Site icon Vistara News

ದ್ರೌಪದಿ ಮುರ್ಮು ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ, ಬುಡಕಟ್ಟು ಮಹಿಳೆಗೆ ಮನ್ನಣೆ

draupadi murmu

ನವ ದೆಹಲಿ: ಜಾರ್ಖಂಡ್‌ನ ರಾಜ್ಯಪಾಲರಾಗಿದ್ದ ಬಿಜೆಪಿ ನಾಯಕಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್‌ಡಿಎ ಘೋಷಿಸಿದೆ. ಬುಡಕಟ್ಟು ಹಿನ್ನೆಲೆಯ ಮಹಿಳೆಯನ್ನು ಉನ್ನತ ಸ್ಥಾನದ ಸ್ಪರ್ಧೆಗೆ ಘೋಷಿಸಿ ಬಿಜೆಪಿ ಭಿನ್ನತೆ ಮೆರೆದಿದೆ.

ಈ ಹಿಂದೆಯೂ ದ್ರೌಪದಿ ಮುರ್ಮು ಅವರ ಹೆಸರು ರಾಷ್ಟ್ರಪತಿ ಪದವಿಗೆ ಕೇಳಿಬಂದಿತ್ತು. ಈ ಬಾರಿ ಅಧಿಕೃತ ಘೋಷಣೆಯಾಗಿದೆ. ಮೂಲತಃ ಒಡಿಶಾದ ಮಯೂರ್‌ಭಂಜ್‌ನ ಬುಡಕಟ್ಟು ಸಮುದಾಯದ ಹಿನ್ನೆಲೆಯ ಮುರ್ಮು ಅವರು, ಪ್ರತಿಪಕ್ಷಗಳ ಅಭ್ಯರ್ಥಿಯಾಗಿರುವ ಯಶವಂತ್‌ ಸಿನ್ಹಾ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ.

ಈ ಬಾರಿ ರಾಷ್ಟ್ರಪತಿ ಚುನಾವಣೆ ಕಣ ಸಾಕಷ್ಟು ಕುತೂಹಲ ಕೆರಳಿಸಿದೆ. ಪ್ರತಿಪಕ್ಷಗಳು ಒಗ್ಗಟ್ಟಾಗಿವೆ. ರಾಜ್ಯಸಭೆಯಲ್ಲೂ ಇವುಗಳಿಗೆ ಸಾಕಷ್ಟು ಸ್ಥಾನಬಲ ಇರುವುದರಿಂದ, ಸಮಬಲದ ಪೈಪೋಟಿ ಏರ್ಪಟ್ಟಂತೆ ತೋರುತ್ತಿದೆ.

ವಿಭಿನ್ನ ಬಗೆಯ ಆಯ್ಕೆಗೆ ಹೆಸರಾಗಿರುವ ಎನ್‌ಡಿಎ, ಕಳೆದ ಬಾರಿ ದಲಿತ ಹಿನ್ನೆಲೆಯ ರಾಮನಾಥ್‌ ಕೋವಿಂದ್‌ ಅವರನ್ನು ಆರಿಸಿ ತಂದಿತ್ತು. ಅದಕ್ಕೂ ಮುನ್ನ ವಿಜ್ಞಾನಿ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರನ್ನು ಸ್ಪರ್ಧೆಗೆ ನಿಲ್ಲಿಸಿ ಗೆಲ್ಲಿಸಿಕೊಂಡಿತ್ತು.

ದ್ರೌಪದಿ ಮುರ್ಮು ಅವರು ಜನಿಸಿದ್ದು 1958ರ ಜೂನ್‌ ೨೦ರಂದು. 2015-20ರ ಅವಧಿಯಲ್ಲಿ ಜಾರ್ಖಂಡ್‌ ರಾಜ್ಯಪಾಲರಾಗಿದ್ದರು. ನಗರಸಭಾ ಅಧ್ಯಕ್ಷತೆಯಿಂದ ಆರಂಭಿಸಿ ಭಾರತೀಯ ಜನತಾ ಪಕ್ಷದ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಯಾರಿವರು ದ್ರೌಪದಿ ಮುರ್ಮು? ಗೆದ್ದರೆ ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ

Exit mobile version