ಲಾಸ್ ಏಂಜಲೀಸ್, ಅಮೆರಿಕ: ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ರಾಮ ಚರಣ್ ಮತ್ತು ಜೂ. ಎನ್‌ಟಿಆರ್ ಚಿತ್ರವು ಇತಿಹಾಸವನ್ನು ಸೃಷ್ಟಿಸಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಸಂಪೂರ್ಣವಾದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಆರ್‌ಆರ್‌ಆರ್(RRR) ಚಿತ್ರವು ಪಾತ್ರವಾಗಿದೆ. ಬೆಸ್ಟ್ ಡ್ಯಾಕುಮೆಂಟರಿ ಶಾರ್ಟ್ ಫಿಲಮ್ ಕೆಟಗರಿಯಲ್ಲಿ ದಿ ಎಲಿಫೆಂಟ್ ವಿಸ್ಪರ್ಸ್(the elephant whisperers) ಆಸ್ಕರ್ ಗೆದ್ದಿದೆ.
ಬೆಸ್ಟ್ ಓರಿಜಿನಲ್ ಸ್ಕ್ರೀನ್ ಪ್ಲೇ ಕೆಟಗರಿಯಲ್ಲಿ EVERYTHING EVERYWHERE ALL AT ONCE ಚಿತ್ರದ ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್(Daniel Kwan & Daniel Scheinert) ಅವರು ಆಸ್ಕರ್ ಗೆದ್ದುಕೊಂಡಿದ್ದಾರೆ.
ಡಾಲ್ಬಿ ಥಿಯೇಟರ್‌ನಲ್ಲಿ ಪಾಪ್ ಸಿಂಗರ್ ರಿಹನ್ನಾ ಅವರಿಂದ ಹಾಡು.
ಅವತಾರ್ 2ಕ್ಕೆ ಮೊದಲನೇ ಆಸ್ಕರ್ ಪ್ರಶಸ್ತಿ
ಬೆಸ್ಟ್ ವಿಷುವಲ್ ಎಫೆಕ್ಟ್ಸ್ ಕೆಟಗರಿಯಲ್ಲಿ ಆಸ್ಕರ್ ಗೆದ್ದ AVATAR: THE WAY OF WATER ಸಿನಿಮಾ. ಜೇಮ್ಸ್ ಕ್ಯಾಮೆರೂನ್ ಈ ಸಿನಿಮಾದ ನಿರ್ದೇಶಕರು. ಜೋ ಲೆಟ್ಟರೀ, ರಿಚರ್ಡ್ ಬನೆಹಾಮ್, ಎರಿಕ್ ಸೈಂಡಾನ್, ಡೆನಿಯರ್ ಬ್ಯಾರೆಟ್ ಅವರು ಆಸ್ಕರಿ ಪ್ರಶಸ್ತಿ ಗೆದ್ದಿದ್ದಾರೆ.
ಬೆಸ್ಟ್ ಓರಿಜಿನಲ್ ಸ್ಕೋರ್ ಕೆಟಗರಿಯಲ್ಲಿ
ALL QUIET ON THE WESTERN FRONT ಚಿತ್ರದ ಸಂಗಿತ ನಿರ್ದೇಶಕ ವೋಲ್ಕರ್ ಬೆಟರ್ಲ್ಮನ್( Volker Bertelmann ) ಅವರು ಗೆದ್ದುಕೊಂಡಿದ್ದಾರೆ.
ಬೆಸ್ಟ್ ಡಾಕ್ಯುಮೆಂಟರ್ ಶಾರ್ಟ್ ಫಿಲ್ಮ್ ಕೆಟಗರಿಯಲ್ಲಿ ಎಲಿಫೆಂಟ್ ವಿಸ್ಪರ್ಸ್ ಪ್ರಶಸ್ತಿ ಗೆದ್ದುಕೊಂಡಿದೆ.
THE ELEPHANT WHISPERERS ಚಿತ್ರವನ್ನು Kartiki Gonsalves and Guneet Monga ಅವರು ನಿರ್ಮಿಸಿದ್ದಾರೆ.