ನವದೆಹಲಿ: ಭಾರತ ಹಾಗೂ ಹಿಂದೂ ಸಮುದಾಯದ ವಿರುದ್ಧ ಉಗ್ರತ್ವವನ್ನು ಹೆಚ್ಚಿಸುವುದಕ್ಕಾಗಿ ಪಾಕಿಸ್ತಾನ ಹೊಸ ಗೇಮ್ ಪ್ಲ್ಯಾನ್ (Pak New Plan) ಮಾಡಿಕೊಂಡಿರುವ ಸಂಗತಿಯು ಇದೀಗ ಬಹಿರಂಗವಾಗಿದೆ. ಖಲಿಸ್ತಾನ್ ಪರ ಉಗ್ರ ಸಂಘಟನೆಗಳು ಪಾಕಿಸ್ತಾನದ ಗುರುದ್ವಾರಗಳಲ್ಲಿ ಆಶ್ರಯ ಪಡೆದುಕೊಳ್ಳಲಾರಂಭಿಸಿವೆ. ಆ ಮೂಲಕ ಭಾರತದ ವಿರುದ್ಧ ಖಿಲಿಸ್ತಾನ್ ಪರ ಉಗ್ರರಿಗೆ ಪಾಕ್ ನೆರವು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
ಗುಪ್ತಚರ ಮಾಹಿತಿಗಳ ಪ್ರಕಾರ, ಶ್ರೀನಗರ-ಲಾಹೋರ್ ವಿಮಾನ ಹೈಜಾಕರ್ ರವೀಂದ್ರ ಸಿಂಗ್ ಪಿಂಕಾ ಮತ್ತು ಆತನ ಸಂಗಾತಿಗಳು ಲಾಹೋರ್‌ನಲ್ಲಿರುವ ಪಂಜಾ ಸಾಹೇಬ್ ಗುರುದ್ವಾರ್‌ನಲ್ಲಿ ಅಕಾಲ್ ತಖ್ತ್ ಜಾಥೇದಾರ್ ಗಿಯಾನಿ ಹರ್‌ಪ್ರೀತ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ಪಾಕಿಸ್ತಾನವು ಖಲಿಸ್ತಾನಿ ಉಗ್ರರಿಗೆ ಗುರುದ್ವಾರ್‌ಗಳಲ್ಲಿ ಆಶ್ರಯ ನೀಡುವ ಮೂಲಕ, ಭಾರತೀಯ ಸಿಖ್ ಭಕ್ತರಲ್ಲಿ ಭಾರತದ ವಿರುದ್ಧ ದ್ವೇಷ ಭಾವನೆ ಬಿತ್ತು ಕೆಲಸವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.
ಲಾಹೋರ್‌ನಲ್ಲಿ ಈ ರೀತಿಯ ಮತೀಯ ಉಗ್ರವಾದಿಗಳು ಎಲ್ಲೆಲ್ಲೂ ಕಂಡು ಬರುತ್ತಿದ್ದಾರೆ. ಗುರುದ್ವಾರಗಳಲ್ಲಿ ದರ್ಶನಕ್ಕೆ ಬರುವ ಭಾರತೀಯ ಭಕ್ತರನ್ನು ಖಲಿಸ್ತಾನಿ ಉಗ್ರರ ಭೇಟಿ ಮಾಡಿ, ಅವರನ್ನು ಮತೀಯವಾದಿಗಳನ್ನಾಗಿ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಖಲಿಸ್ತಾನಿ ಉಗ್ರರು ಗುರುದ್ವಾರಗಳಿಗೆ ಹೋಗಿ ಮುಖ್ಯಸ್ಥರನ್ನು ಭೇಟಿ ಮಾಡು ವಿಡಿಯೋಗಳು ಈಗಾಗಲೇ ಸಾರ್ವಜನಿಕವಾಗಿದ್ದವು.
ಇದನ್ನೂ ಓದಿ | FATF Grey List | ಬೂದು ಪಟ್ಟಿಯಿಂದ ಪಾಕ್ ಹೊರಗೆ, ವಿಶ್ವಸಂಸ್ಥೆಯಲ್ಲಿ ಭಾರತ ಆಕ್ಷೇಪ, ಉಗ್ರ ದಾಳಿ ಸಾಧ್ಯತೆ ಎಂದು ಎಚ್ಚರಿಕೆ