Site icon Vistara News

Medicine side effect : ಗುಣಮಟ್ಟಕ್ಕೆ ಆದ್ಯತೆ; ಔಷಧ ಕಂಪನಿಗಳಿಗೆ ಹೊಸ ಮಾನದಂಡ ರೂಪಿಸಿದ ಕೇಂದ್ರ ಸರ್ಕಾರ

Medicine company

ನವ ದೆಹಲಿ: ಭಾರತೀಯ ಔಷಧ ಕಂಪನಿಗಳಿಗೆ ಹೊಸ ಮಾನದಂಡಗಳನ್ನು ರೂಪಿಸಿ ಕೇಂದ್ರ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಅಡ್ಡ ಪರಿಣಾಮ (Medicine side effect ) ತಪ್ಪಿಸಲು ಹಾಗೂ ಗುಣಮಟ್ಟ ಹೆಚ್ಚಿಸಲು ನಿರ್ದಿಷ್ಟ ಉತ್ಪಾದನಾ ಮಾನದಂಡಗಳನ್ನು ಪೂರೈಸಬೇಕು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ಸಣ್ಣ ಕಂಪನಿಗಳು ತಮ್ಮ ಸಾಲದ ಹೊರೆಯನ್ನು ಉಲ್ಲೇಖಿಸಿ ಮಾನದಂಡಗಳನ್ನು ಅನ್ವಯ ಮಾಡಲು ಸಮಯವಕಾಶ ಕೇಳಿದೆ.

2022ರಿಂದ ಭಾರತದಲ್ಲಿ ನಿರ್ಮಾಣಗೊಂಡ ಔಷಧಗಳ ನಕಾರಾತ್ಮಕ ಪರಿಣಾಮ ಬೀರಿ ಸಾವುಗಳು ಸಂಭವಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಹೊಸ ಮಾನದಂಡಗಳನ್ನು ಔಷಧ ಕಂಪನಿಗಳು ಕಡ್ಡಾಯ ಪಾಲಿಸಬೇಕು ಎಂದು ಕಡ್ಡಾಯವಾಗಿ ಹೇಳಿದೆ. ಈ ಮೂಲಕ 50 ಬಿಲಿಯನ್ ಡಾಲರ್ ಉದ್ಯಮದ ಚಿತ್ರಣವನ್ನು ಬದಲಾಯಿಸಲು ಸರ್ಕಾರ ಮುಂದಾಗಿದೆ.

ಔಷಧೀತ ಉತ್ಪನ್ನಗಳು ತಮ್ಮ ಉದ್ದೇಶಿತ ಬಳಕೆಗೆ ಯೋಗ್ಯವಾಗಿವೆ, ಪರವಾನಗಿಯ ಅವಶ್ಯಕತೆಗಳನ್ನು ಅನುಸರಿಸುತ್ತವೆ ಮತ್ತು ಅಸಮರ್ಪಕ ಸುರಕ್ಷತೆ, ಗುಣಮಟ್ಟ ಅಥವಾ ಪರಿಣಾಮದಿಂದ ರೋಗಿಗಳನ್ನು ಅಪಾಯಕ್ಕೆ ತಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ತಯಾರಕರು ಔಷಧೀಯ ಉತ್ಪನ್ನಗಳ ಗುಣಮಟ್ಟದ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಡಿಸೆಂಬರ್ 28 ರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಔಷಧಗಳ ಪರೀಕ್ಷೆಗಳಲ್ಲಿ “ತೃಪ್ತಿಕರ ಫಲಿತಾಂಶಗಳನ್ನು” ಪಡೆದ ನಂತರವೇ ಕಂಪನಿಗಳು ಸಿದ್ಧಪಡಿಸಿದ ಉತ್ಪನ್ನವನ್ನು ಮಾರಾಟ ಮಾಡಬೇಕು ಮತ್ತು ಬ್ಯಾಚ್​​ನ ಪುನರಾವರ್ತಿತ ಪರೀಕ್ಷೆ ಅಥವಾ ಪರಿಶೀಲನೆಗೆ ಅನುವು ಮಾಡಿಕೊಡಲು ಮಧ್ಯಂತರ ಮತ್ತು ಅಂತಿಮ ಉತ್ಪನ್ನಗಳ ಮಾದರಿಗಳ ಸಾಕಷ್ಟು ಪ್ರಮಾಣವನ್ನು ಉಳಿಸಿಕೊಳ್ಳಬೇಕು ಎಂದು ಅದು ಹೇಳಿದೆ.

ಇದನ್ನೂ ಓದಿ: Ramjyoti: ಅಯೋಧ್ಯೆಯಿಂದ ಕಾಶಿಗೆ ರಾಮಜ್ಯೋತಿ ತರಲು ಮುಸ್ಲಿಂ ಮಹಿಳೆಯರು ಸಜ್ಜು; ಸಂದೇಶವೇನು?

ಡಿಸೆಂಬರ್ 2022ರಿಂದ ಆರಂಭಗೊಂಡಂತೆ 162 ಔಷಧ ಕಾರ್ಖಾನೆಗಳಿಗೆ ಒಳಬರುವ ಕಚ್ಚಾ ವಸ್ತುಗಳ ಪರೀಕ್ಷೆಯನ್ನು ಪರೀಕ್ಷೆ ಮಾಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಗ್ಯ ಸಚಿವಾಲಯ ಕಳೆದ ಆಗಸ್ಟ್​​ನಲ್ಲಿ ತಿಳಿಸಿತ್ತು. ಭಾರತದ 8,500 ಸಣ್ಣ ಔಷಧ ಕಾರ್ಖಾನೆಗಳಲ್ಲಿ ಶೇಕಡಾ 25ರಷ್ಟು ಕಡಿಮೆ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿಗದಿಪಡಿಸಿದ ಅಂತಾರರಾಷ್ಟ್ರೀಯ ಔಷಧ ಉತ್ಪಾದನಾ ಮಾನದಂಡಗಳನ್ನು ಪೂರೈಸಿದೆ ಎಂದು ಅದು ಹೇಳಿದೆ.

ದೊಡ್ಡ ಔಷಧಿ ತಯಾರಕರು ಆರು ತಿಂಗಳೊಳಗೆ ಮತ್ತು ಸಣ್ಣ ತಯಾರಕರು 12 ತಿಂಗಳಲ್ಲಿ ಆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಣ್ಣ ಕಂಪನಿಗಳು ಗಡುವನ್ನು ವಿಸ್ತರಿಸುವಂತೆ ಕೇಳಿದ್ದವು, ಈಗಾಗಲೇ ಭಾರಿ ಸಾಲದಲ್ಲಿರುವುದರಿಂದ ಹೊಸ ಮಾನದಂಡಗಳನ್ನು ಪೂರೈಸಲು ಮುಂದಾದರೆ ಅವುಗಳಲ್ಲಿ ಅರ್ಧದಷ್ಟು ಮುಚ್ಚಲ್ಪಡುತ್ತವೆ. ಹೀಗಾಗಿ ಗಡುವು ವಿಸ್ತರಿಸಲಾಗಿದೆ.

ಡಬ್ಲ್ಯುಎಚ್ಒ ಮತ್ತು ಇತರ ಆರೋಗ್ಯ ಅಧಿಕಾರಿಗಳು ಗಾಂಬಿಯಾ, ಉಜ್ಬೇಕಿಸ್ತಾನ್ ಮತ್ತು ಕ್ಯಾಮರೂನ್​​ನಲ್ಲಿ ಕನಿಷ್ಠ 141 ಮಕ್ಕಳ ಸಾವಿಗೆ ಭಾರತೀಯ ಕೆಮ್ಮಿನ ಸಿರಪ್​ಗಳು ಕಾರಣ ಎಂದು ಹೇಳಿವೆ.

Exit mobile version