Site icon Vistara News

ಕಚೇರಿಗೆ ಬಂದು ಕೆಲಸ ಮಾಡದಿದ್ರೆ ನೌಕರರ ಬಡ್ತಿ ಕಟ್!: ಅಮೆಜಾನ್ ಘೋಷಣೆ

No promotion for who don't want to come office Says amazon company

ನವದೆಹಲಿ: ಅಮೆಜಾನ್ (Amazon Company) ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದ್ದು, ಕಚೇರಿಗೆ ಆಗಮಿಸಲು ಇಚ್ಛಿಸದ (Work from Office) ನೌಕರರ ಬಡ್ತಿಯನ್ನು (No Promotions) ತಡೆ ಹಾಕುವುದಾಗಿ ಎಚ್ಚರಿಸಿದೆ. ಯಾರು ಕಚೇರಿಯಿಂದ ಕೆಲಸ ಮಾಡಲು ಆಸಕ್ತಿ ತೋರಿಸುವುದಿಲ್ಲವೋ ಅಂಥವರ ಬಡ್ತಿ ಕುರಿತು ಉಪಾಧ್ಯಕ್ಷರ (Vice President) ಒಪ್ಪಿಗೆಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದೆ. ಮಾಧ್ಯಮಗಳ ವರದಿಯ ಪ್ರಕಾರ, ಅಮೆಜಾನ್ ಆಂತರಿಕ ಸಂವಹನದ ಮೂಲಕ ಉದ್ಯೋಗಿಗಳಿಗೆ, “ಮ್ಯಾನೇಜರ್‌ಗಳು ಬಡ್ತಿ ಪ್ರಕ್ರಿಯೆಯನ್ನು ಶುರು ಮಾಡಿದ್ದಾರೆ. ನಿಯಮಿತ ಸಂಭಾಷಣೆಗಳು ಮತ್ತು ಸ್ಟ್ರೆಚ್ ಅಸೈನ್‌ಮೆಂಟ್‌ಗಳ ಮೂಲಕ ನಿಮ್ಮ ಬೆಳವಣಿಗೆಯನ್ನು ಬೆಂಬಲಿಸುವುದು ಮತ್ತು ಬಡ್ತಿಗಾಗಿ ಅಗತ್ಯವಿರುವ ಎಲ್ಲಾ ಇನ್‌ಪುಟ್‌ಗಳನ್ನು ಪೂರ್ಣಗೊಳಿಸುವುದು ಅವರ ಜವಾಬ್ದಾರಿಯಾಗಿದೆ” ಎಂದು ತಿಳಿಸಿದೆ.

ನೀವು ವಾರದಲ್ಲಿ 3+ ದಿನಗಳು ಕಚೇರಿಯಿಂದಲೇ ಅಗತ್ಯವಿದ್ದರೆ ಮತ್ತು ಅದನ್ನು ನೀವು ಪಾಲಿಸದೇ ಹೋಗಿದ್ದರೆ, ಈ ಕುರಿತು ನಿಮ್ಮ ಮ್ಯಾನೇಜರ್‌ಗೆ ತಿಳಿಸಲಾಗುವುದು ಮತ್ತು ಇದಕ್ಕಾಗಿ ಉಪಾದ್ಯಕ್ಷರ ಅನುಮೋದನೆಯ ಅಗತ್ಯವಿರುತ್ತದೆ ಎಂದು ಕಂಪನಿಯು ತಿಳಿಸಿದೆ.

ಈ ವರ್ಷದ ಫೆಬ್ರವರಿಯಲ್ಲಿ ಅಮೆಜಾನ್ ಮನೆಯಿಂದ ಕೆಲಸ ಮಾಡುವ ನೀತಿಯನ್ನು ಪ್ರಕಟಿಸಿತ್ತು. ಅದರ ಪ್ರಕಾರ, ಮೇ ತಿಂಗಳಿನಿಂದ ಜಾರಿಗೆ ಬರುವಂತೆ ವಾರದಲ್ಲಿ ಕನಿಷ್ಠ ಮೂರು ದಿನಗಳಾದರೂ ಉದ್ಯೋಗಿಗಳು ಕಚೇರಿಗೆ ಆಗಮಿಸಿ ಕೆಲಸ ಮಾಡಬೇಕಿತ್ತು. ಆದರೆ, 30 ಸಾವಿರ ಅಮೆಜಾನ್ ಉದ್ಯೋಗಿಗಳು ಕಂಪನಿಯು ವರ್ಕ್ ಫ್ರಂ ಆಫೀಸ್ ಪಾಲಿಸಿಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡಿದ್ದರು. ಈ ನೀತಿಯ ವಿರುದ್ಧ ಅಮೆರಿಕದಲ್ಲಿ ಅಮೆಜಾನ್ ಉದ್ಯೋಗಿಗಳು ಪ್ರತಿಭಟನೆ ಕೂಡ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ಆಗಸ್ಟ್ ತಿಂಗಳಲ್ಲಿ ಅಮೆಜಾನ್ ಸಿಇಒ ಆಂಡಿ ಜಾಸ್ಸೀ ಅವರು, ಉದ್ಯೋಗಿಗಳು ಒಪ್ಪಿಕೊಳ್ಳುವ ಮತ್ತು ಬದ್ಧತೆಯ ಸಮಯವನ್ನು ಮೀರಿದೆ. ಒಂದು ವೇಳೆ ನೀವು ಒಪ್ಪದಿದ್ದರೆ ಹಾಗೂ ಬದ್ಧತೆಯನ್ನು ಪ್ರದರ್ಶಿಸದೇ ಇದ್ದರೆ ಬಹುಶಃ ಅಮೆಜಾನ್‌ನಲ್ಲಿ ನಿಮಗಾಗಿ ಕೆಲಸ ಮಾಡಲು ಅವಕಾಶವಿರುವುದಿಲ್ಲ. ಯಾಕೆಂದರೆ ನಾವು ವಾರಕ್ಕೆ ಕನಿಷ್ಠ ಮೂರು ದಿನ ಕಚೇರಿ ನೀತಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Olympus AI: ಚಾಟ್‌ಜಿಪಿಟಿಗೆ ಠಕ್ಕರ್ ನೀಡಲು ರೆಡಿಯಾಗುತ್ತಿದೆ ಅಮೆಜಾನ್‌ನ ‘ಒಲಿಂಪಸ್’!

Exit mobile version