ಚೆನ್ನೈ: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ನೌಕರರಿಗೆ ಬೋನಸ್ ಖುಷಿ ಶುರುವಾಗುತ್ತದೆ. ಬಹಳಷ್ಟು ಕಂಪನಿಗಳು, ಅಂಗಡಿಗಳ ಮಾಲೀಕರು, ವ್ಯಾಪಾರಸ್ಥರು ತಮ್ಮ ನೌಕರರಿಗೆ ಬೋನಸ್ ಘೋಷಿಸುತ್ತಾರೆ. ಅದೇ ರೀತಿ ಚೆನ್ನೈನಲ್ಲಿ ಚಿನ್ನಾಭರಣ ಅಂಗಡಿ ಮಾಲೀಕರೊಬ್ಬರು ತಮ್ಮ ಸಿಬ್ಬಂದಿಗೆ ದುಬಾರಿ ಗಿಫ್ಟ್ (Car, Bike Gifts) ನೀಡಿ ಸುದ್ದಿಯಲ್ಲಿದ್ದಾರೆ.
ತಮ್ಮ ಚಿನ್ನಾಭರಣ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಾರು ಮತ್ತು ಬೈಕ್ ಗಿಫ್ಟ್ ನೀಡಿ ಗಮನ ಸೆಳೆದಿದ್ದಾರೆ. 10 ನೌಕರರಿಗೆ ಕಾರ್ ಗಿಫ್ಟ್ ನೀಡಿದ್ದರೆ, 20 ನೌಕರರಿಗೆ ಬೈಕ್ ಗಿಫ್ಟ್ ಕೊಟ್ಟಿದ್ದಾರೆ. ಅಂದ ಹಾಗೆ, ಈ ಗಿಫ್ಟ್ ನೀಡಿದ ವ್ಯಕ್ತಿಯ ಹೆಸರು ಜಯಂತಿ ಲಾಲ್. ತಮ್ಮ ವ್ಯಾಪಾರಕ್ಕೆ ಸಿಬ್ಬಂದಿ ಸಪೋರ್ಟ್ ಆಗಿ ನಿಂತಿರುವುದನ್ನು ಜಯಂತಿ ಲಾಲ್ ಹೊಗಳಿದ್ದಾರೆ. ನನ್ನ ಎಲ್ಲ ಏಳು ಬೀಳುಗಳ ಜತೆ ಅವರಿದ್ದಾರೆ. ನನ್ನ ಸೋಲು ಗೆಲುವಿನಲ್ಲಿ ನನ್ನ ಸಿಬ್ಬಂದಿ ಸಮಪಾಲು ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಅವರು ಇದೀ ರೀತಿ ದುಬಾರಿ ಗಿಫ್ಟ್ ನೀಡಿ ಸುದ್ದಿಯಾಗಿದ್ದರು. ಚಲನಿ ಜೆವೆಲ್ಲರಿ ಅಂಗಡಿಯ ಮಾಲೀಕರಾಗಿರುವ ಜಯಂತಿ ಲಾಲ್ ಅವರು ಈ ಮೊದಲು 8 ಕಾರು ಮತ್ತು 18 ಬೈಕ್‌ಗಳನ್ನು ತಮ್ಮ ನೌಕರರಿಗೆ ನೀಡಿದ್ದರು .
ಅವರು ಕೇವಲ ಸಿಬ್ಬಂದಿ ಅಲ್ಲ. ನಮ್ಮ ಕುಟುಂಬದ ಸದಸ್ಯರು. ನನ್ನ ಕುಟುಂಬದ ಸದಸ್ಯರ ರೀತಿಯಲ್ಲೇ ಅವರನ್ನು ಕಾಣುತ್ತೇನೆ. ಪ್ರತಿ ಮಾಲೀಕನು ತನ್ನ ನೌಕರರು, ಸಿಬ್ಬಂದಿಯನ್ನು ಗೌರವಿಸಬೇಕು. ಅವರಿಗೆ ದುಬಾರಿ ಗಿಫ್ಟ್ ಕೊಡಬೇಕು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ | ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್: ಅಕ್ಟೋಬರ್‌ನಲ್ಲಿ 7ನೇ ವೇತನ ಆಯೋಗ ರಚನೆ ಎಂದ ಸಿಎಂ