Site icon Vistara News

Bihar politics | ನಿತೀಶ್‌ ಸಿಎಂ, ತೇಜಸ್ವಿ ಡಿಸಿಎಂ ಆಗಿ ಇಂದು 2 ಗಂಟೆಗೆ ಪ್ರಮಾಣ

nitish kumar

ಪಟನಾ: ಇಂದು ಮಧ್ಯಾಹ್ನ 2 ಗಂಟೆಗೆ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಅವರು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತೇಜಸ್ವಿ ಯಾದವ್‌ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಮಾಣ ವಚನ ಕಾರ್ಯಕ್ರಮ ಅತ್ಯಂತ ಸರಳವಾಗಿ ರಾಜಭವನದಲ್ಲಿ ನಡೆಯಲಿದೆ. ಹೆಚ್ಚಿನ ಸಚಿವರು ಮುಂದಿನ ಹಂತದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದು ಜೆಡಿಯು- ಆರ್‌ಜೆಡಿ ಮೂಲಗಳು ತಿಳಿಸಿವೆ.

ಎರಡು ದಿನ ಹಿಂದೆ ಬಿಜೆಪಿಯನ್ನು ತ್ಯಜಿಸುವ ಸೂಚನೆ ನೀಡಿದ್ದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಮಂಗಳವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಬುಧವಾರ, ಎಂಟನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ರಾಜಕೀಯ ಪೋಲ್‌ವಾಲ್ಟಿಂಗ್‌ಗೆ ಹೆಸರಾಗಿರುವ ನಿತೀಶ್‌, ಈ ಬಾರಿ ಏಳು ಪಕ್ಷಗಳ ಒಕ್ಕೂಟವನ್ನು ನಿಭಾಳಿಸಿಕೊಂಡು ಸರ್ಕಾರ ನಿರ್ವಹಿಸಬೇಕಿದೆ.‌

ಇದನ್ನೂ ಓದಿ: ಗೃಹ ಇಲಾಖೆ ಬಯಸಿದ ತೇಜಸ್ವಿ, ಸ್ಪೀಕರ್‌ ಹುದ್ದೆ ಕೂಡ ಆರ್‌ಜೆಡಿಗೆ ಬೇಕಂತೆ

ಮಂಗಳವಾರ 4 ಗಂಟೆಗೆ ರಾಜ್ಯಪಾಲ ಫಗು ಚೌಹಾಣ್‌ ಅವರಿಗೆ ರಾಜೀನಾಮೆ ನೀಡಿದ್ದ ನಿತೀಶ್‌, ನಂತರ ʼʼಬಿಜೆಪಿ ಸಖ್ಯ ತೊರೆಯುವ ಬಗ್ಗೆ ಜೆಡಿಯುವಿನಲ್ಲಿ ಒಮ್ಮತವಿದೆʼ ಎಂದಿದ್ದರು. ನಂತರ ರಾಬ್ರಿ ದೇವಿ ಅವರ ಮನೆಗೆ ತೆರಳಿ ತೇಜಸ್ವಿ ಯಾದವ್‌ ಅವರನ್ನು ಭೇಟಿಯಾಗಿದ್ದರು. ನಂತರ ಇಬ್ಬರೂ ನಾಯಕರು ರಾಜಭವನಕ್ಕೆ ಆಗಮಿಸಿ ಇತರ ಪಕ್ಷಗಳ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದರು.

”ನಿತೀಶ್‌ ಕುಮಾರ್‌ ಅವರು ಜನತೆಯ ತೀರ್ಪನ್ನು ಅವಮಾನಿಸುತ್ತಿದ್ದಾರೆʼʼ ಎಂದು ಬಿಜೆಪಿ ಟೀಕಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ 75, ಬಿಜೆಪಿ 74, ಜೆಡಿಯು 43 ಹಾಗೂ ಕಾಂಗ್ರೆಸ್‌ 19 ಸ್ಥಾನ ಪಡೆದಿದ್ದವು.

ಇದನ್ನೂ ಓದಿ: Bihar Politics | ನೀವು ಮೋದಿ ಹೆಸರಿನಲ್ಲಿ ಗೆದ್ದಿದ್ದೀರಿ ಎಂಬುದನ್ನು ಮರೆಯಬೇಡಿ; ನಿತೀಶ್‌ಗೆ ಟಾಂಗ್‌ ನೀಡಿದ ಬಿಜೆಪಿ

Exit mobile version