Site icon Vistara News

Netflix Password: ಭಾರತದಲ್ಲಿ ಇಂದಿನಿಂದ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಶೇರಿಂಗ್‌ ಅಂತ್ಯ; ಇವರಿಗೆ ಮಾತ್ರ ಶೇರಿಂಗ್‌ ಸಾಧ್ಯ

Netflix Password Sharing Ends India

Netflix ends password sharing in India, users to only let household members use their account

ನವದೆಹಲಿ: ಭಾರತ ಸೇರಿ ಜಗತ್ತಿನಾದ್ಯಂತ ಪ್ರಮುಖ ಒಟಿಟಿ (Over The Top) ವೇದಿಕೆಯಾಗಿರುವ, ಪ್ರಮುಖ ಸಿನಿಮಾ ಹಾಗೂ ವೆಬ್‌ಸಿರೀಸ್‌ಗಳಿಂದಲೇ ಭಾರತದಲ್ಲಿ ಕೋಟ್ಯಂತರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ನೆಟ್‌ಫ್ಲಿಕ್ಸ್‌ ಈಗ ಭಾರತದ ಗ್ರಾಹಕರಿಗೆ ಕಹಿ ಸುದ್ದಿ ನೀಡಿದೆ. ದೇಶಾದ್ಯಂತ ನೆಟ್‌ಫ್ಲಿಕ್‌ ಪಾಸ್‌ವರ್ಡ್‌ (Netflix Password) ಶೇರಿಂಗ್‌ಅನ್ನು ನೆಟ್‌ಫ್ಲಿಕ್ಸ್‌ ಅಂತ್ಯಗೊಳಿಸಿದೆ. ಇದರಿಂದ ನೀವು ನಿಮ್ಮ ಗೆಳೆಯರು ಸೇರಿ ಹಲವರಿಗೆ ಪಾಸ್‌ವರ್ಡ್‌ ಶೇರ್‌ ಮಾಡಲು ಸಾಧ್ಯವಾಗುವುದಿಲ್ಲ.

ಇನ್ನು ಮುಂದೆ ನೆಟ್‌ಫ್ಲಿಕ್ಸ್‌ ಬಳಕೆದಾರರು ತಮ್ಮ ಮನೆಯಲ್ಲಿರುವವರಿಗೆ ಮಾತ್ರ ಪಾಸ್‌ವರ್ಡ್‌ ಶೇರ್‌ ಮಾಡಬಹುದಾಗಿದೆ. ಇದಕ್ಕಾಗಿ ಅವರು ಪ್ರೊಫೈಲ್‌ ಕ್ರಿಯೇಟ್‌ ಮಾಡಬೇಕು. ಮನೆಯಲ್ಲಿ ವಾಸಿಸುವ ಸಂಬಂಧಿಕರು ಹೊರಗೆ ಹೋದರೆ, ಪ್ರವಾಸಕ್ಕೆ ಹೋಗಲಿ, ಎಲ್ಲಿಗೇ ಹೋಗಲಿ, ಪ್ರೊಫೈಲ್‌ ಟ್ರಾನ್ಸ್‌ಫರ್‌ ಮೂಲಕ ಅವರು ಪಾಸ್‌ವರ್ಡ್‌ ಪಡೆಯಬಹುದಾಗಿದೆ. ಆದರೆ, ಮನೆಯ ಹೊರಗಿನ ಸ್ನೇಹಿತರು ಅಥವಾ ಸಂಬಂಧಿಕರಿಗೆ ಪಾಸ್‌ವರ್ಡ್‌ ಶೇರ್‌ ಮಾಡಲು ಇನ್ನುಮುಂದೆ ಆಗುವುದಿಲ್ಲ.

ಕಳೆದ ಕೆಲ ತಿಂಗಳಿಂದ ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಶೇರಿಂಗ್‌ ಅಂತ್ಯಗೊಳಿಸುವ ಕುರಿತು ವರದಿಗಳು ಪ್ರಕಟವಾಗಿದ್ದವು. ಆದರೆ, ಈ ಕುರಿತು ನೆಟ್‌ಫ್ಲಿಕ್ಸ್‌ ಯಾವುದೇ ಅಧಿಕೃತ ಘೋಷಣೆ ಮಾಡಿರಲಿಲ್ಲ. ಈಗ ಏಕಾಏಕಿ, ಮನೆಯ ಹೊರಗಿನವರಿಗೆ ಪಾಸ್‌ವರ್ಡ್‌ ಶೇರಿಂಗ್‌ ಸೌಲಭ್ಯವನ್ನು ಕಡಿತಗೊಳಿಸಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಹೊಸ ನಿರ್ಧಾರದ ಕುರಿತು ಗ್ರಾಹಕರಿಗೆ ಮೇಲ್‌ ಮಾಡಲಾಗುತ್ತದೆ. ಆ ಮೂಲಕ ಅವರಿಗೆ ಮಾಹಿತಿ ನೀಡಲಾಗುತ್ತದೆ” ಎಂದು ನೆಟ್‌ಫ್ಲಿಕ್ಸ್‌ ತಿಳಿಸಿದೆ.

ಇದನ್ನೂ ಓದಿ: Netflix Subscription : 100 ದೇಶಗಳಲ್ಲಿ ನೆಟ್​ಫ್ಲಿಕ್ಸ್​ ದರ ಶೇಕಡಾ 50 ಇಳಿಕೆ

60 ಲಕ್ಷ ಹೊಸ ಗ್ರಾಹಕರನ್ನು ಪಡೆದ ನೆಟ್‌ಫ್ಲಿಕ್ಸ್‌

ಪಾಸ್‌ವರ್ಡ್‌ ಶೇರಿಂಗ್‌ ಆಪ್ಶನ್‌ ಅಂತ್ಯಗೊಳಿಸುತ್ತಲೇ ನೆಟ್‌ಫ್ಲಿಕ್ಸ್‌ಗೆ ಭಾರತದಲ್ಲಿ 60 ಲಕ್ಷ ನೂತನ ಗ್ರಾಹಕರು ಸಬ್‌ಸ್ಕ್ರೈಬ್‌ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಭಾರತ ಮಾತ್ರವಲ್ಲ, ಇಂಡೋನೇಷ್ಯಾ, ಕೀನ್ಯಾ ಹಾಗೂ ಕ್ರೋವೇಷ್ಯಾದಲ್ಲೂ ಪಾಸ್‌ವರ್ಡ್‌ ಶೇರಿಂಗ್‌ಅನ್ನು ನೆಟ್‌ಫ್ಲಿಕ್ಸ್‌ ಅಂತ್ಯಗೊಳಿಸಿದೆ. ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ 23 ಕೋಟಿ ಜನ ನೆಟ್‌ಫ್ಲಿಕ್ಸ್‌ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Exit mobile version