Site icon Vistara News

G20 Summit | 2 ವರ್ಷದ ಬಳಿಕ ಚೀನಾ ಅಧ್ಯಕ್ಷ ಜಿನ್ ಪಿಂಗ್- ಪ್ರಧಾನಿ ಮೋದಿ ಮಾತುಕತೆ!

G20 Summit

ಬಾಲಿ: ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗದಲ್ಲಿ (G20 Summit) ಮಂಗಳವಾರ ರಾತ್ರಿ ಆಯೋಜಿಸಲಾಗಿದ್ದ ಔತಣಕೂಟದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು. ಚೀನಾ-ಭಾರತ ಮಧ್ಯೆ 2020ರಲ್ಲಿ ನಡೆದ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಉಭಯ ನಾಯಕರು ಇದೇ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಇಂಡೋನೇಷ್ಯಾ ಅಧ್ಯಕ್ಷರು ಜಿ20 ರಾಷ್ಟ್ರಗಳ ಮುಖ್ಯಸ್ಥರಿಗೆ ಈ ಔತಣಕೂಟವನ್ನು ಆಯೋಜಿಸಿದ್ದರು.

ಉಜ್ಬೇಕಿಸ್ತಾನದ ಸಮರಕಂಡದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘ(ಎಸ್‌ಸಿಒ) ವಾರ್ಷಿಕ ಸಮಾವೇಶದಲ್ಲಿ ಉಭಯ ನಾಯಕರು ಪರಸ್ಪರ ಎದುರಾಗಿದ್ದರು. ಆದರೆ, ಯಾವುದೇ ಮಾತುಕತೆಯಾಗಲೀ, ಕೈಕುಲುಕುವುದಾಗಲೇ ನಡೆದಿರಲಿಲ್ಲ. ಈಗ ಜಿ20 ಶೃಂಗದಲ್ಲಿ ಉಭಯ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದಾರೆ.

ಜಿ20 ಶೃಂಗದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿಯಾಗಿರುವ ಭಾರತೀಯ ಮೂಲದ ರಿಷಿ ಸುನಕ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಮಂಗಳವಾರ ಬೆಳಗ್ಗೆ ಜಿ20 ಉದ್ದೇಶಿಸಿ ಮಾತನಾಡಿದ ಅವರು ಉಕ್ರೇನ್ ಯುದ್ಧ ಅಂತ್ಯಕ್ಕೆ ಕರೆ ನೀಡಿದರು.

ಇದನ್ನೂ ಓದಿ | G20 Summit | ಜಿ20 ಸಭೆ ಹಿನ್ನೆಲೆ ಇಂಡೋನೇಷ್ಯಾ ತಲುಪಿದ ಮೋದಿ, ಅದ್ಧೂರಿ ಸ್ವಾಗತ ಹೇಗಿತ್ತು ನೋಡಿ

Exit mobile version