Site icon Vistara News

NIA Charge sheet: ಉಗ್ರ ಸಂಘಟನೆಗಳಿಗೆ ನೇಮಕಾತಿ; ಕುಖ್ಯಾತ ವಾವೋವಾದಿ ವಿರುದ್ಧ ಚಾರ್ಜ್‌ಶೀಟ್‌

NIA Arrest

ಕೇರಳ: ಕೇರಳದಲ್ಲಿ ಉಗ್ರ ಸಂಘಟನೆಗಳಿಗೆ ಯುವಕರನ್ನು ನೇಮಕಾತಿ ಮಾಡುತ್ತಿದ್ದ ಆರೋಪದಲ್ಲಿ ಕುಖ್ಯಾತ ಮಾವೋವಾದಿ ಸಂಜಯ್‌ ದೀಪಕ್‌ ರಾವ್‌(Sanjay Deepak Rao) ವಿರುದ್ಧ ಎನ್‌ಐಎ(NIA Charge sheet) ಚಾರ್ಜ್‌ ಶೀಟ್‌ ದಾಖಲಿಸಿದೆ. ಸಿಪಿಐ (ಮಾವೋವಾದಿ)ಯ ಪಶ್ಚಿಮ ಘಟ್ಟಗಳ ವಿಶೇಷ ವಲಯ ಸಮಿತಿಯ (ಡಬ್ಲ್ಯುಜಿಎಸ್‌ಝಡ್‌ಸಿ) ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ವಿರುದ್ಧ ಎನ್‌ಐಎ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಐಪಿಸಿ ಮತ್ತು ಯುಎ (ಪಿ) ಕಾಯ್ದೆ ಯುಎಪಿಎಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಎರ್ನಾಕುಲಂನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಎನ್‌ಐಎ ಈ ಚಾರ್ಜ್‌ಶೀಟ್‌ ದಾಖಲಿಸಿದೆ.

ಸಿಪಿಐ (ಮಾವೋವಾದಿ) ಪಶ್ಚಿಮ ಘಟ್ಟದ ​​ವಿಶೇಷ ವಲಯ ಸಮಿತಿಯ (ಡಬ್ಲ್ಯುಜಿಎಸ್‌ಝಡ್‌ಸಿ) ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ಅಲಿಯಾಸ್‌ ವಿಕಾಸ್, ಸಿಪಿಐನ ಮುಂಚೂಣಿ ಸಂಘಟನೆಯಾದ ಕ್ರಾಂತಿಕಾರಿ ಲೇಖಕಿಯರ ಸಂಘದ ಸದಸ್ಯರಾದ ಪಿನಾಕಾ ಪಾಣಿ ಅಲಿಯಾಸ್‌ ಪಾಣಿ ಮತ್ತು ವರಲಕ್ಷ್ಮಿ ಆರೋಪಿಗಳು ಎಂದು ತನಿಖೆಯಿಂದ ತಿಳಿದುಬಂದಿದೆ. ಆಂಧ್ರಪ್ರದೇಶದಲ್ಲಿ (ಮಾವೋವಾದಿ), ವಯನಾಡಿನ ಶ್ರೀಕಾಂತ್ ಮತ್ತು ಆಂಧ್ರಪ್ರದೇಶದ ಆಂಜನೇಯಲು ಅಕಾ ಸುಧಾಕರ್ ಮುಂತಾದವರು ಚೈತನ್ಯ ಅಕಾ ಸೂರ್ಯನನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಪಿಐ (ಮಾವೋವಾದಿ)ಗೆ ಸೇರ್ಪಡೆಗೊಳ್ಳಲು ಪ್ರೇರೇಪಿಸಿದ್ದಾರೆ ಎಂಬುದನ್ನು ಎನ್‌ಐಎ ಹೇಳಿದೆ. ನೇಮಕಾತಿಯ ನಂತರ, ಭಾರತದ ಒಕ್ಕೂಟದ ಭದ್ರತೆ, ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಆತನಿಗೆ ತರಬೇತಿ ನೀಡಲಾಯಿತು.

ಎರಡು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಹತ್ತು ಸ್ಥಳಗಳಲ್ಲಿ ಎನ್‌ಐಎ ರೇಡ್‌ ನಡೆಸಿದ್ದು, ಭಯೋತ್ಪಾದನಾ(Terrorism activities) ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಅರೆಸ್ಟ್‌ ಮಾಡಿದೆ. ತಮಿಳುನಾಡಿನ ಐದು ಜಿಲ್ಲೆಗಳಲ್ಲಿ ಈ ರೇಡ್‌ ನಡೆದಿದ್ದು, ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಹಿಜ್ಬು-ಉತ್‌-ತಹ್ರೀರ್‌ನ ಇಬ್ಬರನ್ನು ಬಂಧಿಸಿದೆ. ಈ ಸಂಘಟನೆಯ ಸ್ಥಾಪಕ ತಾಖಿ ಅಲ್‌ ದಿನ್‌ ಅಲ್‌ ಅಬ್ಬಾನಿ ಬರೆದ ಸಂವಿಧಾನವನ್ನು ಪ್ರಪಂಚಾದ್ಯಂತ ಪಸರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಇನ್ನು ಬಂಧಿತ ಉಗ್ರರನ್ನು ಅಬ್ದುಲ್‌ ರೆಹಮಾನ್‌ ಮತ್ತು ಮುಜಿಬುಲ್‌ ರೆಹಮಾನ್‌ ಅಲಿಯಾಸ್‌ ಮುಜಿಬುಲ್‌ ರೆಹಮಾನ್‌ ಅಲ್ತಾಮ್‌ ಸಾಹೀಬ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಂಜಾವೂರ್‌ ಜಿಲ್ಲೆಯವರಾಗಿದ್ದು, ಇವರಿಬ್ಬರೂ ಯುವಕರನ್ನು ಉಗ್ರ ಸಂಘಟನೆಗೆ ಪ್ರೇರೇಪಿಸಲು ಗುಪ್ತವಾಗಿ ತರಗತಿಗಳನ್ನು ನಡೆಸುತ್ತಿದ್ದಾರೆ. ಭಾರತ ಈಗ ನಾಸ್ತಿಕ ರಾಷ್ಟ್ರವಾಗಿ ಬೆಳೆಯುತ್ತಿದೆ. ದೇಶದಲ್ಲಿ ಹಿಂಸಾತ್ಮಕ ಜಿಹಾದ್‌ ಮೂಲಕ ಇಸ್ಲಾಂ ಮೇಲಿನ ನಂಬಿಕೆಯನ್ನು ಮೂಡಿಸಬೇಕಿದೆ ಎಂಬುದನ್ನು ಯುವಕರಿಗೆ ಬೋಧಿಸುತ್ತಿದ್ದರು ಎಂದು ಎನ್‌ಐಎ ಹೇಳಿದೆ.

ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್, ಸಿಮ್ ಮತ್ತು ಮೆಮೊರಿ ಕಾರ್ಡ್‌ಗಳು ಮತ್ತು ಹಿಜ್ಬ್-ಉತ್-ತಹ್ರೀರ್, ಖಿಲಾಫಾ, ಇಸ್ಲಾಮಿಕ್ ಸ್ಟೇಟ್‌ನ ಸಿದ್ಧಾಂತವನ್ನು ಒಳಗೊಂಡಿರುವ ಪುಸ್ತಕಗಳು ಮತ್ತು ಪ್ರಿಂಟ್‌ಔಟ್‌ಗಳು ಅನೇಕ ವಸ್ತುಗಳನ್ನು ಎನ್‌ಐಎ ವಶಪಡಿಸಿಕೊಂಡಿತ್ತು..

ಮತ್ತೊಂದೆಡೆ ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಹಿಂದು ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA Raid) ವಿವಿಧ ಸ್ಥಳಗಳಲ್ಲಿ ರೇಡ್‌ ನಡೆಸಿದೆ. ಮಕ್ಕಳು ಸೇರಿದಂತೆ ಒಂಬತ್ತು ಮಂದಿಯನ್ನು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸಿತ್ತು.

ಇದನ್ನೂ ಓದಿ:Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

Exit mobile version