ಲಾಸ್ ಏಂಜಲೀಸ್, ಅಮೆರಿಕ: ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ರಾಮ ಚರಣ್ ಮತ್ತು ಜೂ. ಎನ್‌ಟಿಆರ್ ಚಿತ್ರವು ಇತಿಹಾಸವನ್ನು ಸೃಷ್ಟಿಸಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಸಂಪೂರ್ಣವಾದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಆರ್‌ಆರ್‌ಆರ್(RRR) ಚಿತ್ರವು ಪಾತ್ರವಾಗಿದೆ. ಬೆಸ್ಟ್ ಡ್ಯಾಕುಮೆಂಟರಿ ಶಾರ್ಟ್ ಫಿಲಮ್ ಕೆಟಗರಿಯಲ್ಲಿ ದಿ ಎಲಿಫೆಂಟ್ ವಿಸ್ಪರ್ಸ್(the elephant whisperers) ಆಸ್ಕರ್ ಗೆದ್ದಿದೆ.
ಬೆಸ್ಟ್ ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ್ ಕೆಟಗರಿಯಲ್ಲಿ ಜರ್ಮನಿಯ
ALL QUIET ON THE WESTERN FRON ಚಿತ್ರವು ಆಸ್ಕರ್ ಗೆದ್ದಿದೆ.ಕಾಸ್ಟೂಮ್ ಡಿಸೈನ್ ಕೆಟಗರಿಯಲ್ಲಿ ರುತ್ ಕಾರ್ಟರ್ ( Ruth Carter ) ಅವರು ಆಸ್ಕರ್ ಗೆದ್ದಿದ್ದಾರೆ.
BLACK PANTHER: WAKANDA FOREVER ಚಿತ್ರಕ್ಕಾಗಿ ಈ ಪ್ರಶಸ್ತಿಯು ಕಾರ್ಟರ್ ಅವರಿಗೆ ದೊರೆತಿದೆ.ಬೆಸ್ಟ್ ಸಿನಿಮಾಟೋಗ್ರಫಿ ಕೆಟಗರಿಯಲ್ಲಿ James Friend ಅವರು ಗೆದ್ದಿದ್ದಾರೆ.
ALL QUIET ON THE WESTERN FRONT ಚಿತ್ರಕ್ಕಾಗಿ ಈ ಆಸ್ಕರ್ ದೊರೆತಿದೆಬೆಸ್ಟ್ ಡಾಕ್ಯುಮೆಂಟರಿ ಕೆಟಗರಿಯಲ್ಲಿ ನವಲ್ನಿ ಚಿತ್ರವು ಗೆದ್ದಿದೆ. ಭಾರತದ ಆಲ್ ದಟ್ ಬ್ರೆತ್ಸ್ ಚಿತ್ರಕ್ಕೆ ನಿರಾಸೆ.
ಬೆಸ್ಟ್ ಸಪೋರ್ಟಿಂಗ್ ಫೀಮೆಲ್ ಕೆಟಗರಿಯಲ್ಲಿ ಜೇಮೀ ಲೀ ಕರ್ಟಿಸ್ ಪ್ರಶಸ್ತಿ ಗೆದ್ದಿದ್ದಾರೆ( Everything Everywhere All at Once )