Site icon Vistara News

Nimisha Priya: ಕೇರಳದ ನರ್ಸ್‌ ಮರಣದಂಡನೆ ಕಾಯಂ ಮಾಡಿದ ಯೆಮೆನ್‌ ಸುಪ್ರೀಂ ಕೋರ್ಟ್‌

kerala nurse

ಹೊಸದಿಲ್ಲಿ: ಯೆಮೆನ್ ಪ್ರಜೆಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ 2017ರಿಂದ ಯೆಮೆನ್‌ದಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ (Nimisha Priya) ಅವರ ಮರಣದಂಡನೆ (death sentence) ವಿರುದ್ಧದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂ ಕೋರ್ಟ್ (Yemen Supreme Court) ತಿರಸ್ಕರಿಸಿದೆ.

ತಲಾಲ್ ಅಬ್ದೋ ಮಹದಿ ಎಂಬಾತನ ಬಳಿಯಿಂದ ತನ್ನ ಪಾಸ್‌ಪೋರ್ಟ್ ಅನ್ನು ಹಿಂಪಡೆಯುವ ಪ್ರಯತ್ನದಲ್ಲಿ ಆತನಿಗೆ ನಿದ್ರೆ ಬರುವ ಔಷಧವನ್ನು ಚುಚ್ಚುಮದ್ದಿನ ಮೂಲಕ ಪ್ರಿಯಾ ನೀಡಿದ್ದಳು. ಔಷಧದ ಪ್ರಮಾಣ ಹೆಚ್ಚಾಗಿದ್ದರಿಂದ ಆತ ಸತ್ತಿದ್ದ. ಕೊಲೆ ಆರೋಪದಲ್ಲಿ ಪ್ರಿಯಾ ಶಿಕ್ಷೆಗೊಳಗಾಗಿದ್ದಳು.

ಪ್ರಿಯಾ ಅವರ ತಾಯಿ ಯೆಮೆನ್‌ಗೆ ಪ್ರಯಾಣಿಸುವಂತೆ ಮಾಡಿದ ಮನವಿಯ ಕುರಿತು ಒಂದು ವಾರದೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಗುರುವಾರ ಕೇಂದ್ರವನ್ನು ಒತ್ತಾಯಿಸಿದೆ. ಅರಬ್ ರಾಷ್ಟ್ರದಲ್ಲಿ ನಡೆಯುತ್ತಿರುವ ಅಂತರ್ಯುದ್ಧದ ಕಾರಣ 2017ರಿಂದ ಜಾರಿಗೆ ಬಂದಿರುವ ಭಾರತೀಯ ಪ್ರಜೆಗಳಿಗೆ ಪ್ರಯಾಣ ನಿಷೇಧದ ಹೊರತಾಗಿಯೂ ಯೆಮೆನ್‌ಗೆ ಪ್ರಯಾಣಿಸಲು ಅನುಮತಿ ಕೋರಿ ಪ್ರಿಯಾಳ ತಾಯಿ ಈ ವರ್ಷದ ಆರಂಭದಲ್ಲಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.

ಕೇರಳದ ಈ ನರ್ಸ್‌ನ ತಾಯಿ ತನ್ನ ಮಗಳ ಬಿಡುಗಡೆಗಾಗಿ ಮಹದಿಯ ಕುಟುಂಬದೊಂದಿಗೆ ಪರಿಹಾರದ ಕುರಿತು ಮಾತುಕತೆ ನಡೆಸಲು ಯೆಮೆನ್‌ಗೆ ಪ್ರಯಾಣಿಸಲು ಬಯಸಿದ್ದಾರೆ. ವಕೀಲರಾದ ಸುಭಾಷ್ ಚಂದರನ್ ಕೆಆರ್ ಇವರ ಪದ ವಾದ ಮಂಡಿಸಿದ್ದಾರೆ. ತನ್ನ ಮಗಳನ್ನು ಉಳಿಸುವ ಏಕೈಕ ಮಾರ್ಗವೆಂದರೆ ಸಂತ್ರಸ್ತರ ಕುಟುಂಬದೊಂದಿಗೆ ನೇರ ಮಾತುಕತೆ ನಡೆಸುವುದಾಗಿದೆ, ಈ ಪ್ರಕ್ರಿಯೆಗೆ ಯೆಮೆನ್‌ನಲ್ಲಿ ತನ್ನ ಉಪಸ್ಥಿತಿ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಭಾರತೀಯ ಪ್ರಜೆಗಳಿಗೆ ವಿಧಿಸಲಾಗಿರುವ ಪ್ರಯಾಣ ನಿಷೇಧವು ತಡೆಗೋಡೆಯಾಗಿ ನಿಂತಿದೆ.

ಗುರುವಾರ ಕೇಂದ್ರದ ವಕೀಲರು ಹೈಕೋರ್ಟ್‌ಗೆ ನೀಡಿದ ಮಾಹಿತಿಯ ಪ್ರಕಾರ ನಿರ್ದಿಷ್ಟ ಕಾರಣಗಳಿಗೆ ಮತ್ತು ಸೀಮಿತ ಅವಧಿಗೆ ಯೆಮೆನ್‌ಗೆ ಪ್ರಯಾಣ ನಿಷೇಧವನ್ನು ಸಡಿಲಿಸಬಹುದು, ಭಾರತೀಯ ಪ್ರಜೆಗಳಿಗೆ ಆ ದೇಶಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡಬಹುದು. “ಪ್ರಸ್ತುತ ಅರ್ಜಿಯನ್ನು ತುರ್ತು ಎಂದು ಪರಿಗಣಿಸಲಿ. ಇಂದಿನಿಂದ ಒಂದು ವಾರದೊಳಗೆ ಈ ಕುರಿತು ನಿರ್ಧರಿಸಿ” ಎಂದು ನ್ಯಾಯಮೂರ್ತಿ ಸುಬ್ರಮಣ್ಯ ಪ್ರಸಾದ್ ಆದೇಶಿಸಿದರು.

“ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್” ಪ್ರಿಯಾಳ ಬಿಡುಗಡೆಗಾಗಿ 2022ರಲ್ಲಿ ಹೈಕೋರ್ಟನ್ನು ಸಂಪರ್ಕಿಸಿತ್ತು. “ರಾಜತಾಂತ್ರಿಕ ಮಧ್ಯಸ್ಥಿಕೆ ಮತ್ತು ಸಂತ್ರಸ್ತೆಯ ಕುಟುಂಬದೊಂದಿಗೆ ಮಾತುಕತೆ ನಡೆಸಲು ಅನುಕೂಲವಾಗುವಂತೆ ಕೇಂದ್ರಕ್ಕೆ ಮನವಿ ಮಾಡಿತು. ಕಾಲಮಿತಿಯಲ್ಲಿ ಆ ದೇಶದ ಕಾನೂನಿಗೆ ಅನುಸಾರವಾಗಿ ʼರಕ್ತಹಣʼ ಅಥವಾ ಪರಿಹಾರವನ್ನು ಪಾವತಿಸುವ ಮೂಲಕ ಇದನ್ನು ಮಾಡಬಹುದಾಗಿದೆ.

ಇದನ್ನೂ ಓದಿ: Stampede In Yemen: ಯೆಮೆನ್​ ರಾಜಧಾನಿ ಸನಾದಲ್ಲಿ ಕಾಲ್ತುಳಿತ; ನೆರವು ಪಡೆಯಲು ಬಂದ 85ಕ್ಕೂ ಹೆಚ್ಚು ಮಂದಿ ಸಾವು

Exit mobile version