Site icon Vistara News

OLA, Uber & ಇತರೆ ಕ್ಯಾಬ್ ಸಂಸ್ಥೆಗಳಿಗೆ ನೋಟಿಸ್

Ola Uber Cabs

Ola Uber Cabs

ನವದೆಹಲಿ: ಓಲಾ, ಉಬರ್‌, ಮೆರು ಹಾಗೂ ಇತರೆ ಕ್ಯಾಬ್‌ ಸಂಸ್ಥೆಗಳಿಗೆ ಗ್ರಾಹಕರ ದೂರುಗಳಿಗೆ ಪ್ರತಿಕ್ರಿಸುವಂತೆ ಸರಕಾರ ಸೂಚನೆ ನೀಡಿದೆ. ಕ್ಯಾಬ್‌ನಲ್ಲಿ ಪ್ರಯಾಣಿಸುವ ದರವನ್ನು ಹೆಚ್ಚಳ ಮಾಡಿದ್ದ ಕಾರಣದಿಂದ ಸಾರ್ವಜನಿಕರು ಕ್ಯಾಬ್‌ ಸಂಸ್ಥೆಗಳ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡ ಗ್ರಾಹಕ ವ್ಯವಹಾರಗಳ ಸಚಿವಾಲಯ ಎಲ್ಲಾ ಕ್ಯಾಬ್‌ ಸಂಸ್ಥೆಗಳಿಗೂ ಒಂದು ಪ್ರಮಾಣಿತ ಕಾರ್ಯಾಚರಣೆಯ ವಿಧಾನವನ್ನು ಹೊರಡಿಸಲಿದೆ ಎಂದು ತಿಳಿಸಲಾಗಿದೆ.

ಗ್ರಾಹಕ ವ್ಯವಹಾರಗಳ ಸಚಿವಾಲಯ ಎಲ್ಲಾ ಕ್ಯಾಬ್‌ ಸಂಸ್ಥೆಗಳಿಗೆ ಚಾಲಕರಿಗೆ ಸೂಕ್ತ ವೇತನ ನೀಡುವಂತೆ ಹಾಗೂ ಗ್ರಾಹಕರಿಗೆ ಪ್ರಯಾನ ದರವನ್ನು ದುಬಾರಿಗೊಳಿಸದಂತೆ ಸೂಚನೆ ನೀಡಿದೆ.

ಇದನ್ನೂ ಓದಿ: OLA EV ಅಗ್ನಿ ದುರಂತ; 1,441 ವಾಹನಗಳ ಹಿಂಪಡೆತ

ಈ ಹಿಂದೆ ಕ್ಯಾಬ್‌ ಸಂಸ್ಥೆಗಳಲ್ಲಿ ಪ್ರಮುಖವಾದ ಒಲಾ ಹಾಗೂ ಉಬರ್‌ ಬಗ್ಗೆ ಅನೇಕ ಗ್ರಹಕರಿಂದ ದೂರು ದಾಖಲಾಗಿತ್ತು. ಇದ್ದಕ್ಕಿದ್ದಂತೆ ಕ್ಯಾಬ್ ದರ ಮುಗಿಲುಮುಟ್ಟಿದೆ. ಪ್ರಯಾಣಿಕರು ಗಾಡಿಯಲ್ಲಿ ಎ.ಸಿ. ಹಾಕಲು ಕೇಳಿದರೆ ಚಾಲಕರು ಪೆಟ್ರೋಲ್‌ ದರ ದುಬಾರಿಯಾಗಿರುವ ಕಾರಣ ಕೊಟ್ಟು ಎ.ಸಿ. ಹಾಕುತ್ತಿರಲಿಲ್ಲ. ಈ ದೂರುಗಳ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ಬಗ್ಗೆ ಚರ್ಚಿಸಲು ಒಂದು ಸಭೆಯನ್ನು ಕರೆದಿತ್ತು.

ಇದೇ ವೇಳೆ ಮಾತನಾಡಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ʼಕ್ಯಾಬ್‌ ಸಂಸ್ಥೆಯ ಮಾಲೀಕರಿಗೆ ಕೂಡಲೇ ಗ್ರಾಹಕರ ದೂರುಗಳಿಗೆ ಪ್ರತಿಕ್ರಿಯಿಸಬೇಕು ಹಾಗೂ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಬ್ಗಗೆ ಕ್ಯಾಬ್‌ ಸಂಸ್ಥೆಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಸಂಸ್ಥೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದುʼ ಎಂದು ತಿಳಿಸಿದರು.

ಕ್ಯಾಬ್‌ ಬುಕ್‌ ಮಾಡಿ ಗ್ರಾಹಕರು ಕಾಯುತ್ತಿರುವಾಗ, ಕ್ಯಾಬ್‌ ಚಾಲಕರು ಇದ್ದಕ್ಕಿದ್ದಂತೆಯೇ ಕ್ಯಾನಸ್ಲ್‌ ಮಾಡುತ್ತಿದ್ದರು. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ನಡುವೆ ಪ್ರಯಾಣ ಕ್ಯಾನ್ಸಲ್‌ ಮಾಡುವ ದರ ಕೂಡ ಅತ್ಯಂತ ದುಬಾರಿ ಆಗಿದೆ ಎಂದು ಮತ್ತೊಂದು ಪ್ರಮುಖ ದೂರು ದಾಖಲಾಗಿದ್ದು. ಸುಅಮರು 45 ಆಪ್‌ಗಳಲ್ಲಿ ಒಂದು ಪ್ರಯಾಣ ಕ್ಯಾನಸ್ಲ್‌ ಮಾಡಿದರೆ ಸುಮಾರು ಒಂದೂವರೆ ಪಟ್ಟರಷ್ಟು ಹೆಚ್ಚಿನ ಮೊತ್ತವನ್ನು ನೀಡಬೇಕಿತ್ತು.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಒಂದು ಪ್ರಮಾಣಿತ ಕಾರ್ಯಾಚರಣೆಯ ವಿಧಾನವನ್ನು ಜಾರಿಗೊಳಿಸುವುದಾಗಿ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ತಿಳಿಸಿದರು.

https://vistaranews.com/2022/05/10/electric-vehicle-%e0%b2%87%e0%b2%b5%e0%b2%bf%e0%b2%97%e0%b2%b3%e0%b2%bf%e0%b2%97%e0%b3%86-%e0%b2%ac%e0%b3%8d%e0%b2%af%e0%b2%be%e0%b2%9f%e0%b2%b0%e0%b2%bf-%e0%b2%86%e0%b2%ae%e0%b2%a6%e0%b3%81/
Exit mobile version