ಲಾಸ್ ಏಂಜಲೀಸ್, ಅಮೆರಿಕ: ಆಸ್ಕರ್ 2023 (Oscars 2023) ಘೋಷಣೆಯಾಗಿದೆ. ಬೆಸ್ಟ್ ಒರಿಜಿನಲ್ ಕೆಟಗರಿಯಲ್ಲಿ ಸ್ಪರ್ಧಿಸಿದ್ದ ಭಾರತದ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು…(Naatu Naatu…) ಗೀತೆಯು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಎಸ್ ಎಸ್ ರಾಜಮೌಳಿ ನಿರ್ದೇಶನ ಹಾಗೂ ರಾಮ ಚರಣ್ ಮತ್ತು ಜೂ. ಎನ್‌ಟಿಆರ್ ಚಿತ್ರವು ಇತಿಹಾಸವನ್ನು ಸೃಷ್ಟಿಸಿದೆ. ಆಸ್ಕರ್ ಪ್ರಶಸ್ತಿ ಗೆದ್ದ ಸಂಪೂರ್ಣವಾದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಆರ್‌ಆರ್‌ಆರ್(RRR) ಚಿತ್ರವು ಪಾತ್ರವಾಗಿದೆ. ಬೆಸ್ಟ್ ಡ್ಯಾಕುಮೆಂಟರಿ ಶಾರ್ಟ್ ಫಿಲಮ್ ಕೆಟಗರಿಯಲ್ಲಿ ದಿ ಎಲಿಫೆಂಟ್ ವಿಸ್ಪರ್ಸ್(the elephant whisperers) ಆಸ್ಕರ್ ಗೆದ್ದಿದೆ.
Everything Everywhere All at Once ಚಿತ್ರದ ಅಭಿನಯಕ್ಕಾಗಿ ಕೆ ಹುಯ್ ಕ್ವಾನ್ ಅವರಿಗೆ ಬೆಸ್ಟ್ ಸಪೋರ್ಟಿಂಗ್ ಕೆಟಗರಿಯಲ್ಲಿ ಪ್ರಶಸ್ತಿ ಬಂದಿದೆ
ಬೆಸ್ಟ್ ಸಪೋರ್ಟಿಂಗ್ ನಟ ಪ್ರಶಸ್ತಿ ಕೆ ಹುಯ್ ಕ್ವಾನ್(Ke huy quan) ಗೆದ್ದುಕೊಂಡಿದ್ದಾರೆ.
ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ.
ಆಸ್ಕರ್ ಗೆಲ್ಲುವ ವಿಶ್ವಾಸವಿದೆ – ರಾಮಚರಣ್
ಭಯ ಮತ್ತು ನರ್ವಸ್ ಆಗ್ತಾಯಿದೆ. ಇಲ್ಲಿಯವರೆಗೂ ಬಂದಿದ್ದು ಖುಷಿ ಮತ್ತು ಹೆಮ್ಮೆಯಾಗ್ತಿದೆ. ಗೋಲ್ಡನ್ ಗ್ಲೋಬ್ ನಂತ್ರ ಆಸ್ಕರ್ ಗೆಲ್ತಿವಿ ಅನ್ನೋ ವಿಶ್ವಾಸವಿದೆ. ಭಾರತದ ಎಲ್ಲಾ ಪ್ರೇಕ್ಷಕರಿಗೆ ಧನ್ಯವಾದಗಳು
ನಾಟು ನಾಟು ಹಾಡನ್ನು ಹಾಡಿದ್ದು ಯಾರು?
RRR ಚಿತ್ರದ ನಾಟು ನಾಟು ಹಾಡನ್ನು ಗಾಯಕರಾದ ಕಾಲ ಭೈರವ್ ಮತ್ತು ರಾಹುಲ್ ಸಿಪ್ಲಿಗಂಜ್ ಅವರು ಹಾಡಿದ್ದಾರೆ. ಅವರು ಹಾಡಿದ ಈ ಹಾಡು ಈಗ ಆಸ್ಕರ್ ಅಂಗಳದಲ್ಲಿದೆ. ಅಲ್ಲದೇ ಬೆಸ್ಟ್ ಕೆಟಗರಿಯಲ್ಲಿ ಪ್ರಶಸ್ತಿ ಗೆಲ್ಲುವ ಫೆವರೀಟ್ ಆಗಿದೆ.