ಬೆಂಗಳೂರು: ನಾಯಿ ಮತ್ತು ಮನುಷ್ಯನ ಸಂಬಂಧದ ಬಗ್ಗೆ ಅದೆಷ್ಟೋ ಸಿನಿಮಾಗಳು ಬಂದಿವೆ. ಇತ್ತೀಚೆಗೆ ತೆರೆ ಕಂಡ ರಕ್ಷಿತ್ ಶೆಟ್ಟಿ ಅಭಿನಯದ ʻಚಾರ್ಲಿ ೭೭೭ʼ ಎಲ್ಲ ಶ್ವಾನಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಪರಮ ನಿಷ್ಠೆ ಮತ್ತು ಅಸಾಮಾನ್ಯ ಪ್ರೀತಿಯನ್ನು ತೋರಿಸುವ ನಾಯಿಗಳು ಮನುಷ್ಯರೊಂದಿಗೆ ಮಾತ್ರವಲ್ಲ, ಪರಸ್ಪರವೂ ಅಷ್ಟೇ ಸ್ನೇಹವನ್ನು, ವಿಶ್ವಾಸವನ್ನು ಪ್ರದರ್ಶಿಸುತ್ತವೆ. ಒಂದು ಓಣಿಯಲ್ಲಿ ಒಂದು ನಾಯಿಗಳ ಗುಂಪು ಇದ್ದರೆ ಅವುಗಳ ರಕ್ಷಣಾ ವ್ಯವಸ್ಥೆ ಅದ್ಭುತವಾಗಿರುತ್ತದೆ. ಒಂದು ನಾಯಿಗೆ ಏನಾದರೂ ತೊಂದರೆಯಾದರೆ ಇಡೀ ಗುಂಪೇ ರಕ್ಷಣೆಗೆ ನಿಲ್ಲುತ್ತದೆ.
ಇಂಥದೊಂದು ಪ್ರೀತಿಯ ಕೋಟೆ ಕಟ್ಟುವ ನಾಯಿಗಳ ಅಪೂರ್ವ ಸ್ನೇಹದ ಸಾವಿರ ಕಥೆ ಹೇಳಬಲ್ಲ ಚಂದದ ಚಿತ್ರವೊಂದು ಇಲ್ಲಿದೆ. ಎರಡು ನಾಯಿಗಳು ಪರಸ್ಪರ ತಬ್ಬಿಕೊಂಡಿರುವ ಫೋಟೊ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗಿದೆ. ಅದರಲ್ಲಿ ವಿಶೇಷವೇನು? ಎಂದು ನೀವು ಕೇಳಬಹುದು. ಹಾಗಿದ್ದರೆ ಇದನ್ನೂ ನೀವು ಓದಲೇಬೇಕು.
ಈ ಚಿತ್ರ ನೋಡಿದ ಮೇಲೆ ನಿಮ್ಮ ಮುಖದಲ್ಲಿ ನಗು ಹಾಗೂ ಒಂದು ರೀತಿಯ ಸಮಾಧಾನ ಭಾವ ಮೂಡುವುದಂತೂ ನಿಜ. ಈ ಪೊಸ್ಟ್ ಅನ್ನು ಪಪ್ಪೀಸ್ ಎಂಬ ಪುಟವು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಚಿತ್ರದಲ್ಲಿ ಲ್ಯಾಬ್ರಡಾರ್ ಮತ್ತು ಹಸ್ಕಿ ಜಾತಿಯ ಎರಡು ನಾಯಿಗಳು ಪರಸ್ಪರ ತಬ್ಬಿಕೊಂಡಿರುವುದನ್ನು ಕಾಣಬಹುದು. ತಮ್ಮ ನಡುವೆ ಇದ್ದ ಗೇಟಿನ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಒಬ್ಬರನ್ನೊಬ್ಬರು ತಬ್ಬಿ ಸಾಂತ್ವನ ಹೇಳುತ್ತಿರುವಂತಿದೆ ಈ ಚಿತ್ರ.
ಈ ಚಿತ್ರಕ್ಕೆ ಟ್ವಿಟರ್ ನಲ್ಲಿ ಸಾವಿರಾರು ಲೈಕ್ಸ್ ಬಂದಿವೆ.
ಫೋಟೊದಲ್ಲಿರುವ ನಾಯಿಗಳ ಸ್ನೇಹವನ್ನು ನೋಡಿ ಅನೇಕ ಜನ ಕಮೆಂಟ್ ಮಾಡಿದ್ದಾರೆ. ನಾಯಿಗಳ ಮೇಲಿನ ತಮ್ಮ ಪ್ರೀತಿಯನ್ನು ಕಮೆಂಟ್ ಮೂಲಕ ಸುರಿಸಿದ್ದಾರೆ.
ನಮ್ಮನ್ನು ದೂರವಿಡುವಷ್ಟು ಎತ್ತರದ ಗೋಡೆ ಎಲ್ಲೂ ಇಲ್ಲ, ಆತ್ಮೀಯ ಸ್ನೇಹಿತ” ಎಂದು ಶೀರ್ಷಿಕೆಯನ್ನು ನೀಡಲಾಗಿದೆ.
“ಅಯ್ಯೋ. ನಾನು ಅವುಗಳಲ್ಲಿ ಒಬ್ಬನಾಗಿದ್ದರೆ ಅವುಗಳನ್ನು ತಬ್ಬಿಕೊಳ್ಳುತ್ತಿದ್ದೆ. ಅಂತ ಬರೆದಿದ್ದಾರೆ. ಮತ್ತೊಬ್ಬ ಟ್ವಿಟ್ ಬಳಕೆದಾರರು ಹೀಗೆ ಬರೆದಿದ್ದಾರೆ. ಈ ಅನುಬಂಧ ಹೀಗೆ ಇರಲಿ. ಯಾರ ದೃಷ್ಟಿ ತಾಗದಿರಲಿ, ಕೆಲವೊಮ್ಮೆ ನೀವೇ ನಮಗೆ ಪಾಠ ಕಲಿಸುವ ಗುರುಗಳು ಸೋ ಕ್ಯೂಟ್ʼʼ ಎಂದು ಒಬ್ಬ ನೆಟ್ಟಿಗರು ಹೇಳಿದ್ದಾರೆ.
ಒಬ್ಬರನ್ನು ಬೆಳೆಯುವುದು ಕಂಡರೆ ಸಹಿಸದ, ಆಸ್ತಿ-ಪಾಸ್ತಿಗಾಗಿ ಕಿತ್ತಾಡುವ ಆಧುನಿಕ ಕಾಲದಲ್ಲಿ ಮನುಷ್ಯರು ಸಹಬಾಳ್ವೆಯ ಪಾಠವನ್ನು ಈ ನಾಯಿಗಳನ್ನು ನೋಡಿ ಕಲಿಯುಬೇಕಿದೆ. ಇರುವಷ್ಟು ದಿನ ಪ್ರೀತಿಯನ್ನು ಉಣಬಡಿಸಬೇಕು ಎಂಬ ಸಂದೇಶವನ್ನು ಸಾರಿದಂತಿದೆ ಈ ಚಿತ್ರ.
ಇದನ್ನೂ ಓದಿ: ನಾಯಿಗಳ ʼಸೌಂದರ್ಯ ಸ್ಪರ್ಧೆʼಯಲ್ಲಿ ಗೆದ್ದ ಮಿ. ಹ್ಯಾಪಿ ಫೇಸ್ ಹೇಗಿದೆ ನೋಡಿ!