆ. ಇದರಿಂದ ಅನೇಕ ಉಪಯೋಗಗಳಿವೆ. ಚಿಕ್ಕ ಕಣ್ಣು ಹೊಂದಿರುವವರ ದೃಷ್ಟಿ ತುಂಬ ಶಾರ್ಪ್‌ ಆಗಿರುತ್ತದೆ. ಚಿಕ್ಕ ಕಣ್ಣುಗಳಿದ್ದರೆ ಕಸ, ದೂಳು ಸೇರುವುದು ಕಡಿಮೆ. ಅದಕ್ಕಿಂತಲೂ ಹೆಚ್ಚಾಗಿ ಯಾವುದಾದರೂ ಸಮಾರಂಭ ದೀರ್ಘ ಕಾಲ ನಡೆಯುತ್ತಿದ್ದರೆ, ಅಂತಹ ಸಮಾರಂಭದಲ್ಲಿ ಆರಾಮಾಗಿ ನಿದ್ದೆ ಮಾಡಬಹುದು, ಇದು ಯಾರಿಗೂ ಗೊತ್ತಾಗುವುದಿಲ್ಲ ಎಂದಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರು ಚಪ್ಪಾಳೆ ತಟ್ಟಿ ನಕ್ಕಿದ್ದಾರೆ.

ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಸ್ಸಾಂ ಸಿಎಂ ಹಿಮಾಂತ್ ಬಿಸ್ವಾ ಕೂಡ ಸಚಿವರ ಈ ವಿಡಿಯೊವನ್ನು ಹಂಚಿಕೊಂಡಿದ್ದು, ಈಶಾನ್ಯ ಭಾಗದ ಜನರ ಪರವಾಗಿ ಧ್ವನಿ ಎತ್ತಿದ ನಿಮಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.

ಇದನ್ನು ಓದಿ| ರಿಪೋರ್ಟರ್‌ಗಳಿಗೆ ಟೀ ಸರ್ವ್‌ ಮಾಡಿದ ಅಕ್ಷತಾ ಮೂರ್ತಿ, ಫೋಟೊ ವೈರಲ್‌

Exit mobile version